ಶ್ರೀ ಪೊಂಪಯ್ಯತಾತ ಪಿರಾಮಿಡ್ ಧ್ಯಾನ ಕೇಂದ್ರದ ದ್ವಿತೀಯ ವಾರ್ಷಿಕೋತ್ಸವ
Second Anniversary of Sri Pompeythata Pyramid Meditation Centre
ಸಿರುಗುಪ್ಪ 15: ಬಂಡ್ರಾಳ್ ಮಠದಲ್ಲಿ ಶ್ರೀ ಪೊಂಪಯ್ಯ ತಾತನವರ 34ನೇ ಪುಣ್ಯ ಸ್ಮರಣೆ, ಶ್ರೀಉಜ್ಜಿಯಿನಿ ಸಿದ್ದಲಿಂಗ ಭಗವತ್ಪಾದರ 90ನೇ ಪುಣ್ಯಸ್ಮರಣೆ, ಶ್ರೀ ಪುಟ್ಟರಾಜ ಕವಿ ಗವಾಯಿಗಳ 16ನೇ ಪುಣ್ಯ ಸ್ಮರಣೆ, ಕಾರ್ಯಕ್ರಮ ಮತ್ತು ಶ್ರೀ ಪೊಂಪಯ್ಯತಾತ ಪಿರಾಮಿಡ್ ಧ್ಯಾನ ಕೇಂದ್ರದ ದ್ವಿತೀಯ ವಾರ್ಷಿಕೋತ್ಸವ ಮತ್ತು ಸಸ್ಯಾಹಾರ ಜಾತ ನಡೆಯಿತು,ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಂಪಿ ಹೇಮಕೂಟ ಸಿಂಹಾಸನಾದೀಶ್ವರ ಶ್ರೀಮನ್ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಕೊಟ್ಟೂರು ಸಂಸ್ಥಾನಮಠ, ಬಳ್ಳಾರಿ ಹೊಸಪೇಟೆ,ಹಾಲಿಕೇರಿ ಪೂಜ್ಯರ ವಹಿಸಿದ್ದರು ಪೂಜ್ಯರು ಮಾತನಾಡಿ ಧರ್ಮ ಮತ್ತು ಸಮಾಜಕ್ಕಾಗಿ, ದುಡಿದವರ ಪುಣ್ಯತಿಥಿ ನಡೆಯುತ್ತದೆ
ಶ್ರೀ ಪೊಂಪಯ್ಯ ತಾತನರವರು,ಶ್ರೀ ಸಿದ್ದಲಿಂಗ ಭಗವದ್ಪಾದರು, ಶ್ರೀ ಪುಟ್ಟರಾಜ ಕವಿ ಗವಾಯಿಗಳು ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ದುಡಿದ ಮಹನೀಯರು, ಇಂತಹ ಮಹನೀಯರನ್ನು ಸ್ಮರಿಸುವುದೇ ಪುಣ್ಯದ ಕಾರ್ಯ, ಜಗತ್ತು ವಿನಾಶದ ಕಡೆಗೆ ಸಾಗುತ್ತಿದೆ ಇದು ವಿಶಾದದ ಸಂಗತಿ,ಅಧ್ಯತ್ಮಾವನ್ನು ಮರೆತಿರುವುದೇ ಕಾರಣ,ಇಂದು ಪ್ರತಿಯೊಬ್ಬರಿಗೆ ಧರ್ಮ, ಆಧ್ಯಾತ್ಮ, ಮತ್ತು ಧ್ಯಾನದ ಅವಶ್ಯಕತೆ ಇದೆ ಇದನ್ನು ಮನಗೊಂಡು ಗ್ರಾಮೀಣ ಭಾಗದಲ್ಲಿ ಪಿರಾಮಿಡ್ ಧ್ಯಾನ ಕೇಂದ್ರ ಸ್ಥಾಪನೆ ಮಾಡಿ ಧ್ಯಾನದ ಮಹತ್ವವನ್ನು ಗ್ರಾಮೀಣ ಜನರಿಗೆ ತಿಳಿಸುತ್ತಿರುವುದು ಒಳ್ಳೆಯ ಕಾರ್ಯ, ಧ್ಯಾನ ಮನುಷ್ಯನನ್ನು ಮಾನವತ್ವದಿಂದ ದೈವತ್ವದ ಕಡೆಗೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು, ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಮ.ನಿ.ಪ್ರ.ಅಭಿನವ ಮಹಾಂತ ಸ್ವಾಮಿಗಳು ಚರಣಗಿರಿ ಸಂಸ್ಥಾನ ಮಠ ಹಾಲ್ವಿ, ಇವರು ವಹಿಸಿದ್ದರು
