ಎಸ್ಎಫ್ಸಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಲೋಕದರ್ಶನ ವರದಿ

ಶಿರಹಟ್ಟಿ 11: ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಾನವ ಚಟುವಟಿಕೆಗಳಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಜೂನ್ 5 ರಂದು ವಿಶ್ವಪರಿಸರ ದಿನಾಚರಣೆ ಆಚರಿಸಲಾಗುತ್ತದೆ, ಇಂದು ನೆಟ್ಟ ಸಸಿ ಬೆಳೆದು ಹೆಮ್ಮರವಾದಾಗ ಈ ಆಚರಣೆ ಸಾರ್ಥಕವೆನಿಸುತ್ತದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಎಚ್ ಎಮ್ ದೇವಗಿರಿ ಹೇಳಿದರು.

ಪಟ್ಟಣದ ಸಿ.ಸಿ.ಎನ್. ವಿದ್ಯಾಪ್ರಸಾರ ಸಂಸ್ಥೆಯ ಶ್ರೀ ಫಕೀರ ಚನ್ನವೀರೇಶ್ವರ ಆಂಗ್ಲ ಮಾದ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ಕಾರ್ಯಕ್ರಮದ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿದರು.

ಇನ್ನೋರ್ವ ಅತಿಥಿಗಳಾದ ನಿವೃತ್ತ ಶಿಕ್ಷಕ ಸಿ.ಪಿ ಕಾಳಗಿ ಶಿಕ್ಷಕರು ಮಾತನಾಡಿ, ವಿಶ್ವ ಪರಿಸರ ದಿನವು ನಮ್ಮ ಪರಿಸರವನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ ಹಲವಾರು ಕ್ರಮಗಳು ಮತ್ತು ಜಾಗತಿಕ ತಾಪಮಾನವನ್ನು ಪ್ರಜ್ಞಾವಂತರಾದ ನಾವುಗಳು ಹಸಿರು ಸಿರಿಯನ್ನು ಹೆಚ್ಚಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿ.ಸಿ.ನೂರಶೆಟ್ಟರ ಅವರು ಮಾತನಾಡುತ್ತ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮುಂದಿನ ಪೀಳಿಗೆಯ ಮನುಕುಲ ಸುಸ್ಥಿರ ಬದುಕು ಸಾಗಿಸಲು ಗಿಡಮರಗಳು ಅಗತ್ಯವಾಗಿದ್ದು ಕೇವಲ ಒಂದು ದಿನ ಪರಿಸರ ದಿನಾಚರಣೆ ಆಚರಿಸುವ ಬದಲು ಪ್ರತಿದಿನವು ಪರಿಸರ ದಿನಾಚರಣೆ ಆಚರಿಸಿದರೆ ಸ್ವಾಸ್ಥ್ಯ ಪರಿಸರ ಆನಂದಿಸಬಹುದು ಎಂದರು.

ಕಾರ್ಯಕ್ರಮವನ್ನು ಶಾಲಾ ಆವರಣದ ಬದಿಗಳಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡುವುದರ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಈ ಸಂಸ್ಥೆಯ ಆಡಳಿತಾಧಿಕಾರಿ ಸುನಿತಾ  ಅಂಗಡಿ, ಮುಖ್ಯೋಪಾದ್ಯಾಪಕ ಸಂತೋಷ ಶೆಟ್ಟರ, ಬೊಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಶಿಕ್ಷಕಿ ಕವಿತಾ ಲಮಾಣಿ ಪ್ರಾಥರ್ಿಸಿದರು. ಶಿಕ್ಷಕ ಸಂತೋಷ ಮುಳಗುಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಅಂಜನಾ ಏಕಾಂತ ಸಿ ಕಾರ್ಯಕ್ರಮ ನಿರೂಪಿಸಿದರು