ಅಧ್ಯಕ್ಷ ಸ್ಥಾನಕ್ಕೆ ಕತ್ತಿ ಸ್ವಇಚ್ಛೆಯಿಂದ ರಾಜೀನಾಮೆ : ಬಾಲಚಂದ್ರ, ನಿರ್ದೇಶಕರಿಂದ ದೂರ ಉಳಿದ ಕತ್ತಿ

ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ರಮೇಶ ಕತ್ತಿ ಅವರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಯಾರಿಗೆ ಹೆದರಿ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ರಾಜೀನಾಮೆ ಹಿನ್ನೆಯಲ್ಲಿ ಎದ್ದಿರುವ ಹಲವಾರು ಅನುಮಾನಗಳಿಗೆ ತೆರೆ ಎಳೆಯುವ ಕರ‍್ಯವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಡಿದರು.
     ಬೆಳಗಾವಿಯಲ್ಲಿ ಶುಕ್ರವಾರ ಸಂಜೆ ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ಅವರು ರಾಜೀನಾಮೆ ನೀಡಿದ ಬಳಿಕ ಕೆಲ ನಿರ್ದೇಶಕರೊಂದಿಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ರಮೇಶ ಕತ್ತಿ ಅವರು ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಇದರ ಬಗ್ಗೆ ಯಾವ ಗೊಂದಲ ಇಲ್ಲ. ಬಿಡಿಸಿಸಿ ಬ್ಯಾಂಕು ಈ ಹಿಂದೆ ರಮೇಶ ಕತ್ತಿ ಅವರ ಅಧ್ಯಕ್ಷ ಸ್ಥಾನದಲ್ಲಿ 30 ಕೋಟಿ ಲಾಭ ಗಳಿಸಿದೆ. ಬಾಂಕು ನಷ್ಟ ಕೂಡಾ ಅನುಭವಿಸಿಲ್ಲ.
        ಬ್ಯಾಂಕು ರಾಜ್ಯದಲ್ಲಿ ನಂಬರ ಒನ್ ಸ್ಥಾನಕ್ಕೆ ಬರುವ ಹಾಗೆ ಕರ‍್ಯ ಕತ್ತಿ ಮಾಡಿದ್ದಾರೆ. ಬೇರೆಯವರಿಗೆ ಅಧ್ಯಕ್ಷ ಸ್ಥಾನ ಮಾಡಿ ಅವಕಾಶ ನೀಡುವ ಬಗ್ಗೆ ಕತ್ತಿ ಅವರಿಗೆ ವಿನಂತಿ ಮಾಡಿದಾಗ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಯಾರು ಒತ್ತಾಯ ಮಾಡಿ ರಾಜೀನಾಮೆ ಕೊಡಿಸಿದ್ದಾರೆ ಎನ್ನು ಸುದ್ದಿ ಹೋಗಬಾರದು ಎಂದು ನುಡಿದರು.
ಬ್ಯಾಂಕಿನ ಇನ್ನೂಳಿದ ಕಾಲಾವಧಿಗಾಗಿ ಮತ್ತೋಬ್ಬರಿಗೆ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಎಲ್ಲ ನಿರ್ದೇಶಕರು ಸೇರಿ ಈ ನಿರ್ಣಯ ಕೈಗೊಂಡಿದ್ದೇವೆ. ಅಕ್ಟೋಬರ್ ಕೊನೆಯ ವರೆಗೆ ಓರ್ವ ಪ್ರಾಮಾಣಿಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವದು. ಇದಕ್ಕೆ ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ಸತೀಶ ಜಾರಕಿಹೊಳಿ, ಪ್ರಭಾಕರ ಕೋರೆ, ರಮೇಶ ಜಾರಕಿಹೊಳಿ, ಲಕ್ಷö್ಮಣ ಸವದಿ, ರಮೇಶ ಕತ್ತಿ ಸೇರಿ ಎಲ್ಲರ ಜೊತೆ ಚರ್ಚೆ ಮಾಡಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ ಎಂದು ಶಾಸಕ ಬಾಲಚಂದ್ರ ಜಾರಕೊಹೊಳಿ ನುಡಿದರು.
      ಇವೆಲ್ಲರ ನಡುವೆ ನಿರ್ದೇಶಕರ ಜೊತೆಗೆ ಬಾಲಚಂದ್ರ ಜಾರಕಿಹೊಳಿ ಅವರು ನಡೆಸಿದ ಪತ್ರಿಕಾಗೋಷ್ಠಿಯಿಂದ ದೂರ ಉಳಿಯಲು ಕಾರಣ ಎನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ನೂತನ ಅಧ್ಯಕ್ಷರ ಸ್ಥಾನ ಆಯ್ಕೆ ವೇಳೆ ರಮೇಶ ಕತ್ತಿ ಆಗಮಿಸುತ್ತಾರೆ ಎಂದರು. ಬಾಂಕು 30 ಕೋಟಿ ಲಾಭ ಗಳಿಸಿದರು ಕತ್ತಿ ಬದಲಾವಣೆ ಯಾಕೆ ಎಂಬ ಪ್ರಶ್ನೆ ಉತ್ತರಿಸಿ, ಹೊಸಬರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಈ ಕರ‍್ಯ ಮಾಡುತ್ತಿದ್ದೇವೆ ಎಂದರು.