ಪೂಜ್ಯರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಧರ್ಮ ಕಾರ್ಯಗಳು ಮಾಡುತ್ತಿರುವುದು ಶ್ಲಾಘನೀಯ ಧರ್ಮ ಮನುಷ್ಯರಿಗೆ ಸುಖ, ಶಾಂತಿ ನೆಮ್ಮದಿಯನ್ನು ಕೊಡುತ್ತದೆ ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ,ಶ್ರೇಷ್ಠ ಮಹನೀಯರ ಜೀವನವನ್ನು ಆದರ್ಶವಾಗಿ ತೆಗೆದುಕೊಂಡು ನಾವು ಕೂಡ ಅವರಂತೆ ಬಾಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು, ಕಾರ್ಯಕ್ರಮದಲ್ಲಿ ಶ್ರೀಮ.ನಿ.ಪ್ರ. ಸಿದ್ಧಲಿಂಗ ಮಹಾ ಸ್ವಾಮಿಗಳು ಸೋಮಸಮುದ್ರ ಪೂಜ್ಯರು ಕೂಡ ಉಪಸ್ಥರಿದ್ದರು ಕಾರ್ಯಕ್ರಮದಲ್ಲಿ ಎಚ್ ಕೆ ಗೌರಶಂಕರ ಬಳ್ಳಾರಿ ಜಿಲ್ಲಾ ಜಂಗಮ ಸಂಘದ ಅಧ್ಯಕ್ಷರು, ಬಿ ಆರ್ ಚನ್ನಬಸನಗೌಡ್ರು ಅಧ್ಯಕ್ಷರು ಸಿರುಗುಪ್ಪ ತಾ?ಅ.ಭಾ.ವೀ.ಲಿ.ಮಹಾ ಸಭಾ,ಕೊಳುರು ಚಂದ್ರ ಗೌಡ,ಹೆಚ್ ಎಂ ಅಮರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು,
ಕಾರ್ಯಕ್ರಮದಲ್ಲಿ ವಿವಿದ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಶ್ರೀ ಕೆ.ಎಂ ಶಿವಮೂರ್ತಿ ಮಾಲಿಕರು ಹ್ಯಾಲುಯನ್ಸು ಬ್ಲೂ ಬಳ್ಳಾರಿ,ಶ್ರೀ ಆರ್ ಸದಾಶಿವ ಸಮಾಜ ಸೇವಕರು ಸಿರುಗುಪ್ಪ,ಡಾ?ಮದುಸೂದನ ಪ್ರಸಿದ್ದ ವೈದ್ಯರು ಸಿರುಗುಪ್ಪ,ಶ್ರೀ ಹಂಪಣ್ಣ ಮೆಣಿಸಿನ ಧ್ಯಾನಿಗಳು ಬಳ್ಳಾರಿ ಇವರಿಗೆ ಶ್ರೀ ಪೊಂಪಯ್ಯ ತಾತನವರ 34ನೇ ಪುಣ್ಯಸ್ಮರಣೆ ಅಂಗವಾಗಿ “ಸಮಾಜ ಸೇವಾ ಪ್ರಶಸ್ತಿ” ನೀಡ ಸನ್ಮಾನಿಸಲಾಯಿತು,ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತಗಾರರಾದ ಶ್ರೀ ದೊಡ್ಡಯ್ಯ ಗವಾಯಿಗಳು ಕಲ್ಲೂರು ಮತ್ತು ಕುಮಾರಿ ವಿಜಯಲಕ್ಷ್ಮಿ,ಕುಮಾರಿ ತಸ್ಮಯಿ ಅನ್ನಪೂರ್ಣ, ತಬಲಾ ವಿರುಪಾಕ್ಷಪ್ಪ ದೇವಲಾಪುರ ಸಂಗಡಿಗರು ವಿಶೇಷ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು,ಕಾರ್ಯಕ್ರಮದಲ್ಲಿ ಕುಮಾರಿ ದೇವಿರಮ್ಮ ಬಳ್ಳಾರಿ,ಕುಮಾರಿ ಬೃಂದಾ ಸಿರುಗುಪ್ಪ,ಕುಮಾರಿ ಅಶ್ವಿನಿ ಬಂಡ್ರಾಳ್ ಭರತನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು,
