ಹೆಣ್ಣು ಗಂಡೆಂಬ ಬೇಧ ಮರೆತು ಒಟ್ಟುಗೂಡಿ ಸಮಾಜವನ್ನು ಭದ್ರವಾಗಿ ಕಟ್ಟಬೇಕಾಗಿದೆ : ವೀಣಾ ಬಿರಾದಾರ,
We need to forget the differences between men and women and come together to build a strong society
ಧಾರವಾಡ 09 : ಕರ್ನಾಟಕ ರಾಜ್ಯ ಪತಂಜಲಿ ಯೋಗ ಸಮಿತಿ ವರಿಷ್ಠ ಪ್ರಭಾರಿಗಳಾದ ಹಾಗೂ ಅಂತರಾಷ್ಟ್ರೀಯ ಯೋಗ ಗುರು ಭವರಲಾಲ ಆರ್ಯ, ರವರ ನೇತೃತ್ವದಲ್ಲಿ ಧಾರವಾಡದ ಮಹಿಳಾ ಪತಂಜಲಿ ಯೋಗ ಸಮಿತಿ ಪರವಾಗಿ , ಧಾರವಾಡದ ಚರಂತಿಮಠ ಗಾರ್ಡನದಲ್ಲಿರುವ ಸಮುದಾಯ ಭವನದಲ್ಲಿ ದಿನಾಂಕ: 08-03-2026 ರವಿವಾರ ಸಂಜೆ 5 ಗಂಟೆಯಿಂದ ರಾತ್ರಿ 9ರವರೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಯೋಗ ಸಮಿತಿಯ ಎಲ್ಲಾ ಯೋಗ ಕೇಂದ್ರದ ಸದಸ್ಯರು ಆಚರಿಸಿದರು. ಮುಖ್ಯ ಅತಿಥಿಗಳಾದ ವೀಣಾ ಬಿರಾದಾರ, ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಧಾರವಾಡ. ಇವರು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಗೈಯುತ್ತಿದ್ದು, ಮಹಿಳೆ ಅಬಲೆಯರಲ್ಲ ಎನ್ನುವುದು ಈಗ ಸಾಭೀತಾಗಿದೆ.
ಆದಾಗ್ಯೂ ಒಬ್ಬ ಹೆಣ್ಣುಮಗಳು ಬೆಳೆಯಬೇಕೆಂದರೆ ಅವಳ ಹಿಂದೆ ಪುರುಷರ ಬೆಂಬಲ ಇದ್ದೇ ಇರುತ್ತದೆ. ಆದ್ದರಿಂದ ಹೆಣ್ಣು ಗಂಡೆಂಬ ಬೇಧ ಮರೆತು ಒಟ್ಟುಗೂಡಿ ಸಮಾಜವನ್ನು ಭದ್ರವಾಗಿ ಕಟ್ಟಬೇಕಾಗಿದೆ ಎಂದು ಪ್ರೋತ್ಸಾಹ ಪೂರ್ವಕವಾಗಿ ಮಾಡನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಜಯಶ್ರೀ ಮಂಜುನಾಥ ಮಕ್ಕಳಗೇರಿ ಇವರು ಮಹಿಳೆಯರಿಗೆ ಅವರ ಕುಟುಂಬದ ಪುರುಷರು ಪುರುಷರು ಸಹಕಾರ ನೀಡಿದರೆ ಅವಳು ಮನೆಯಿಂದ ಹೊರಬಂದು ತನ್ನಲ್ಲಿರುವ ಪ್ರತಿಭೆಯನ್ನು ಸಾಧಿಸಲು ಸಾಧ್ಯ, ನಾನು ನನ್ನ ಮನೆಯವರು ಸ್ವತಂತ್ರ್ಯತೆ ಕೊಟ್ಟಿದ್ದಕ್ಕಾಗಿ ಈ ದಿನ ನಾನು ಈ ವೇದಿಕೆ ಮೇಲೆ ಮಾತನಾಡಲು ಸಾಧ್ಯವಾಯಿತೆಂದರು. ಅಲ್ಲದೇ ಧಾರವಾಡಿ ಮಹಾನಗರ ಪಾಲಿಕೆ ವಾರ್ಡ ನಂ-8ರ ಸದಸ್ಯರಾದ ಶಂಕರ ಶೇಳಕೆ, ಇವರು ಮಹಿಳೆಯರಲ್ಲಿ ಸಾಕಷ್ಟು ಪ್ರತಿಭಾನ್ವಿತರಿದ್ದಾರೆ ಅವರ ಸಮಾಜಮುಖಿಗಳಾಗಿ ಮುಂದೆ ಬರಬೇಕೆಂದರು.
