ಮಹಿಳೆ ಜಗತ್ತಿನ ಅಮೂಲ್ಯ ಸೃಷಿ: ಡಾ. ಚಿತ್ರಾ ನಾಯಕ
ಧಾರವಾಡ 28: ಮಹಿಳೆ ಜಗತ್ತಿನ ಅಮೂಲ್ಯ ಸೃಷ್ಟಿ. ಸಹನಶೀಲ ಗುಣವೇ ಅವಳ ನೆಮ್ಮದಿಯ ಜೀವನದ ಜೀವಾಳ ಎಂದು ಬಿಇಡಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯೆ ಡಾ. ಚಿತ್ರಾ ನಾಯಕ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಸರಸ್ವತಿ ನಾಗಪ್ಪ ನಾಗಜ್ಜನವರ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಿಳೆ ಮತ್ತು ಸಹನಶೀಲತೆ’ ಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಮಹಿಳೆಯರು ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ತಾಳ್ಮೆ ಗುಣ ಅವರಲ್ಲಿದೆ. ಅವಳು ಭೂಮಿಯಷ್ಟೇ ಸಹನಶೀಲತೆ ಉಳ್ಳವಳು. ಮಮತೆಯ ಸ್ವರೂಪದ ಮಹಿಳೆಯರು ದೃಢ ಹೃದಯಿಗಳು ಮಾತ್ರವಲ್ಲ ಆಶಾವಾದಿಗಳೂ ಹೌದು. ಎಂಥಹ ಒತ್ತಡದ ಬದುಕಿನಲ್ಲೂ ಮೌನಿಯಾಗಿ ಪರಿಸ್ಥಿತಿ ನಿಭಾಯಿಸಿಕೊಂಡು ಹೋಗುವ ಶಕ್ತಿ ಅವರಿಗೆ ಮಾತ್ರ ಇದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸೀತಾ ಛಪ್ಪರ ಮಾತನಾಡಿ, ಸರಸ್ವತಿ ನಾಗಜ್ಜನವರ ಆದರ್ಶ ಗ್ರಹಣಿಯಾಗಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದರು. ಎಲ್ಲರನ್ನೂ ಪ್ರೀತಿಸುವ ಗುಣವುಳ್ಳ ಓದಾರ್ಯತೆ ಅವರಲ್ಲಿತ್ತು, ಸಮಾಜ ಸೇವೆಯಲ್ಲಿ ಆತ್ಮತೃಪ್ತಿ ಹೊಂದಿದ ಅವರು ಮಹಿಳಾ ಸಂಘಟಕರೂ ಹೌದು ಎಂದು ತಮ್ಮ ಬಾಲ್ಯದ ನೆನಪು ಹಂಚಿಕೊಂಡರು.
ದತ್ತಿದಾನಿ ಅರವಿಂದ ನಾಗಜ್ಜನವರ ದತ್ತಿ ಆಶಯ ಕುರಿತು ಮಾತನಾಡಿದರು.
ಡಾ. ಆರ್. ಸಿ. ಹಿರೇಮಠ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಸುಧಾ ಕಬ್ಬೂರ ವಂದಿಸಿದರು.
ರಾಜೇಶ್ವರಿ ನಾಗಜ್ಜನವರ, ಸನಾ, ಆರ್ಯನ್, ಅಂಜನಾ ಲಕ್ಷ್ಮಿ ನಾರಾಯಣ, ವೀಣಾ ಸುರೇಶ, ಲಕ್ಷ್ಮೀಕಾಂತ ಪ್ರಭು, ಅಕ್ಕಮಹಾದೇವಿ ಸಂಕನಗೌಡ್ರ ಸೇರಿದಂತೆ ನಾಗಜ್ಜನವರ ಪರಿವಾರದವರು ಇದ್ದರು.