ಸಂಜೆ ನಡೆದ ಧರ್ಮಸಭೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನ ಬಂಡ್ರಾಳ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದವರು ಭಾಗವಹಿಸಿದ್ದರು. ಟ್ರಸ್ಟಿನ ವತಿಯಿಂದ ಸರ್ವರಿಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು, ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಬಂಡ್ರಾಳ್ ಎಂ ಮೃತ್ಯುಂಜಯ ಸ್ವಾಮಿ ಮಾತನಾಡಿದರು, ಶ್ರೀಮತಿ ಬಸಮ್ಮ ಶಿಕ್ಷಕರು ಸಿರುಗುಪ್ಪ ಇವರು ನಿರೂಪಣೆ ಮಾಡಿದರುಸಂಜೆ 4 ಘಂಟೆಗೆ ಶ್ರೀ ಪೊಂಪಯ್ಯ ತಾತ ಪಿರಾಮಿಡ್ ಧ್ಯಾನ ಕೇಂದ್ರದ ದ್ವೀತಿಯ ವಾರ್ಷಿಕೋತ್ಸವದ ಅಂಗವಾಗಿ ಬಂಡ್ರಾಳ್ ಗ್ರಾಮದಲ್ಲಿ ಸಸ್ಯಹಾರ ಜಾಥ ನೆಡೆಯಿತು,ಬಂಡ್ರಾಳ್ ಎಂ ಮೃತ್ಯುಂಜಯ ಸ್ವಾಮಿ ಚಾಲನೆ ನೀಡಿದರು
ಅವರು ಮಾತನಾಡಿ ಶ್ರೀ ಬ್ರಹಶ್ರೀ ಶುಭಷ ಪತ್ರೀಜಿ ಗುರುಗಳ ಸತ್ ಸಂಕಲ್ಪ ಮತ್ತು ಅಶೆಯದಂತೆ ಪ್ರತಿಯೊಬ್ಬರು ಸಸ್ಯಹಾರಿಗಳಾಗಬೇಕು,ಸಸ್ಯಹಾರ ಆರೋಗ್ಯಕ್ಕೆ ಒಳ್ಳೆಯದು, ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಗಳನ್ನು ಕೊಲ್ಲಬಾರದೆಂದು,ದೇವರ ಹೆಸರಿನಲ್ಲಿ ಪ್ರಾಣಿ ವದೆ ನಿಲ್ಲಬೇಕು ಎಂದರು,ಸಸ್ಯಾರ ಜಾಥ ಡೊಳ್ಳು ವಾದ್ಯ,ಮೇಳ ಗಳೊಂದಿಗೆ ಅದ್ದೂರಿಯಾಗಿ ಜರುಗಿತು, ಜಾಥದಲ್ಲಿ ಧ್ಯಾನ ಮತ್ತು ಸಸ್ಯಾರದ ಮಹತ್ವದ ಪತ್ರಿಕೆಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು, ಜಾತದ ನೇತೃತ್ವವನ್ನು ಸಿರುಗುಪ್ಪ, ಬಳ್ಳಾರಿ,ಶ್ರೀಧರಗಡ್ಡೆ, ಸಿರಿವಾರ್ರ,ಸೋಮಸಮುದ್ರ,ಡಿ ಹಿರೇಹಾಳ್ ಗ್ರಾಮದ ನೂರಾರು ಜನ ಪಿರಾಮಿಡ್ ಮಾಸ್ಟರ್ ಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 