ಲೋಕದರ್ಶನ ವರದಿ
ಧಾರವಾಡ 26: ಸ್ಲಂ ಜನಾಂದೋಲನ - ಕನರ್ಾಟಕ ಮತ್ತು ಧಾರವಾಡ ಕೊಳಗೇರಿ ನಿವಾಸಿಗಳ ಹಿತಾಭಿವೃದ್ಧಿ ಸಮಿತಿಯಿಂದ ಧಾರವಾಡದ ಕನರ್ಾಟಕ ವಿದ್ಯಾವರ್ಧಕ ಸಂಘದಲ್ಲಿ ಇಂದು ಸಂಘಟನಾ ಕಾರ್ಯಕರ್ತರಿಗೆ ಲಿಂಗಸೂಕ್ಷ್ಮತೆ ಮತ್ತು ಎಸ್.ಜೆ.ಕೆ ಉದ್ದೇಶಗಳ ಕುರಿತು ಒಂದು ದಿನದ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ವಿಷಯ ಕುರಿತು ಮಾತನಾಡಿದ ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕರಾದ ಎ. ನರಸಿಂಹಮೂತರ್ಿ ನಾವು ಇಂದು ಅಭಿವೃದ್ಧಿ ಶೀಲ ರಾಷ್ಟ್ರಗಳ ಪಟ್ಟಿಯಲ್ಲಿದ್ದು, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತದೇಶ ಬಲಿಷ್ಠ ರಾಷ್ಟ್ರವಾಗುತ್ತಿದೆ. ಇದು ಸಂತೋಷಕರ ಸ್ವತಂತ್ರ ನಂತರದ 74 ವರ್ಷಗಳಲ್ಲಿ ನಮ್ಮ ದೇಶ ಮುನ್ನುಗ್ಗುತ್ತಿದೆ ಆದರೆ ದೇಶದಲ್ಲಾಗುತ್ತಿರುವ ಅಭಿವೃದ್ಧಿಯಲ್ಲಿ ಮಹಿಳಾ ಸಮಾನತೆ ಸಮಾನತೆ ತಾರತಮ್ಯ ಅಸಮಾನತೆ, ನಿವಾರಣೆಯಾದಾಗ ತಮ್ಮ ಅಭಿವೃದ್ಧಿ ತನ್ನ ಅರ್ಥ ಕಳೆದುಕೊಳ್ಳುತ್ತದೆ. ಸಮಾಜ ಆರೋಗ್ಯಕರವಾಗಿದೆ ಎಂಬ ಸೂಚ್ಯಗಳು ಮಹಿಳೆಯರಿಗೆ ನೀಡುತ್ತಿರುವ ಸ್ವತಂತ್ರ ಸಮಾನತೆ ಅಧಿಕಾರದ ಮೇಲಿರುತ್ತದೆ ಎಂದ ಅವರು ಸಾಮಾಜಿಕ ನೈತಿಕತೆಯನ್ನು ಸಂಘಟನೆಯಲ್ಲಿರುವ ಕಾರ್ಯಕರ್ತರು ಅಳವಡಿಸಿಕೊಂಡಾಗ ಮಾತ್ರ ಲಿಂಗಸೂಕ್ಷ್ಮತೆ ಬರಲು ಸಾಧ್ಯ ಮಹಿಳಾ ಪ್ರಾತಿನಿತ್ಯತೆ ಸಾಂಕೇತಿಕವಾಗಿರದೇ ಆಚರಣೆಗೆ ಬರಬೇಕು. ಅಸಂಘಟಿತ ವಲಯದಲ್ಲಿರುವ ವಂಚಿತ ಸಮುದಾಯಗಳ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಮತ್ತು ಶೋಷಣೆಗಳ ವಿರುದ್ಧ ಕಾರ್ಯಕರ್ತರು ಧ್ವನಿ ಎತ್ತಬೇಕು. ಸಾಂಸ್ತಿಕವಾಗಿ ಮಹಿಳಾ ನಾಯಕತ್ವ ಮತ್ತು ತೀಮರ್ಾನಗಳಿಗೆ ಆಧ್ಯತೆ ನೀಡಿದ್ದಲ್ಲಿ ಸಮಾಜ ಪರಿವರ್ತನೆಯಾಗುವುದು ಹೋರಾಟ ಯಶಸ್ಸು ಕಾಣಲು ಸಾದ್ಯವಾಗುತ್ತದೆ. ಎಸ್.ಜೆ.ಕೆ. ಹೋರಾಟಗಳು ವಾತ್ಸವಿಕ ನೆಲೆಗಟ್ಟಿನ ಮೇಲೆ ನಡೆಯುವಂತಹ ಹೋರಾಟಗಳಾಗಿವೆ ನಮ್ಮ ಕಾರ್ಯಕರ್ತರು ಅಂತರಂಗದ ಅರಿವನ್ನು ಹೆಚ್ಚಿಸುವ ಮೂಲಕ ದುಡಿಯುವ ಜನರ ಶಾಶ್ವತ ಪರಿಹಾರ ಕಂಡುಕೊಳ್ಳುವ ಜೊತೆಗೆ ನಗರಗಳಲ್ಲಿರುವ ಜಾತಿ ವ್ಯವಸ್ಥೆ ಸಾಮಾಜಿಕ ಅಸಮಾನತೆಯ ವಿರುದ್ಧ ಆಂದೋಲನ ರೂಪಿಸಿ ನಗರ ವಂಚಿತ ಸಮುದಾಯಗಳ ಸಾಮಾಜಿಕ ನ್ಯಾಯ ಮಾನವ ಘನತೆ ಸಮಪಾಲು ಸಮಬಾಳು ಮತ್ತು ಸಾಂಸ್ಕೃತಿಕ ಗುಲಾಮಗಿರಿತನ ಹೋಗಲಾಡಿಸುವ ಉದ್ದೇಶದಿಂದ ಸ್ಲಂ ಜನಾಂದೋಲನ ಕಾರ್ಯನಿರ್ವಹಿಸುತ್ತಿದ್ದು, ವಂಚಿತ, ಶೋಷಿತ ದುಡಿಯುವ ಸಮುದಾಯಗಳು ಸಂಘಟಿತರಾಗಬೇಕು ಎಂದು ಎ. ನರಸಿಂಹಮೂತರ್ಿರವರು ರಾಜ್ಯಸಂಚಾಲಕರು ಸ್ಲಂ ಜನಾಂದೋಲನ-ಕನರ್ಾಟಕ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ರಸೂಲ್ ಎಮ್. ನದಾಫ, ಜಿಲ್ಲಾ ಕಾರ್ಯದಶರ್ಿಯವರಾದ ಮಾರುತಿ ಶಿರೋಳದವರ, ಷಣ್ಮುಖಪ್ಪ ಬಡಿಗೇರ, ದನ್ನು ಶಂಕರ ಲಮಾಣಿ, ಕಾಸಿಂ ಕೋಡಿಹಾಳ, ನಿಂಗಪ್ಪ ಮೇಟಿ, ಮಂಜುಳಾ ವಾಲಿಕಾರ, ಸುರೇಶ ಚಿಂಚಲಿ, ವಿನೋದ ಗೌಳಿ, ಮುನಿರಾಬೇಗಂ ನದಾಫ, ಜಂಬಯ್ಯ ದುರಗಮುರಗಿ, ಸೈನಾಜ ದಫೇದಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.