ಪಿತ್ರಾರ್ಜಿತ ಆಸ್ತಿಗಿಂತ ಪಿತ್ರಾರ್ಜಿತ ಸಂಸ್ಕಾರದಿಂದ ಧರ್ಮ ಮತ್ತು ದೇಶದ ರಕ್ಷಣೆ ಸಾಧ್ಯ : ಹಾರಿಕಾ

ಮಹಾಲಿಂಗಪುರ 06 : ಪಿತ್ರಾರ್ಜಿತ ಆಸ್ತಿಗಿಂತ ಪಿತ್ರಾರ್ಜಿತ ಸಂಸ್ಕಾರದಿಂದ ಧರ್ಮ ಮತ್ತು ದೇಶದ ರಕ್ಷಣೆ ಸಾಧ್ಯ ಎಂದು ಖ್ಯಾತ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು. 

ಸ್ಥಳೀಯ ಬಸಶಂಕರಿ ಆಡಳಿತ ಮಂಡಳಿ ಹಾಗೂ ಸಾಂಸ್ಕೃತಿಕ ಉತ್ಸವ ಸಂಘದ ಸಹಯೋಗದಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಕಾರದಲ್ಲಿ ಹಮ್ಮಿಕೊಂಡಿರುವ ಶ್ರೀದೇವಿ ಪುರಾಣ ಹಾಗೂ ದಸರಾ ಉತ್ಸವ ಸಾಂಸ್ಕೃತಿಕ ಉತ್ಸವದಲ್ಲಿ ಶುಕ್ರವಾರ ಸಂಜೆ ಧರ್ಮ ಸಂಸ್ಕೃತಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದ ಅವರು, ಭಾರತದ ಮನೆ ಮನೆಯೂ ಅಯೋಧ್ಯೆಯಾಗಬೇಕು, ಪ್ರತಿ ಮಗುವೂ ಶ್ರೀರಾಮ, ಸೀತಾಮಾತೆಯರಾಗಬೇಕು. ತಾಯಿ ಭಾರತಾಂಬೆ ದುರ್ಗಿಯ ಅವತಾರ, ಅಧರ್ಮದ ನಾಶ, ಧರ್ಮದ ರಕ್ಷಣೆಗಾಗಿ ಅವತಾರ ಎತ್ತಿದ ಆ ದುರ್ಗಿಯ ಸಂತಾನ ನಾವುಗಳು. 

ನಾವಲ್ಲದೇ ಧರ್ಮದ ಆಚರಣೆ ಮತ್ತು ದೇಶದ ರಕ್ಷಣೆ ಯಾರು ಮಾಡಬೇಕು, ಅದಕ್ಕಾಗಿ ಸಮಸ್ತ ಹಿಂದೂ ಸಮಾಜ ಸಂಘಟಿತವಾಗಬೇಕು, ಹಿಂದುಗಳು ಜಾತಿಯ ಹೆಸರಲ್ಲಿ ಒಡೆದು ಹೋಗುತ್ತಿದ್ದಾರೆ. ನಮ್ಮ ಸನಾತನ ಧರ್ಮದಲ್ಲಿ ಜಾತಿಯೇ ಇರಲಿಲ್ಲ, ಹಿಂದೂಗಳಲ್ಲಿ ಪವಿತ್ರರು, ಅಪವಿತ್ರರಿಲ್ಲ. ಜಾತಿ ದೇವರ ಕೋಣೆಗೆ ಸಿಮಿತವಾಗಬೇಕು, ರಾಜಕೀಯ ಮನೆಗೆ ಸೀಮಿತವಾಗಬೇಕು, ಶ್ರೀರಾಮ ಪ್ರೇರಣೆಯಾಗಬೇಕು, ಹಣೆಗೆ ಕೇಸರಿ ತಿಲಕ, ಹೆಗಲಿಗೆ ಕೇಸರಿ ಶಾಲು ಹಾಕಿ ಧರ್ಮ, ದೇಶ ರಕ್ಷಣೆಗೆ ನಿಲ್ಲಬೇಕು ಎಂದ ಅವರು ದೇಶ ಮತ್ತು ಧರ್ಮ ರಕ್ಷಣೆಯಲ್ಲಿ ತಾಯಿಂದಿರು ಮತ್ತು ಸಂಸ್ಕಾರದ ಮಹತ್ವವನ್ನು ಮನಮುಟ್ಟುವಂತೆ ವಿವರಿಸಿದರು.  

ತಾಯಂದಿರು ಪ್ರತಿ ಮನೆಯ ಜೀವಂತ ದುರ್ಗೆಯರಿದ್ದಂತೆ, ಅವರು ಜಾಗೃತರಾಗಬೇಕು, ಪ್ರತಿ ತಾಯಿಯೂ  ದೇಶ, ಧರ್ಮಕ್ಕಾಗಿ ದುಡಿಯುವ ಶಿವಾಜಿಯಂತಹ ಮಗನನ್ನು ಹೆತ್ತು ದೇಶಕ್ಕರ​‍್ಿಸುವ ಜೀಜಾಬಾಯಿಯಾಗಬೇಕು, 

ಒಬ್ಬ ತಾಯಿ ಮನಸ್ಸು ಮಾಡಿದರೆ ಜಗತ್ತಿನಲ್ಲಿ ಏನೆಲ್ಲಾ ಬದಲಾವಣೆ ಸಾಧ್ಯವಿದೆ, ಒಬ್ಬ ತಂದೆ ನೂರು ಉಪಾಧ್ಯಾಯರಿಗೆ ಸಮ, ಒಬ್ಬ ತಾಯಿ ಸಾವಿರ ತಂದೆಗೆ ಸಮ. ಈ ಜಗತ್ತಿನ ಅಳಿವು-ಉಳಿವು ತಾಯಂದಿರ ಕೈಯಲ್ಲಿದೆ ಹಾಗಾಗಿ ತಾಯಂದಿರುಧರ್ಮ ಸಭೆಯಲ್ಲಿ ಕೂಡಬೇಕು, ದೇಶದ ಮೂಲೆಮೂಲೆಯಲ್ಲಿ ಈ ಜಾಗೃತಿಯಾಗಬೇಕು. 

ಒಂದೇ ವಂಶ, ಒಂದೇ ರಕ್ತ, ಒಂದೇ ಗುರುಕುಲ, ಒಬ್ಬರೇ ಗುರುಗಳಿಂದ ಶಿಕ್ಷಣ ಪಡೆದರೂ ಕುಂತಿಯ ಮಕ್ಕಳಾದ ಪಾಂಡವರು, ಗಾಂಧಾರಿಯ ಮಕ್ಕಳಾದ ಕೌರವರಿಗೆ ಇರುವ ವ್ಯತ್ಯಾಸವೇ ಅವರ ತಾಯಂದಿರು ಕೊಟ್ಟ ಸಂಸ್ಕಾರ ಎಂದರು.  

ಸಹಜಾನಂದ ಸ್ವಾಮೀಜಿ ಮತ್ತು ಬೆಂಗಳುರಿನ ಅನ್ನದಾನಿ ಸ್ವಾಮೀಜಿ ಆಶಿರ್ವಚನ  ನೀಡಿದರು.ಸರಿಗಮಪ ಖ್ಯಾತಿಯ ಗಾಯಕಿ ಸಾಕ್ಷಿ ಹಿರೇಮಠ ಇವರಿಂದ ಗಾಯನ, ಸನ್ಮಾನ, ಮಹಾಪ್ರಸಾದ ಜರುಗಿತು.