ಮಹಿಳೆಯರು ಗೃಹ ಉದ್ಯೋಗದಿಂದ ಸ್ವಾವಲಂಬಿಗಳಾಗಬೇಕು: ತೋಟಯ್ಯಾ ಎಂ.ಬಿ

ಲೋಕದರ್ಶನವರದಿ

ಮಹಾಲಿಂಗಪುರ೧೦: ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆ ಅಡಿಯಲ್ಲಿನ ಸಂಘಗಳ ಸದಸ್ಯರಾಗಿರುವ ಪ್ರತಿಯೊಬ್ಬ ಮಹಿಳೆಯರು ಮನೆಯಲ್ಲಿಯೇ ವಿವಿಧ ಗೃಹಉದ್ಯೋಗಗಳನ್ನು ಮಾಡುವ ಮೂಲಕ ಸ್ವಾವಲಂಬಿಗಳಗಬೇಕು ಎಂದು ಧ. ಗ್ರಾ. ಅ. ಯೋಜನೆಯ ಮುಧೋಳ ತಾಲೂಕಾ ಕೃಷಿ ಮೇಲಿಚಾರಕ ತೋಟಯ್ಯಾ ಎಂ.ಬಿ. ಹೇಳಿದರು.

ಪಟ್ಟಣದ ಬಸವನಗರದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆ ಅಡಿಯಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರಿಗಾಗಿ ಜರುಗಿದ ಸ್ವ-ಉದ್ಯೋಗ ತರಬೇತಿ ಕಾಯರ್ಾಗಾರದಲ್ಲಿ ಮಾತನಾಡಿದ ಅವರು ಸೆಲ್ಕೊ ಸೋಲಾರ್ ಕಂಪನಿಯಿಂದ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಸದಸ್ಯರಿಗೆ ಸೋಲಾರ್ ಲೈಟ್ ಸಿಸ್ಟಂ ಮತ್ತು ವಾಟರ್ ಹೀಟರ್ ಹಾಗೂ ಸ್ವ-ಉದ್ಯೋಗ ಆಧಾರಿತ ರೊಟ್ಟಿ ಮಾಡುವ ಮೆಸಿನ್ ಮತ್ತು ಜೆರಾಕ್ಸ್ ಮಶೀನ್ಗಳನ್ನು ಹಾಕಿ, ಉದ್ಯೋಗ ಮಾಡಲು ಸಾಲವನ್ನು ನೀಡಲಾಗುವದು. ಆಸಕ್ತ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

      ಸೆಲ್ಕೊ ಸೋಲಾರ್ ಕಂಪನಿಯ ರಾಮಕುಮಾರ ಮಾತನಾಡಿ ಲೈಟ್ ಸಿಸ್ಟಂ ಮತ್ತು ವಾಟರ್ ಹೀಟರ್ಗಳ ಉಪಯೋಗದ ಕುರಿತು ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಸಮಗ್ರ ಮಾಹಿತಿ ನೀಡಿದರು. 

       ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆಯ ಪಟ್ಟಣದ ಪ್ರತಿನಿಧಿಗಳಾದ ಅನಿತಾ ಮತ್ತು ಭಾರತಿ ಸೇರಿದಂತೆ ವಿವಿಧ ಗುಂಪಿನ ಸದಸ್ಯರು ತರಬೇತಿಯಲ್ಲಿ ಭಾಗವಹಿಸಿದ್ದರು.

ಕಾಲುಬಾಯಿರೋಗ ಲಸಿಕಾ ಕಾರ್ಯಕ್ರಮ