ಹೊನ್ನಾವರ 29: ಇಲ್ಲಿಯ
ಕಾಸರಕೋಡು ಜನತಾವಿದ್ಯಾಲಯ ದಲ್ಲಿ ಲಯನ್ಸ್ ಕ್ಲಬ್ ನಿಂದ ವಿಶ್ವಸಂಸ್ಥೆ ದಿನಾಚರಣೆ (ಯು ಎನ್ ಓ ಡೇ) ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಯಿತು.
ಉಪನ್ಯಾಸಕ ಜಿ.ಎಸ್.ಹೆಗಡೆ ಇವರು ಮಾತನಾಡಿ 2ನೇಯ
ಮಹಾಯುದ್ಧದಲ್ಲಿ ಅನೇಕ ರಾಷ್ಟ್ರಗಳು ಅನುಭವಿಸಿದ ಜೀವ , ಆಸ್ತಿ ಪಾಸ್ತಿಗಳು ಗಳ ಹಾನಿ ಮನಗಂಡ ವಿಶ್ವ
ಪ್ರಮುಖ ರಾಷ್ಟ್ರಗಳು ವಿಶ್ವಶಾಂತಿಗಾಗಿ ಸ್ಥಾಪಿಸಿದ ವಿಶ್ವಸಂಸ್ಥೆಯ ದ್ಯೇಯ ಉದ್ದೇಶ , ಕಾರ್ಯಕ್ರಮಗಳ
ಕುರಿತು ವಿದ್ಯಾಥರ್ಿಗಳಿಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ ಲಯನ್ಸ ಕ್ಲಬ್ ಅಧ್ಯಕ್ಷ
ರಾಜೇಶ ಸಾಲೇಹಿತ್ತಲ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಾಧ್ಯಾಪಕಿ ಫಿಲೋಮಿನ್ ರೊಡ್ರಿಗ್ಸ್ ಸ್ವಾಗತಿಸಿದರು. ಶಿಕ್ಷಕ ಅಶೋಕ
ಜೋಸೆಫ್ ವಂದಿಸಿದರು.
ಶಿಕ್ಷಕ ವಿನಾಯಕ ಶೆಟ್ಟಿ ನಿರೂಪಿಸಿದರು. ಲಯನ್ಸ್ ಕಾರ್ಯದಶರ್ಿ ಪ್ರೊ. ಸುರೇಶ ಎಸ್. ಡಿಸ್ಟಿಕ್ ಚೆರೆಮನ್ ಎಸ್.ಜಿ.ಭಟ್ಟ ಮತ್ತು ಮಂಜು ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.