ಉಲಾನ್ ಉಡೆ, ಅ 6
: ಮಾಜಿ ಚಾಂಪಿಯನ್ ಎಲ್.ಸರಿತಾ ದೇವಿ (60 ಕೆ.ಜಿ) ಅವರು ರಷ್ಯಾದ ನತಾಲಿಯಾ ಶಡ್ರಿನಾ ವಿರುದ್ಧ
ಸೋತು ಇಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಿಂದ ಹೊರ ನಡೆದರು.
ಭಾನುವಾರ ನಡೆದ
60 ಕೆ.ಜಿ 32ನೇ ಸುತ್ತಿನ ಪಂದ್ಯದಲ್ಲಿ ನತಾಲಿಯಾ ವಿರುದ್ಧ 0-5 ಅಂತರದಲ್ಲಿ ಸರಿತಾ ಪರಾಭವಗೊಂಡರು.
ನಾಲ್ಕನೇ ಶ್ರೇಯಾಂಕದ ಭಾರತ ಬಾಕ್ಸರ್ ಮೊದಲ ಸುತ್ತಿನಲ್ಲಿ ಬೈ ಪಡೆದುಕೊಂಡಿದ್ದರು. ಆದರೆ, ರಷ್ಯಾ
ಆಟಗಾರ್ತಿ ಎದುರು ಪುಟಿದೇಳುವಲ್ಲಿ ವಿಫಲರಾದರು.
2006ರಲ್ಲಿ ದೆಹಲಿಯಲ್ಲಿ
ನಡೆದಿದ್ದ ಆವೃತ್ತಿಯಲ್ಲಿ ಸರಿತಾ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಅಲ್ಲದೇ ಹಲವು ಬಾರಿ ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಆದರೆ, ಭಾನುವಾರ ನಡೆದ ಪಂದ್ಯದಲ್ಲಿ ಮೊದಲ ಮೂರು ನಿಮಿಷಗಳಲ್ಲಿ ಎದುರಾಳಿ ಮೇಲೆ ಪಂಚ್‌ಗಳನ್ನು ನೀಡುವ
ಮೂಲಕ ನಿಯಂತ್ರಣ ಸಾಧಿಸಿದ್ದರು. ನಂತರ, ಪುಟಿದೆದ್ದ ಶಡ್ರಿನಾ ಭಾರತದ ಬಾಕ್ಸರ್ ಮೇಲೆ ಪಾರಮ್ಯ ಸಾಧಿಸಿದರು.
ಅಂತಿಮವಾಗಿ 5-0 ಅಂತರದಲ್ಲಿ ಜಯ ಸಾಧಿಸಿದರು.
ಭಾರತದ ಸಾವಿತಿ ಬೋರ
(75 ಕೆ.ಜಿ) ಜಮುನಾ ಬೋರೊ(54 ಕೆ.ಜಿ) ಅವರು ಆರಂಭಿಕ ಬೌಲ್ಟ್ ಗಳಲ್ಲಿ ಗೆದ್ದು ಪ್ರೀ ಕ್ವಾರ್ಟರ್
ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.