ಜನರ ಕಲ್ಯಾಣಕ್ಕಾಗಿ ಪ್ರತಿಯೊಬ್ಬರೂ ಕೆಲಸ ಮಾಡಿ: ವಿರೇಂದ್ರಗೌಡ

ಲೋಕದರ್ಶನವರದಿ

ರಾಣೇಬೆನ್ನೂರು04: ಕಳೆದ 1989 ನೇ ಇಸ್ವಿಯಲ್ಲಿ ದೇಶದಲ್ಲಿ ಜಾರಿಗೆ ಬಮದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದ ಮೆಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವುದಕ್ಕಾಗಿ ಕೆಲಸ ನಿರ್ವಹಿಸುತ್ತಿರುವ, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಸಮೀತಿಗೆ ನೇಮಕಗೊಂಡಿರುವ ಅಧ್ಯಕ್ಷ ಪದಾಧಿಕಾರಿಗಳು ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿನ ನಮ್ಮ ಜನರ ಕಲ್ಯಾಣಕ್ಕಾಗಿ ಶ್ರಮಿಸಬೇಕೆಂದು ಜಿಲ್ಲಾ ಅಧ್ಯಕ್ಷ ವಿರೇಂದ್ರಗೌಡ ಎಫ್ ಪಾಟೀಲ ಹೆಳಿದರು.

     ನಗರದಲ್ಲಿ ಸೋಮವಾರ ನಡೆದ ಅಧ್ಯಕ್ಷ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದ ಅವರು ಮಾತನಾಡಿದರು. ದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ನಡೆಯುತ್ತಿರುವ ಹಲವಾರು ರೀತಿಯ ದೌರ್ಜನ್ಯಗಳನ್ನು ತಡೆಯುವುದಕ್ಕಾಗಿ, ದೇಶದ ಸವರ್ೋಚ್ಚ ನ್ಯಾಯಾಲಯವು 1989 ರಲ್ಲಿ ದೌರ್ಜನ್ಯ ತಡೆ ಕಾಯ್ದಿಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯು ನಮ್ಮ ಜನಾಂಗದವರ ರಕ್ಷಣೆಗೆ ಸಹಕಾರಿಯಾಗಿದೆ ಎಂದು ಪಾಟೀಲ ಹೇಳಿದರು.

  ರಾಣಿಬೆನ್ನೂರು ತಾಲೂಕಿಗೆ ನೂತನವಾಗಿ ಅಧ್ಯಕ್ಷರನ್ನಾಗಿ ಹಾಲೇಶ ಕುರುವತ್ತಿ, ಕಾರ್ಯದಶರ್ಿಯಾಗಿ ಪ್ರಕಾಶ ಮಕರಿ, ಮಹಿಳಾ ಅಧ್ಯಕ್ಷೆಯನ್ನಾಗಿ ಕುಸುಮಾ ಎಸ್ ದೊಡ್ಮನಿ, ಕಾರ್ಯದಶರ್ಿಣಿಯನ್ನಾಗಿ ಶಿಲ್ಪಾ ಭಜಂತ್ರಿ, ಕಾನೂನು ಸಲಹೇಗಾರರನ್ನಾಗಿ ಶಿದ್ದಲಿಂಗೇಶ ವಿಭೂತಿ ಯವರನ್ನು ಹಾಗೂ ಪಧಾದಿಕಾರಿಗಳನ್ನಾಗಿ ಸದಾನಂದ ಮರಿಯಮ್ಮನವರ, ಮಂಜಪ್ಪ ಎ.ಬಿ, ಹರೀಶ ಮಾಗೋಡ, ಮಂಜುನಾಥ ಯಡಳ್ಳಿ, ಇಂದಿರಾ ಹಾವೇರಿ, ಶಿಲ್ಪಾ ಭಜಂತ್ರಿ ಇವರುಗಳನ್ನು ಆಕ್ಕೆಮಾಡಲಾಯಿತು. 

     ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದಶರ್ಿ ರಾಜು ತಳವಾರ, ಉಪಾಧ್ಯಕ್ಷರಾದ ಯುವರಾಜ ಚವ್ಹಾಣ, ಉಮಾ ದೊಡ್ಮನಿ, ಗೀತಾ ಓಲೇಕಾರ, ಸುಶೀಲಾ  ಮಕರಿ, ನೇಮಪ್ಪ ಲಮಾಣಿ, ಮಾದೇವಪ್ಪ ಲಮಾಣಿ ಉಪಸ್ಥಿತರಿದ್ದರು