ಲೋಕದರ್ಶನ ವರದಿ
ಇಂಡಿ,7 : ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ, ಇಂಡಿ ಮತ್ತು ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟ್ಡ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಆಡಳಿತ ಮಂಡಳಿ ಸದಸ್ಯ ಸುರೇಶ ಗೊಣಸಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರೈತರು ಸಾವಯವ ಕೃಷಿ ಆಳವಡಿಸುವ ಮೂಲಕ ಮಣ್ಣಿನ ಆರೋಗ್ಯ ಕಾಪಾಡಲು ಒತ್ತು ನೀಡಬೇಕು ಮತ್ತು ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣು ಆರೋಗ್ಯ ಚೀಟಿಯಲ್ಲಿ ಶಿಫಾರಸ್ಸು ಮಾಡಿರುವಷ್ಟೇ ಗೊಬ್ಬರವನ್ನು ಬಳಸಿ ಎಂದರು.
ಇಂಡಿ ತಾಲೂಕಿನ ಸಹಾಯಕ ಕೃಷಿ ನಿದರ್ೇಶಕ ಮಹಾದೇವ ಏವೂರವರು ಮಾತನಾಡಿ ಮಣ್ಣಿನ ಸಂರಕ್ಷಣೆಯ ಬಗ್ಗೆ ಜಾಗೃತಿವಹಿಸಬೇಕು, ಇಲಾಖೆಯಲ್ಲಿ ಮಣ್ಣು ಪರೀಕ್ಷೆ ಮಾಡಿಕೊಡಲಾಗುವುದು ಮತ್ತು ಮಣ್ಣು ಆರೋಗ್ಯ ಚೀಟಿಯನ್ನು ವಿತರಿಸಲಾಗುವುದು ಹೆಚ್ಚಿನ ಮಾಹಿತಿಗೆ ನಿಮ್ಮ ಊರಿನ ಗ್ರಾಮ ಸೇವಕರನ್ನು ಸಂಪಕರ್ಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷರಾದ ಡಾ. ಆರ್. ಬಿ. ನೆಗಳೂರ ರೈತರಿಗೆ ಮಣ್ಣು ಆರೋಗ್ಯ ಚೀಟಿಯ ಮಹತ್ವದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು ಮತ್ತು ವಿಶ್ವ ಮಣ್ಣು ಆರೋಗ್ಯ ದಿನದ ಅಂಗವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ರೈತರಿಗೆ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ, ಇಂಡಿವತಿಯಿಂದ ಉಚಿತ ಮಣ್ಣು ಪರೀಕ್ಷೆ ಮಾಡಿಕೊಡಲಾಗುವುದು ಎಂದರು.
ಹಿರಿಯ ವಿಜ್ಞಾನಿ ಹಾಗು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಆರ್. ಬಿ. ನೆಗಳೂರ, ಸಹಾಯಕ ಕೃಷಿ ನಿದರ್ೇಶಕ ಮಹಾದೇವ ಏವೂರ, ಅಬ್ದುಲ್ ರಜಾಕ, ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟ್ಡ್ ವಿಜಯಪುರದ ಸುನೀಲ್ ಗಡೆದ್, ಸಂತೋಷ ಶಿಂದೆ, ಡಾ. ಸೈಯದಾ ಸಮೀನ ಅಂಜುಮ್ ಇದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಮಣ್ಣು ಆರೋಗ್ಯ ಚೀಟಿಯನ್ನು ಸುಮಾರು 20 ರೈತರಿಗೆ ವಿತರಿಸಲಾಯಿತು. ಹೀನಾ ಎಮ್.ಎಸ್. ವಿಜ್ಞಾನಿಗಳು (ತೋಟಗಾರಿಕೆ) ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಹಳ್ಳಿಗಳಿಂದ ಸುಮಾರು 75 ರೈತರು ಭಾಗವಹಿಸಿ ಮಣ್ಣು ಪರೀಕ್ಷೆ, ಮಣ್ಣು ಆರೋಗ್ಯ ಚೀಟಿ ಮತ್ತು ಮಣ್ಣು ಮಾದರಿ ಸಂಗ್ರಹಿಸುವುದನ್ನು ಪ್ರಾತ್ಯಕ್ಷಿಕೆಯ ಮುಖಾಂತರ ತಿಳಿದುಕೊಂಡರು.