ಕಿಡಿ ಹೊತ್ತಿಸಿದ ಲಕ್ಷ್ಮೀ ಹೆಬ್ಬಾಳಕರ ನಡೆ | ಡಿಕೆಶಿ ಖಾತೆ ಪಡೆದು ಹಠ ಸಾಧಿಸಿದ ಜಾರಕಿಹೊಳಿ ಸೈಲೆಂಟ್ ಆಗಿದ್ದ ಸಾಹುಕಾರ ಸಿಡಿದೆದ್ದೇಕೆ?

ಸದಾನಂದ ಮಜತಿ

ಬೆಳಗಾವಿ: ರಮೇಶ ಜಾರಕಿಹೊಳಿ. ಈ ಹೆಸರು ಈಗ ರಾಜ್ಯ ರಾಜಕೀಯ ವಲಯದಲ್ಲಿ ಜನಜನಿತವಾಗಿದೆ. ಎರಡು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದರೂ ತಾನು, ತನ್ನ ಕ್ಷೇತ್ರವಾಯಿತು ಎಂದು ತೆರೆಯ ಹಿಂದೆಯೇ ಇದ್ದ ಈ ಹೆಸರು ಬೆಳಗಾವಿ ಬಿಟ್ಟರೆ ಬೇರೆ ಜಿಲ್ಲೆಯವರಿಗೆ ಅಪರಿಚಿತ.

  ಸಿದ್ದರಾಮಯ್ಯ ಹಾಗೂ ಮೈತ್ರಿ ಸಕರ್ಾರದಲ್ಲಿ ಸಚಿವರಾಗಿದ್ದಾಗಲೂ ಅಷ್ಟೆ. ಹತ್ತರಲ್ಲಿ ಇನ್ನೊಬ್ಬರು ಎಂಬಂತಿದ್ದರು. ಕ್ಷೇತ್ರ, ಜಿಲ್ಲೆಗೆ ಸೀಮಿತ. ಸುದೀರ್ಘ ಅವಧಿಗೆ ರಾಜಕಾರಣದಲ್ಲ್ಲಿದ್ದರೂ ತಮ್ಮತನ ಬಿಟ್ಟುಕೊಟ್ಟವರಲ್ಲ. ಮಾತು ಒರಟು ಎನಿಸಿದರೂ ಹೇಳಬೇಕಾಗಿದ್ದನ್ನು ನೇರವಾಗಿ ಕಡ್ಡಿ ಮುರಿದಂತೆ, ಮುಖಕ್ಕೆ ಹೊಡೆದಂತೆ ಹೇಳುವ ಛಾತಿಯುಳ್ಳ ವ್ಯಕ್ತಿ. ಭಾಷೆಯ ಕೀಳರಿಮೆಯೋ ಏನೋ ವಿಧಾನಸಭೆ ಕಲಾಪ ಹಾಗೂ ಮಾಧ್ಯಮಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲು ಇಷ್ಟಪಡುವವರಲ್ಲ.

ಹೆಬ್ಬಾಳಕರ ಬೆನ್ನಿಗೆ ನಿಂತಿದ್ದ ಸಹೋದರರು

ಮೊದಮೊದಲು ಜಾರಕಿಹೊಳಿ ಬ್ರದಸರ್್ ಹಾಗೂ ಲಕ್ಷ್ಮೀ ಹೆಬ್ಬಾಳಕರ ನಡುವಿನ ಸಂಬಂಧ ಉತ್ತಮವಾಗಿಯೇ ಇತ್ತು. ದಶಕದಿಂದ ಜಿಲ್ಲಾ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಲಕ್ಷ್ಮೀ ಹೆಬ್ಬಾಳಕರ 2010ರಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯೆ ಹಾಗೂ 2016ರಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನೇಮಕಗೊಳ್ಳಲು ಜಾರಕಿಹೊಳಿ ಬ್ರದಸರ್್ ಹೆಬ್ಬಾಳಕರ ಬೆನ್ನಿಗೆ ನಿಂತಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರ ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿ ಹೆಬ್ಬಾಳಕರಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. (ಚುನಾವಣೆಯಲ್ಲಿ ಹೆಬ್ಬಾಳಕರ ಸೋಲಿಗೆ ಸತೀಶರ ಕೊಡುಗೆ ಇತ್ತು ಎಂಬ ವಾದವೂ ಇದೆ.)

