ಹೂಡಿಕೆ ಮಾರುಕಟ್ಟೆಯಲ್ಲಿ ವೃತ್ತಿ ಆಯ್ಕೆಗಳು ಕುರಿತು ಕಾರ್ಯಗಾರ

ಲೋಕದರ್ಶನವರದಿ

ಮಹಾಲಿಂಗಪುರ: ಷೇರು ಮಾರುಕಟ್ಟೆ, ಅಲ್ಲಿರುವ ವ್ಯವಸ್ಥೆ, ಸಂಪನ್ಮೂಲ ಹಾಗೂ ಅಲ್ಲಿರುವ ವೃತ್ತಿ ಅವಕಾಶಗಳ ಕುರಿತು ವಿಜಯಪುರದ .ಬಿ.ಎಲ್.ಡಿ.ಇ.ಎ  ಎ ಎಸ್ ಪಿ ವಾಣಿಜ್ಯ ಕಾಲೇಜಿನ ಉಪನ್ಯಾಸಕ ಹಾಗೂ ಬಿ.ಬಿ.ಎ ಸಂಯೋಜಕ ಡಾ.ಸಂಜಯ ಹನಗಂಡಿ ಹೇಳಿದರು.

ಸ್ಥಳೀಯ ಕೆ ಎಲ್ ಇ ಸಂಸ್ಥೆಯ ಎಸ್.ಸಿ.ಪಿ. ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಂ.ಕಾಮ್ ವಿಭಾಗದ ವತಿಯಿಂದ ಹಮ್ಮಿಕೊಂಡ "ಹೂಡಿಕೆ ಮಾರುಕಟ್ಟೆಯಲ್ಲಿ ವೃತ್ತಿ ಆಯ್ಕೆಗಳು" ಕುರಿತು ಒಂದು ದಿನದ ರಾಜ್ಯಮಟ್ಟದ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. 

  ವಾಣಿಜ್ಯ ವಿಭಾಗದ ವಿದ್ಯಾಥರ್ಿಗಳು ಹೆಚ್ಚಾಗಿ ಸ್ವಯಂ ಉದ್ಯೋಗವನ್ನು ಪ್ರಾರಂಭಿಸುವ ಮೂಲಕ ಹೆಚ್ಚಿನ ಲಾಭಾಂಶವನ್ನು ಪಡೆಯಬೇಕು. ಕಡಿಮೆ ಬಂಡವಾಳದಲ್ಲಿಯೇ ಅಧಿಕ ಲಾಭಾಂಶವನ್ನು ಪಡೆದುಕೊಳ್ಳುವ ಬುದ್ಧಿವಂತಿಕೆಯನ್ನು ಬಳಕೆ ಮಾಡಬೇಕು ಎಂದು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು. 

  ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ ಅಧ್ಯಕ್ಷೀಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಎಂ.ಕಾಮ್ ವಿಭಾಗದ ಮುಖ್ಯಸ್ಥ ವಿಜಯ ಕಾಬರಾ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ಎಂ.ಬನ್ನೂರ, ಉಪನ್ಯಾಸಕಿ ಡಾ.ಸುನಂದಾ ಸೋರಗಾಂವಿ, ಉಪನ್ಯಾಸಕರಾದ ಲಕ್ಷ್ಮಣ ಹಿರೇಕೊಡಿ, ಚೇತನ ಚೋಪಡೆ, ರಫೀಕ್ ಥರಥರೆ, ರಶ್ಮಿ ಕಾಬರಾ ಹಲವರು ಇದ್ದರು.