ಲೋಕದರ್ಶನ ವರದಿ
ನಿಪ್ಪಾಣಿ 29: ರಾಷ್ಟ್ರಕವಿ ಕುವೆಂಪು ಕನ್ನಡ ಸಾರಸ್ವತ ಲೋಕದ ಮೇರು ಶಿಖರವಾಗಿದ್ದು, ಅವರ ವಿಚಾರಗಳು ಪ್ರಸ್ತುತ ಸಂದರ್ಭದಲ್ಲಿ ಅತ್ಯಗತ್ಯವಾಗಿವೆ ಎಂದು ಪ್ರಾಚಾರ್ಯ ಡಾ.ಸಿ.ವಿ.ಕೊಪ್ಪದ ಅಭಿಪ್ರಾಯಪಟ್ಟರು. ಕೆಎಲ್ಇ ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಪ್ರೇರಿತ ಕನರ್ಾಟಕ ಸಂಘದ ಅಡಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜಯಂತಿಯ ಪ್ರಯುಕ್ತ ಭಾನುವಾರ ಜರುಗಿದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸೌಂದಯರ್ಾ ಕಬ್ಬೂರ ಕುವೆಂಪು ಅವರ ವಿಶ್ವಮಾನವ ಸಂದೇಶದ ಕುರಿತು ಮಾತನಾಡಿದರು. ಕನರ್ಾಟಕ ಸಂಘದ ಪ್ರೊ. ಕುಮಾರ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿ, ಕುವೆಂಪು ಅವರ ಜೀವನದ ಕೆಲ ಸ್ವಾರಸ್ಯಕರ ಘಟನೆಗಳನ್ನು ಮೆಲಕು ಹಾಕಿದರು. ಈ ಸಂದರ್ಭದಲ್ಲಿ ಅರುಣಾ ಚಂದ್ರಕುಡೆ, ಪ್ರೊ. ವ್ಯಾಲೆಂಟೈನ್ ಫನರ್ಾಂಡೀಸ್, ಪ್ರೊ.ರಶೀದ್ ಮುಲ್ಲಾ, ಪ್ರೊ.ಸತೀಶ ಕಾಂಬಳೆ ಸೇರಿದಂತೆ ಎನ್ಎಸ್ಎಸ್ ಸ್ವಯಂ ಸೇವಕರು, ಸಿಬ್ಬಂದಿ ಉಪಸ್ಥಿತರಿದ್ದರು. ಸೌಂದಯರ್ಾ ಪಾಟೀಲ ನಿರೂಪಿಸಿದರು. ಎನ್ಎಸ್ಎಸ್ ಅಧಿಕಾರಿ ಡಾ.ಎಸ್.ಎಮ್.ರಾಯಮಾನೆ ವಂದಿಸಿದರು