ಪತಂಜಲಿ ಯೋಗ ಸಮಿತಿ ಉತ್ತರ ಭಾಗ ಕರ್ನಾಟಕದ ರಾಜ್ಯ ಪ್ರಭಾರಿಗಳಾದ ಶ್ರೀ ಕಿರಣ ಮನೋಲಕರ, ಯೋಗ ಗುರುಗಳು ಹುಬ್ಬಳ್ಳಿ-ಧಾರವಾಡದಲ್ಲಿ ಪ್ರತಿ ಮನೆಮನೆಗೂ ಯೋಗವನ್ನು ಉಚಿತವಾಗಿ ಕಲಿಸಿಕೊಡಲು ಪತಂಜಲಿ ಯೋಗ ಸಮಿತಿ ಸದಾಸಿದ್ದವಾಗಿದೆ ಇದರ ಉಪಯೋಗವನ್ನು ಪ್ರತಿಯೊಬ್ಬರು ಪಡೆಯಬೇಕೆಂದು ಕರೆನೀಡಿದರು. ಧಾರವಾಡದಲ್ಲಿ ಎಪ್ರೀಲ ಕೊನೆಯ ವಾರದಲ್ಲಿ ಅಡ್ವಾನ್ಷ್ ಯೋಗ ತರಬೇತಿ 25 ದಿನಗಳವರೆಗೆ ನೀಡಲು ಯೋಜಿಸಲಾಗಿದೆ ಇದರಲ್ಲಿ ಭಾಗಿವಹಿಸಿದವರೆಲ್ಲರೂ ಒಬ್ಬ ಆದರ್ಶ ಯೋಗ ಶಿಕ್ಷಕರಾಗಬಲ್ಲರು ಎಂದು ಕರೆನೀಡಿದರು. ಕರ್ನಾಟಕ ರಾಜ್ಯ ಪತಂಜಲಿ ಯೋಗ ಸಮಿತಿ ವರಿಷ್ಠ ಪ್ರಭಾರಿಗಳಾದ ಹಾಗೂ ಅಂತರಾಷ್ಟ್ರೀಯ ಯೋಗ ಗುರುಗಳಾದ ಭವರಲಾಲ ಆರ್ಯ, ರವರು ಇತಿಹಾಸ ತೆರೆದು ನೋಡಿದರೇ ಎಲ್ಲಾ ಮಹಾಪುರುಷರು ಮಹಿಳೆಯರು ಸಮಾಜದಲ್ಲಿ ಮುಂದೆ ಬಂದು ತಮ್ಮ ಪ್ರತಿಭೆ ತೋರಿಸಬೇಕು ಮಹಿಳೆಯರು ಪುರುಷರೊಟ್ಟಿಗೆ ಸಮಾಜದಲ್ಲಿ ಮುಂದೆ ಬರುವುದರಿಂದ ಹಿಂದೂ ಸನಾತನ ಧರ್ಮ ಭದ್ರ ಬುನಾಧಿಯಾಗುತ್ತದೆ.
ಯೋಗ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೆ ಹೆಚ್ಚು ಭಾಗಿಗಳಾಗಿ ಆರೋಗ್ಯವನ್ನು ಪಡೆಯುತ್ತಿದ್ದಾರೆ. ಒಬ್ಬ ಮಹಿಳೆ ಆರೋಗ್ಯವಾಗಿದ್ದರೆ ಅವಳ ಕುಟುಂಬವನ್ನು ಆರೋಗ್ಯವಾಗಿಡಬಲ್ಲಳು. ಪ್ರತಿಯೊಬ್ಬರು ಯೋಗ ಪ್ರತಿನಿತ್ಯ ಮಾಡಿ ಆರೋಗ್ಯವನ್ನು ಪಡೆಯಬೇಕೆಂದು ಕರೆನೀಡಿದರು ಹಾಗೂ ಸಂಘಟನಾ ಪ್ರಭಾರಿ ಉಮಾ ಅಗಡಿ ಇವರು ವೇದಿಕೆ ಅಲಂಕರಿಸಿದ್ದರು. ನಾಗರತ್ನಾ ಸುಲಾಖೆ ನಿರುಪಿಸಿದರು. ಲೀಲಾವತಿ ಸಾಂಬ್ರಾಣಿ ಸ್ವಾಗತಿಸಿದರು. ವೇದಿಕೆ ಅಲಂಕರಿಸಿದ್ದ ಧಾರವಾಡ ಜಿಲ್ಲಾ ಮಹಿಳಾ ಪ್ರಭಾರಿ ಶೈಲಜಾ ಮಾಡಿಕರ ರವರು ವಂದಿಸಿದರು. 250 ಕ್ಕೂ ಹೆಚ್ಚು ಮಹಿಳೆಯವರು ಈ ಕಾರ್ಯಕ್ರಮಗಳದಲ್ಲಿ ಭಾಗವಹಿಸಿದ್ದರು. ಸಂಸ್ಕೃತೀಕ ಕಾರ್ಯಕ್ರಮಗಳು ನಡೆಸಿಕೊಟ್ಟುರು. ರಜತಗಿರಿ ಯೋಗ ತಂಡದಿಂದ ನೃತ್ಯ, ನಂದಿಕೋಲ ಬಸವಣ್ಣ ಯೋಗ ಕೇಂದ್ರದಿಂದ ಜಾನಪದ ನೃತ್ಯ, ವೀರಭದ್ರೇಶ್ವರ ಯೋಗ ತಂಡದಿಂದ ಪ್ರಾರ್ಥನೆ. ಹಾಗೂ ಸಮುದಾಯ ಭವನ ಯೋಗ ಕೇಂದ್ರದಿಂದ ಯೋಗ ನೃತ್ಯ , ಮದಿಹಾಳ ಯೋಗ ಕೇಂದ್ರದಿಂದ ಪ್ಯಾಶನ್ ಶೋ, ಬೀಗಿ ಡ್ಯಾನ್ಸ , ಜಾನಪದ ಸೋಬಾನ ಹಾಡು , ಹಾಗೂ ಮಹಿಳೆಯರ ದಿನಾಚರಣೆ ಕುರಿತು ಹಾಡು ಹಾಡಿ ಸಂಭ್ರಮಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 