ಪಂಚ ಗ್ಯಾರಂಟಿ ಯಿಂದ ರೈತರ ಆತ್ಮಹತ್ಯೆಯ ಪ್ರಕರಣಗಳು ಇಳಿಕೆ

ಪಂಚ ಗ್ಯಾರಂಟಿ ಯಿಂದ ರೈತರ ಆತ್ಮಹತ್ಯೆಯ ಪ್ರಕರಣಗಳು ಇಳಿಕೆ Farmer suicide cases have decreased due to Pancha Guarantee


ಲೋಕದರ್ಶನ ವರದಿ 

ಹೂವಿನಹಡಗಲಿ 15: ರಾಜ್ಯ ಸರ್ಕಾರದ  ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ  ಭರವಸೆಗಳಾಗಿ ಉಳಿಯದೆ, ಜನರ ಬದುಕಿನಲ್ಲಿ ಭರವಸೆಯ ಬೆಳಕಾಗಿ ಮೂಡಿಬಂದಿವೆ. ಈ ಕುರಿತು ಅಜೀಂ ಪ್ರೇಮ್ಜೀ ವಿಶ್ವವಿದ್ಯಾಲಯ  ನಡೆಸಿರುವ ಇತ್ತೀಚಿನ ಅಧ್ಯಯನ ವರದಿಯು ಗ್ಯಾರಂಟಿ ಯೋಜನೆಗಳ ಸಕಾರಾತ್ಮಕ ಪರಿಣಾಮಗಳನ್ನು ಅಂಕಿಅಂಶಗಳ ಸಮೇತ ಬಿಚ್ಚಿಟ್ಟಿದೆ ಎಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.ತಾಲ್ಲೂಕಿನ ಸೋವೇನಹಳ್ಳಿ ಯಲ್ಲಿ ವಿಬಿಜಿ  ರಾಮ ಜಿ ಯೋಜನೆ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ನಿಂದ ಶನಿವಾರ  ಹಮ್ಮಿಕೊಂಡಿದ್ದ  ಪಾದಯಾತ್ರೆ ಯ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಕೆಂದ್ರ ಸರಕಾರ ಮನರೇಗಾ ಯೋಜನೆ ಬದಲಾಯಿಸಿ ದೇಶದಲ್ಲಿ ಕೂಲಿ ಕಾರ್ಮಿಕರು, ಬಡತನವನ್ನು ಜೀವಂತವಾಗಿರಿಸಲು ಹೊರಟಿದೆ ಎಂದು ಆರೋಪಿಸಿದರು. ದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಮಾನ ನಿಲ್ದಾಣ, ಕಾರ್ಖಾನೆ, ಬಂದರು,ರೈತರ ಸಾಲ ಮನ್ನಾ ಯೋಜನೆಗಳನ್ನು  ನೀಡಿದೆ ಆದರೆ ಬಿಜೆಪಿ ಕೇಂದ್ರ ಸರ್ಕಾರ ರಾಜ್ಯ ಕ್ಕೆ ಅಭಿವೃದ್ಧಿ ಅನುದಾನ ನೀಡದೇ ಅನ್ಯಾಯ ವಾಗಿದೆ ಎಂದು ಟೀಕಿಸಿದರು. ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷ ಬಿ.ವಿ.ಶಿವಯೋಗಿ ಮಾತನಾಡಿ ಕೆಂದ್ರದ  ಬಿಜೆಪಿ ಸರ್ಕಾರ ಗೊಬ್ಬರ ಬೆಲೆ ಏರಿಕೆ ಜತೆಗೆ ದೇಶದಲ್ಲಿ   ಕರ್ನಾಟಕ ರಾಜ್ಯ  ಜಿಎಸ್ ಟಿ 2ನೇ ಸ್ಥಾನ ಇದೆ ಅಭಿವೃದ್ಧಿ ಗೆ ಅನುದಾನ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿಜಯಕುಮಾರ್ ಮಾತನಾಡಿ ನರೇಂದ್ರ ಮೋದಿ ಗೆ  ದೇಶದ ರೈತರ ಬಗ್ಗೆ ಕಳಾಜಿ ಇಲ್ಲ ಅಮೆರಿಕದ ಒಪ್ಪಂದ ಮಾಡಿ ರೈತರನ್ನು ಕತ್ತು ಹಿಸುಕುತ್ತಿದ್ದಾರೆ ವಾಗ್ದಾಳಿ ನಡೆಸಿದರು. ಮುದ್ಲಾಪುರ ತಾಂಡದಿಂದ ಸೋವೇನಹಳ್ಳಿ ವರೆಗೆ ಪಾದಯಾತ್ರೆ ನಡೆಯಿತು. ಬ್ಲಾಕ್ ಕಾಂಗ್ರೆಸ್  ಅದ್ಯಕ್ಷ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಗ್ಯಾರಂಟಿ ಯೊಜನೆಯ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್‌.ಶಾಂತನಗೌಡ, ಪ್ರಚಾರ ಸಮಿತಿ ಅದ್ಯಕ್ಷ ಸೋಗಿ ಹಾಲೇಶ, ಜಿಂ.ಪಂ.ಮಾಜಿ ಸದಸ್ಯರಾದ ದೂದನಾಯ್ಕ,ವಸಂತ, ಮುಖಂಡರಾದ ಅರವಳ್ಳಿ  ವೀರಣ್ಣ, ಬ್ಯಾಲಹುಣ್ಸಿ ಬಸವನಗೌಡ ಪಾಟೀಲ್,ಸೊನ್ನದ ಮಹೇಶ್, ಚಂದ್ರನಾಯ್ಕ,ಗೌಸ್ ಸಾಹೇಬ್, ಮಹಿಳಾ ಅದ್ಯಕ್ಷೆ ಬಸಮ್ಮ, ಲಲಿತಮ್ಮ, ಗೀರೀಶ್, ಶಿವಕುಮಾರ ಇದ್ದರು.