ಮಕ್ಕಳಿಗಾಗಿ ಆಸ್ತಿ ನಿರ್ಮಿಸದೆ, ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು : ನಾಗಲಿಂಗ ಸ್ವಾಮೀಜಿ

ಮಕ್ಕಳಿಗಾಗಿ ಆಸ್ತಿ ನಿರ್ಮಿಸದೆ, ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು : ನಾಗಲಿಂಗ ಸ್ವಾಮೀಜಿ Instead of building assets for children, children should be made assets by providing quality educati

ಉಗರಗೋಳ 17 :  ಪಾಲಕರು ತಮ್ಮ ಮಕ್ಕಳಿಗಾಗಿ ಆಸ್ತಿ ನಿರ್ಮಿಸದೆ, ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಚಿಕ್ಕುಂಬಿಯ ಅಜಾತ ನಾಗಲಿಂಗಮಠದ ಪೀಠಾಧಿಪತಿ ಅಭಿನವ ನಾಗಲಿಂಗ ಸ್ವಾಮೀಜಿ ಕರೆಕೊಟ್ಟರು. 

ಸವದತ್ತಿ ತಾಲೂಕಿನ ದಢೇರಕೊಪ್ಪದಲ್ಲಿ ಹಮ್ಮಿಕೊಂಡಿದ್ದ ರೇಣುಕಾ ದೇವಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಮಹಾನಗರದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಶಿಕ್ಷಣ ದಾಸೋಹ ಮಾಡುತ್ತಿವೆ. ಆದರೆ, ದಢೇರಕೊಪ್ಪದಂಥ ಗ್ರಾಮೀಣ ಭಾಗದಲ್ಲಿ ಬಡ ಜನರಿಗೆ ಕೈಗೆಟುಕುವ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆ ಕಾರ್ಯ ಶ್ಲಾಘನೀಯ ಎಂದರು. 

ರೇಣುಕಾ ಯಲ್ಲಮ್ಮ ದೇವಿ ಅರ್ಚಕರ ಸಂಘದ ಗೌರವಾಧ್ಯಕ್ಷ ಗೋವಿಂದಗೌಡ ತಿಪರಾಶಿ ಮಾತನಾಡಿ, ಇದು ಪೈಪೋಟಿ ಯುಗ. ತಮ್ಮ ಮಕ್ಕಳು ಬದುಕಿನಲ್ಲಿ ಮುಂದೆ ಬರಬೇಕಾದರೆ, ಪಾಲಕರು ಕಡ್ಡಾಯವಾಗಿ ಗುಣಮಟ್ಟದ ಶಿಕ್ಷಣ ಕೊಡುವುದು ಅವಶ್ಯ ಎಂದು ಅಭಿಪ್ರಾಯಪಟ್ಟರು. 

ರೇವಣಸಿದ್ದಪ್ಪ ನಂದೆನ್ನವರ, ಮಾರುತಿ ಶಿಂಧೆ, ಬಿ.ಕೆ.ಹೊಂಗಲ, ಲಕ್ಷ್ಮಿ ಶಿಂಧೆ, ಪರಮೇಶ್ವರ ನಾಗನೂರ, ವೀರೇಶ ನವಲಗುಂದ, ಮಹಾದೇವಪ್ಪ ಸನದಿ, ಸುಭಾಷಚಂದ್ರ ಶಿಂಧೆ, ತುಳಸಪ್ಪ ಅಜ್ಜನ್ನವರ, ಹೊನ್ನಪ್ಪ ಹೊನಮೀಶಿ, ಶಿವಾನಂದ ಹೊರಕೇರಿ, ಶಂಕ್ರ​‍್ಪ ಬೆಳವಣಕಿ ಹಾಗೂ ಶಾಲಾ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.