ಲೋಕದರ್ಶನ ವರದಿ
ಬೆಳಗಾವಿ : ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಇಂಟರನೆಟ್ಗಳ ಅತಿಯಾದ ಉಪಯೋಗದಿಂದ ಮಾನಸಿಕ ಅಸ್ವಸ್ಥರಾಗುತ್ತಿರುವದು ಆತಂಕಕಾರಿ ಬೆಳವಣಿಗೆಯಾಗಿದೆ. ಅದರಲ್ಲೂ ಪ್ರತಿ ವರ್ಷ 4 ವಯಸ್ಕರಲ್ಲಿ ಒಬ್ಬ ಹಾಗೂ 10 ಮಕ್ಕಳಲ್ಲಿ ಒಂದು ಮಗು ಮಾನಸಿಕ ಅಸ್ವಸ್ಥತೆಯೆಡೆಗೆ ಜಾರುತ್ತಿರುವದು ನೋಡಿದರೆ ಮುಂದೊಂದು ದಿನ ಇದು ಇಡೀ ಮನುಕುಲಕ್ಕೆ ಪರಿಹರಿಸಲಾಗದ ಸಮಸ್ಯೆಯಾಗಬಹುದು ಎಂದು ಯು.ಎಸ್.ಎಂ.ಕೆ.ಎಲ್.ಇ ನಿದರ್ೇಶಕ ಡಾ.ಎಚ್.ಬಿ ರಾಜಶೆಖರ ಹೇಳಿದರು.
ಇಂದು ಕೆ.ಎಲ್.ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರವನ್ನು ಉಧ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನಿಗೆ ತನ್ನದೆ ಆದ ಬಯಕೆಗಳಿರುತ್ತವೆ ಮತ್ತು ಅದಕ್ಕೆ ತಕ್ಕಂತೆ ಸಮಸ್ಯೆಗಳು ಇರುತ್ತವೆ ಅವುಗಳನ್ನು ಬದಿಗಿಟ್ಟು ಭವಿಷ್ಯದ ಕಡೆಗೆ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದ ಮನಃಶಾಸ್ತ್ರಜ್ಞೆ ಡಾ. ಅಶ್ವಿನಿ ಪದ್ಮಶಾಲಿ ಈ ವರ್ಷದ ಮಾನಸಿಕ ಆರೋಗ್ಯ ದಿನಾಚರಣೆಯ ಧ್ಯೇಯ ವಾಕ್ಯವಾದ ಯುವ ಜನತೆ ಹಾಗೂ ಜಾಗತಿಕ ಬದಲಾವಣೆಯಲ್ಲಿ ಮಾನಸಿಕ ಆರೋಗ್ಯ ಎಂಬ ವಿಷಯದ ಮೇಲೆ ಮಾತನಾಡುತ್ತ ಇಂದಿನ ಯುವ ಜನತೆಯು ನಾಳಿನ ಪ್ರಜೆಗಳಾಗಿದ್ದು ಅವರ ಈ ಹದಿವಯಸ್ಸಿನಲ್ಲಿ ಗ್ರಹಿಕೆ ಕಲಿಕೆ ತಿಳುವಳಿಕೆ ನೆನಪು ಮುಂತಾದವುಗಳ ಬೆಳವಣಿಗೆಯಾಗುವದರಿಂದ ಈ ವಯಸ್ಸಿನಲ್ಲಿಯೇ ಪಾಲಕರ ಅತ್ಯುತ್ತಮ ಪೋಷನೆ, ಕಾಳಜಿ ಮುಂತಾದ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ ಇದರ ಬಗ್ಗೆ ಆದಷ್ಟು ಗಮನವಿರಲಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಕುಮಾರಿ. ವೀಣಾ ನಿರೂಪಿಸಿದರು, ದೀಪಾ ತಿಗಡಿ ಸ್ವಾಗತಿಸಿದರು ಮಲ್ಲಿಕಾಜರ್ುನ ವಂದಿಸಿದರು.
ಈ ಸಂದರ್ಭದಲ್ಲಿ ಮಾನಸಿಕ ವಿಭಾಗದ ಮುಖ್ಯಸ್ಥೆ, ಡಾ ಸುಚೇತಾ ವಾಗಮಾರೆ, ಡಾ. ಆಂಟನಿಯೋ ಕರವಾಲೊ, ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ ಹಾಗೂ ಜಿ.ಎನ್.ಎಂ ಕಾಲೇಜಿನ ನಸರ್ಿಂಗ ವಿಧ್ಯಾಥರ್ಿಗಳು, ಆರೋಗ್ಯ ಸಹಾಯಕಿ ಕೋಸರ್ಿನ ತರಬೇತಿ ಪಡೆಯುತ್ತಿರುವ ವಿಧ್ಯಾಥರ್ಿಗಳು, ಮಲೇಶಿಯನ್ ವೈದ್ಯವಿದ್ಯಾಥರ್ಿಗಳು, ಹಾಗೂ ಕೆ ಎಲ್ ಇ ಬಿ ಎಮ್ ಕಂಕಣವಾಡಿ ಆಯರ್ುವೇದಿಕ ಕಾಲೇಜಿನ 60 ಕ್ಕೂ ಅಧಿಕ ವೈದ್ಯವಿದ್ಯಾಥರ್ಿಗಳು, ಆಸ್ಯತ್ರೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.