ಬೆಳಗಾವಿ 13: ಕೆಎಲ್‌ಇ ವೇಣುಧ್ವನಿ 90.4 ಎಫ್. ಎಮ್. ಕೇಂದ್ರ ಬೆಳಗಾವಿ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಗುರುವಾರ ದಿನಾಂಕ 13ನೆ ಮಾರ್ಚ್ 2025 ರಂದು ಬೆಳಿಗ್ಗೆ 10 ರಿಂದ 11 ಗಂಟೆ ವರೆಗೆ ವಿಶ್ವ ಗ್ಲುಕೋಮಾ ಸಪ್ತಾಹ ಕುರಿತು ನೇರ ಪೋನ್-ಇನ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಳಗಾವಿಯ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ಶಸ್ತ್ರ ಚಿಕಿತ್ಸಕ ಮತ್ತು ಕೆಎಲ್‌ಇ ನೇತ್ರ ಭಂಡಾರದ ಮುಖ್ಯಸ್ಥ ಡಾ. ಅರವಿಂದ ತೆನಗಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶ್ವ ಗ್ಲುಕೋಮಾ ಸಪ್ತಾಹದ ಕುರಿತು ಜಾಗೃತಿ ಮೂಡಿಸಿದರು ಮತ್ತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ. ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.