ಡಾ.ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ

Tribute to Dr. Manmohan Singh

ಡಾ.ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ  

ಮುಂಡರಗಿ : ಡಾ.ಮನಮೋಹನ್ ಸಿಂಗ್ ಭಾರತ ದೇಶದ ಪ್ರಧಾನಿಯಾಗಿ ಉತ್ತಮ ಆಡಳಿತ ನಡೆಸಿರುವುದಲ್ಲದೇ ದೇಶದ ಹಣಕಾಸು ಸಚಿವರಾಗಿ ಉದಾರಿಕರಣ, ಖಾಸಗಿಕರಣ, ಜಾಗತೀಕರಣ ನೀತಿಯನ್ನು ಜಾರಿಗೆ ತರುವ ಮೂಲಕ ದೇಶದ ಅಭಿವೃದ್ದಿಗಾಗಿ ಅತ್ಯುತ್ತಮ ಆಡಳಿತ ಹಾಗೂ ಆರ್ಥಿಕ ಸಂಕಷ್ಟೆಯಲ್ಲಿ ಸ್ಥಿರತೆಯನ್ನು ಕಂಡ ದೇಶದ ಶ್ರೇಷ್ಠ ಆರ್ಥಿಕ ತಜ್ಞನನ್ನು ಕಳೆದುಕೊಂಡಿದ್ದು ನೋವಿನ ಸಂಗತಿ ಎಂದು ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್‌.ಗೌಡರ್ ಹೇಳಿದರು. 

ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ದೇಶದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ಅವರು, 2004 ರಿಂದ ಈ ಭಾರತ ದೇಶದ ಪ್ರಧಾನಿಯಾದ ನಂತರ ಆಹಾರ ಭದ್ರಕ್ಕಾಗಿ ಮಾಹಿತಿ ಹಕ್ಕು, ಆಧಾರ ಕಾರ್ಡ್‌, ಆಹಾರ ಭದ್ರತೆ ಕಾಯ್ದೆ, ಮಹಾತ್ಮ ಗಾಂದೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಕಡ್ಡಾಯ ಶಿಕ್ಷಣ ಇತರೆ ಕ್ರಾಂತಿಕಾರಕ ಹೆಜ್ಜೆಗಳನ್ನು ತಮ್ಮ ಆಡಳಿತದ ಅವಧಿಯಲ್ಲಿ ಜಾರಿಮಾಡಿದ್ದಾರೆ. ತಾವು ಪ್ರಧಾನಮಂತ್ರಿಯಾದಾಗ ಸರಳ ಸಜ್ಜನಿಕೆಯಿಂದ ಮಾತು ಕಡಿಮೆ, ಕೆಲಸ ಬಹಳ ಎನ್ನುವ ಸಂಕಲ್ಪದೊಂದಿಗೆ ಅವರು ಆಡಳಿತ ಮಾಡಿದರು. 

ಜವಾಹರಲಾಲ್ ನೆಹರು ಬಳಿಕ ಪ್ರಧಾನಿಯಾಗಿ ಐದು ವರ್ಷ ಪೂರ್ಣಾವಧಿ ಪೂರೈಸಿದ ಬಳಿಕ ಮರು ಆಯ್ಕೆಗೊಂಡ ಮೊದಲ ಪ್ರಧಾನಿ ಎನ್ನುವ ಖ್ಯಾತಿಯೂ ಮನಮೋಹನ್‌ಸಿಂಗ್‌ರದು. ಇನ್ನು 90 ರ ದಶಕದಲ್ಲಿ ವಿತ್ತ ಸಚಿವರಾಗಿ ಅವರು ಕೈಗೊಂಡ ಆರ್ಥಿಕ ಉದಾರೀಕರಣ ನೀತಿ ಮತ್ತು ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಲು ಯತ್ನಿಸಿದ್ದರು. 

ಈ ವೇಳೆ ಎ.ಕೆ.ಬೆಲ್ಲದ, ನೀಲಪ್ಪ ಕರಿಗಾರ, ಶೇಖಣ್ಣ ಜುಟ್ಲಣ್ಣವರ, ಆನಂದ ರಾಮೇನಹಳ್ಳಿ, ಶಿವಾನಂದ ನವಲಗುಂದ, ಡಿ.ಜಿ.ಪೂಜಾರ, ವೀರಯ್ಯ ಮುತ್ತಿನಪೆಂಡಿಮಠ, ಮುದಿಯಪ್ಪ ಗದಗಿನ, ವಿರುಪಾಕ್ಷಪ್ಪ ಲಕ್ಕುಂಡಿ, ಕೊಟ್ರೇಶ ತಿಪ್ಪಾಪೂರ, ವೆಂಕಟೇಶ ಗುಗ್ಗರಿ, ಅಡಿವೆಪ್ಪ ಚಲವಾದಿ, ರುದ್ರ​‍್ಪ ಬನ್ನಿಕೊಪ್ಪ, ರಾಮಣ್ಣ ಇಲ್ಲೂರ, ಪ್ರಶಾಂತಗೌಡ ಪಾಟೀಲ್, ಮಲ್ಲೇಶ ಕುಂಬಾರ ಇತರರು ಇದ್ದರು.