ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಆಂದೋಲನ ಅಭಿಯಾನ ಪ್ರಯುಕ್ತ ಕ್ಷಯರೋಗಿಗಳಿಗೆ ಚೈತನ್ಯ ಪೌಷ್ಠಿಕ ಪೂರಕ ಆಹಾರದ ಕಿಟ್ ವಿತರಣೆ

Distribution of Chaitanya Nutritional Supplement Food Kits to TB Patients for National Tuberculosis

ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಆಂದೋಲನ ಅಭಿಯಾನ ಪ್ರಯುಕ್ತ ಕ್ಷಯರೋಗಿಗಳಿಗೆ ಚೈತನ್ಯ ಪೌಷ್ಠಿಕ ಪೂರಕ ಆಹಾರದ ಕಿಟ್ ವಿತರಣೆ 

ಮುಂಡರಗಿ  27: ಕ್ಷಯ ಮುಕ್ತ ರಾಷ್ಟ್ರ ನಿರ್ಮಿಸಲು ಪ್ರತಿಯೊಬ್ಬರೂ ಶ್ರಮಿಸೋಣ ಎಂದು ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು. 

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನೆ ಆಂದೋಲನ ಅಭಿಯಾನ ಪ್ರಯುಕ್ತ ಕ್ಷಯರೋಗಿಗಳಿಗೆ ಚೈತನ್ಯ ಪೌಷ್ಠಿಕ ಪೂರಕ ಆಹಾರದ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕ್ಷಯ ರೋಗಿಗಳಿಗೆ ಕಿಟ್ ವಿತರಿಸುತ್ತಿರುವುದು ವಿಶೇಷವಾದ ಕಾರ್ಯವಾಗಿದೆ. ಈ ಹಿಂದೆ ಕ್ಷಯ ರೋಗದ ಬಗ್ಗೆ ಭಯದ ವಾತಾವರಣ ಇತ್ತು. ಅದಕ್ಕೆ ರೋಗಿಗಳು ಭಯಪಡದೇ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಓಷಧಿಗಳ ಸೌಲಭ್ಯವನ್ನು ಪಡೆಯುವ ಜೊತೆಗೆ ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯಕರ ಜೀವನ ನಡೆಸಬೇಕು. ಆರೋಗ್ಯ ಇಲಾಖೆಯ ಪ್ರತಿಯೊಬ್ಬ ಆಶಾಗಳ ಶ್ರಮದಿಂದ ಇಂದು ದೇಶದ ಜನರ ಆರೋಗ್ಯವಂತರಾಗಿ ಸುಧಾರಣೆ ಆಗುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ವೈದ್ಯರೊಂದಿಗೆ ಸಹಕರಿಸಿ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಹಾಗೂ ಎಚ್‌ಐವಿ ರೋಗಿಗೂ ಸರ್ಕಾರದ ಯೋಜನೆ ಮೂಲಕ ಚಿಕಿತ್ಸೆ ದೊರೆಯುತ್ತಿದೆ. ಸಾರ್ವಜನಿಕರು ಸದುಪಯೋಗ ಪಡೆಯಬೇಕು. ಹುಟ್ಟು ಹಬ್ಬದ ಪ್ರಯುಕ್ತ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ಟುಗಳನ್ನು ನೀಡಿದ ಹೇಮಗೀರೀಶ ಹಾವಿನಾಳ ಅವರಿಗೆ ಬಡವರ ಆಶಿರ್ವಾದ ಸಲ್ಲಬೇಕು ಎಂದು ಹಾರೈಸಿದರು. 

ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹೇಮಗೀರೀಶ ಹಾವಿನಾಳ ಮಾತನಾಡಿ, ಜೀವನದಲ್ಲಿ ಮನುಷ್ಯನಿಗೆ ಆರೋಗ್ಯ ತುಂಬಾ ಮುಖ್ಯವಾಗಿದ್ದು ಎಷ್ಟೇ ಶ್ರೀಮಂತನಾಗಿ ದುಡ್ಡು ಹೊಂದಿದ್ದರು ಅನಾರೋಗ್ಯಕ್ಕೆ ತುತ್ತಾದಾಗ ಎಲ್ಲರು ಅಸಹಾಯಕರಾಗುತ್ತರೆ. ಹಾಗಾಗಿ ಉತ್ತಮ ಆರೋಗ್ಯ ಹೊಂದಿದ್ದರೆ ಜೀವನದಲ್ಲಿ ಏನನ್ನಾದರು ಸಾಧಿಸಬಹುದು ಎಂದು ಹೇಳಿದರು. 

ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ.ಚಂದ್ರು ಲಾಮಾಣಿ ಅವರು ಜನರ ಅಪೇಕ್ಷೆ ಇಂದು ಶಾಸಕರಾಗಿ ಸದಾ ಬಡವರ ಬಗ್ಗೆ ಕಾಳಜಿ ಹೊಂದಿ ಕೊಠಡಿಗಳ ಸುಧಾರಣೆ ಸೇರಿದಂತೆ ಕ್ಷೇತ್ರ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಹಾಗೇಯೇ ತಮ್ಮನ್ನು ಆರೋಗ್ಯ ರಕ್ಷ ಸಮಿತಿಯ ಸದಸ್ಯರಾಗಿ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಶಕ್ತಿ ತುಂಬಿದ್ದಾರೆ. ಹಾಗೇ ಇಂದು ವಿಹಾನ ಆಸ್ಪತ್ರೆಯಿಂದ ಹೃದಯ ತಪಾಸಣೆ. ದೃಷ್ಟಿ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಾರ್ವಜನಿಕರು ಅದರೆ ಉಪಯೋಗ ಪಡೆಯಬೇಕು ಎಂದು ಹೇಳಿದರು. 

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಅರುಂದತಿ ಕುಲಕರ್ಣಿ ಮಾತನಾಡಿ, 100 ದಿನದ ಕ್ಷಯರೋಗ ನಿರ್ಮೂಲನೆ ಅಭಿಯಾನ ಯಶಸ್ವಿಯಾಗಿ ಮುಂದುವರೆಯುತ್ತಿದೆ. ವಿಶ್ವದೊಳಗೆ ಅತೀ ಹೆಚ್ಚು ಕ್ಷಯ ರೋಗಿಗಳು ಭಾರತದಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕ್ಷಯರೋಗ ಮುಕ್ತ ಭಾರತ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಕ್ಷಯರೋಗಿಗಳು ಯಾವುದೇ ಭಯಪಡೆದೇ ಉಚಿತವಾಗಿ ದೊರೆಯುವ ಚಿಕಿತ್ಸೆ ಪಡೆಯಬೇಕು ಎಂದು ಕ್ಷಯರೋಗದ ಗುಣಲಕ್ಷಣಗಳನ್ನು ತಿಳಿಸಿದರು. 

ಮುಖಂಡ ಕುಮಾರಸ್ವಾಮಿ ಹಿರೇಮಠ, ಆರೋಗ್ಯ ನೀರೀಕ್ಷಣಾಧಿಕಾರಿ ಎ.ಎ.ಅಳವಂಡಿ ಅವರು ಮಾತನಾಡಿದರು. ಜಯಶ್ರೀ ಅಳವಂಡಿ ತಂಡದಿಂದ ಪ್ರಾರ್ಥನೆ ಗೀತೆ ಜರುಗಿತು. ಆರೋಗ್ಯ ಶಿಕ್ಷಣಾಧಿಕಾರಿ ಎಮ್‌.ಎಸ್‌.ಸಜ್ಜನ್ ಅವರು ಸ್ವಾಗತಿಸಿದರು.  ಈರಮ್ಮ ಕುಂದಗೋಳ ಕಾರ್ಯಕ್ರಮ ನಿರೂಪಿಸಿದರು. 

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ಜ್ಯೋತಿ ಹಾನಗಲ್, ಅಂದಪ್ಪ ಉಳ್ಳಾಗಡ್ಡಿ, ಜಾನು ಲಮಾಣಿ, ತಾಲೂಕು ವೈಧ್ಯಾಧಿಕಾರಿ ಡಾ.ಲಕ್ಷ್ಮಣ್ಣ ಪೂಜಾರ, ಪುರಸಭೆ ಸದಸ್ಯರು ಸೇರಿದಂತೆ ಗಣ್ಯರು ಹಾಜರಿದ್ದರು.