ಜನತೆಯ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಿ: ಆಚಾರ್

ಲೋಕದರ್ಶನ ವರದಿ

ಯಲಬುಗರ್ಾ: ಗ್ರಾಮಸ್ಥರ ನೀರೀಕ್ಷೆಯಂತೆ  ಕೆರೆ ಕಾಮಗಾರಿಯನ್ನು ನಿರ್ವಹಿಸುವದಕ್ಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕ್ರಮ ಕೈಗೊಳ್ಳಬೇಕು. ಕಾಮಗಾರಿಯ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಕೇಳಿ ಬಂದರೆ ಯಾವುದೇ ಮುಲ್ಲಾಜಿಲ್ಲದೇ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮವಹಿಸಲಾಗುವದು ಎಂದು ಶಾಸಕ ಹಾಲಪ್ಪ ಆಚಾರ ಎಚ್ಚರಿಕೆ ನೀಡಿದರು.

ತಾಲೂಕಿನ ಬಸಾಪೂರ ಗ್ರಾಮದ ಹೊರವಲಯದಲ್ಲಿರುವ ಕೆರೆಯ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾತನಾಡಿದರು.

  ಕಾಮಗಾರಿಯನ್ನು ಪ್ರಾರಂಭಿಸುವಾಗ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಬೇಕು. ಬೇಕಾಬಿಟ್ಟಿಯಾಗಿ ಕೆಲಸ ನಿರ್ವಹಿಸಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೆರೆಯಲ್ಲಿ ಯಾವ ಯಾವ ಕಾಮಗಾರಿ ಆಗಬೇಕು ಎನ್ನುವದು ಗ್ರಾಮಸ್ಥರಿಗೆ ಗೊತ್ತು ಹೊರತು ಅಧಿಕಾರಿಗಳಿಗಲ್ಲ. ಕಾಮಗಾರಿಗೆ ನಿಗದಿಪಡಿಸಿದ ಮೊತ್ತಕ್ಕೆ ಅನುಗುಣವಾಗಿ ಕಾಮಗಾರಿ ನಿರ್ವಹಿಸುವದಕ್ಕೆ ಗುತ್ತಿಗೆದಾರರು ಮುಂದಾಗಬೇಕು. ಕೆರೆ ಕಾಮಗಾರಿಗೆ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡಬೇಕು. ಕೆರೆ ತುಂಬಿಸುವ ಯೋಜನೆ ಜಾರಿಯಾಗುವ ಮುನ್ನ ಕೆರೆಯಲ್ಲಿ ತುಂಬಿರುವ ಹುಳು ತೆಗೆಯುವದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವೈಜ್ಞಾನಿಕವಾಗಿ ಕೆರೆ ಸವರ್ೇ ಮಾಡುವದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆರೆ ಒತ್ತುವರಿಯಾಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವದು. ಸಾರ್ವಜನಿಕರ ಆಸ್ತಿಯನ್ನು ಕಾಪಾಡುವದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ತಾಲೂಕಿನಲ್ಲಿರುವ ಕೆರೆಗಳನ್ನು ಅಭಿವೃದ್ದಿ ಮಾಡುವದಕ್ಕೆ ಬದ್ದನಾಗಿದ್ದೇನೆ. ಹಂತ ಹಂತವಾಗಿ ಕೆರೆ ಕಾಮಗಾರಿ ನಿರ್ವಹಿಸುವದಕ್ಕೆ ಸಕರ್ಾರದಿಂದ ಅನುದಾನ ಬಿಡುಗಡೆ ಮಾಡಿಸುವದಕ್ಕೆ  ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ತಾಲೂಕು ಪಂಚಾಯತಿ ಸದಸ್ಯ ಶರಣಪ್ಪ ಈಳಿಗೇರ, ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಮುಖಂಡರಾದ ಶರಣಪ್ಪ ವಡ್ಡರ, ಸೇರಿದಂತೆ ಬಳೂಟಗಿ, ಹಾಗೂ ಬಸಾಪೂರ ಗ್ರಾಮಸ್ಥರು ಉಪಸ್ಥಿತರಿದ್ದರು.