ಗೌರಿಶಂಕರ ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ

Women's Day celebrated by Gourishankar Mahila Mandali

ಗೌರಿಶಂಕರ ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ

ಕೊಪ್ಪಳ 19 : ಇಲ್ಲಿನ ಗೌರಿಶಂಕರ ದೇವಸ್ಥನದ ಸದ್ಭಕ್ತರು ಸೇರಿ ಕಟಿಕೊಂಡಿರುವ ಗೌರಿಶಂಕರ ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆಯನ್ನು ದೇವಸ್ಥಾನದ ಆವರಣದಲ್ಲಿ ಸಂಭ್ರಮದಿಂದ ಆಚರಿಸಿದರು.  ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ ರತ್ನಾ ಪಾಟೀಲ್ ಸಮಾಜದಲ್ಲಿ ಹೆಣ್ಣು ಅಂದ್ರೆನೇ ಸರ್ವಶಕ್ತಳು ಅಂತಹ ಸಂದರ್ಭದಲ್ಲಿ ಗೌರಿಶಂಕರನ ಹೆಸರು ಇಟ್ಟಿರುವದೂ ನಿಜಕ್ಕೂ ಅದಕ್ಕೆ ಒಂದು ಪ್ರತಿರೂಪದಂತೆ ಇದೆ, ಶಂಕರನ ಶಕ್ತಿಯ ಹಿಂದೆ ಗೌರಿ ಇರುವ ಹಾಗೆ ಪ್ರತಿ ಕುಟುಂಬಕ್ಕೆ ಆಕೆಯೇ ಶಕ್ತಿ ರೂಪಳು. ಇಂದು ಎಲ್ಲಾ ಮಹಿಳೆಯರು ಸೇರಿ ಆಚರಿಸಿದ ಈ ದಿನಾಚರಣೆ ಮುಂದಿನ ಕೆಲಸಗಳಿಗೆ ಸ್ಪೂರ್ತಿ ನೀಡಲಿ ಎಂದರು.  ಮಹಿಳಾ ದಿನದ ಅಂಗವಾಗಿ ರಂಗೋಲಿ, ಅಡುಗೆ ಸ್ಪರ್ಧೆ, ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಿದರು. ಸಂಘದ ಅಧ್ಯಕ್ಷರಾದ ಗೌರಿ ಹಿತ್ತಲಮನಿ ಅವರು ಅಧ್ಕ್ಷತೆವಹಿಸಿದ್ದರು. ಕಾರ್ಯದರ್ಶಿ ಕಾವ್ಯ ಸಜ್ಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿರಾ ಗಂಗಾವತಿ ಮುಖ್ಯ ಅತಿಥಿಯಾಗಿ ಮಾತನಾಡಿದರು, ಉಪಾಧ್ಯಕ್ಷರಾದ ಶೋಭಾ ಸೊಪ್ಪಿಮಠ ನಿರೂಪಿಸಿದರು, ಸಹಕಾರ್ಯದರ್ಶಿ ದೀಪ ಬಳ್ಳಾಬಳ್ಳಿ ಸ್ವಾಗತಿಸಿದರು. ಖಜಾಂಚಿ ಪೂಜಾ ಕುರಗೋಡ ವಂದಿಸಿದರು.