ಓವರ್ಟೇಕ್ ಮಾಡಿದ ಹೆಬ್ಬಾಳಕರ

2013ರಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸಕರ್ಾರ ಅಸ್ತಿತ್ವಕ್ಕೆ ಬಂದು ಡಿ.ಕೆ. ಶಿವಕುಮಾರ್ ಇಂಧನ ಖಾತೆ ಸಚಿವರಾದರು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಕಾಶ ಹುಕ್ಕೇರಿ 2014ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಸ್ಪಧರ್ಿಸಿ ರಾಷ್ಟ್ರ ರಾಜಕಾರಣಕ್ಕೆ ಹೋದ ಬಳಿಕ ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬೆಳಗಾವಿ ರಾಜಕಾರಣದಲ್ಲಿ ಮಂಚೂಣಿಗೆ ಬಂದರು. ಇಲ್ಲಿಂದಲೇ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಮಧ್ಯೆ ಸಣ್ಣದಾಗಿ ಬಿರುಕು ಆರಂಭವಾಯಿತು. 2016ರ ವೇಳೆಗೆ ಈ ಬಿರುಕು ದೊಡ್ಡ ಕಂದಕವಾಗಿ ಮಾರ್ಪಟ್ಟಿತು. ಜಿಲ್ಲೆಯಲ್ಲಿ ಎರಡು ಶಕ್ತಿ ಕೇಂದ್ರಗಳು ಸೃಷ್ಟಿಯಾದವು. ಪ್ರಭಾವಿ ಸಚಿವ ಡಿಕೆಶಿ ಬೆಂಬಲದಿಂದ ಲಕ್ಷ್ಮೀ ಹೆಬ್ಬಾಳಕರ ಜಿಲ್ಲೆಯಲ್ಲಿ ಅಧಿಕಾರಿಗಳ ವಗರ್ಾವಣೆ ಸೇರಿದಂತೆ ಇಲಾಖೆಗಳ ಕೆಲಸವನ್ನು ನೇರವಾಗಿ ಸಕರ್ಾರದ ಮಟ್ಟದಲ್ಲಿ ಮಾಡಿಕೊಂಡು ಬರಲಾರಂಭಿಸಿದರು. ಅಧಿಕಾರಿ ವಲಯದಲ್ಲೂ ಇವರ ಮಾತಿಗೆ ಹೆಚ್ಚಿನ ಮನ್ನಣೆ ದೊರೆಯಲಾರಂಭಿಸಿತು. ಇದು ಸಹಜವಾಗಿ ಸತೀಶ ಜಾರಕಿಹೊಳಿ ಅವರನ್ನು ಕೆರಳಿಸಿತು. ಇಲ್ಲಿಂದ ಇಬ್ಬರ ಮಧ್ಯೆ ವೈಮನಸ್ಸು ತಾರಕಕ್ಕೇರಿಸಿತು. 

ಮೈತ್ರಿ ಸಕರ್ಾರದ ಬುಡಕ್ಕೆ ಬೆಂಕಿ ಇಟ್ಟ ಮುನಿಸು

ಲಕ್ಷ್ಮೀ ಹೆಬ್ಬಾಳಕರ ಬೆನ್ನಿಗೆ ಡಿಕೆಶಿ ನಿಂತಕೊಂಡಿದ್ದರಿಂದ ಸಹೋದರರ ಮುನಿಸು ಡಿಕೆಶಿಯತ್ತ ತಿರುಗಿತು. ಕೊನೆಗೆ ಮೈತ್ರಿ ಸಕರ್ಾರದ ಬುಡವನ್ನೇ ಅಲುಗಾಡಿಸುವ ಮಟ್ಟಿಗೆ ಬೆಳೆಯಿತು. ಇದರಿಂದ ಆಕ್ರೋಶಗೊಂಡ ರಮೇಶ ಜಾರಕಿಹೊಳಿ ಪಕ್ಷ ಹಾಗೂ ಸಕರ್ಾರದ ಚಟುವಟಕೆಯಿಂದ ದೂರ ಉಳಿದು ಬಿಎಸ್ವೈ ಭೇಟಿಯಾಗಿ ಮೈತ್ರಿ ಸಕರ್ಾರ ಉರುಳಿಸಲು ಸ್ಕೆಚ್ ಹಾಕಿದರು. ಬಂಡಾಯವೆದ್ದ ರಮೇಶ ಜಾರಕಿಹೊಳಿಯನ್ನು ಕಿತ್ತುಹಾಕಿ ಆ ಸ್ಥಾನದಲ್ಲಿ ಮತ್ತೆ ಸತೀಶ ಜಾರಕಿಹೊಳಿಯನ್ನು ಕೂರಿಸಲಾಯಿತು.    ಆಪರೇಶನ್ ಕಮಲದ ಉಸ್ತುವಾರಿ ವಹಿಸಿಕೊಂಡ ರಮೇಶ ಜಾರಕಿಹೊಳಿ ಪಕ್ಷದಲ್ಲಿ ಅಸಮಾಧಾನಿತ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಒಂದುಗೂಡಿಸಿ ಮೈತ್ರಿ ಸಕರ್ಾರ ಪತನಕ್ಕೆ ವೇದಿಕೆ ಸಿದ್ಧಗೊಳಿಸಿದರು. ನಾಲ್ಕೈದು ಬಾರಿ ವಿಫಲ ಯತ್ನದ ಬಳಿಕ ಕೊನೆಗೂ 17 ಶಾಸಕರು ಸಕರ್ಾರದಿಂದ ಹೊರಬಂದು ಮೈತ್ರಿ ಸಕರ್ಾರಕ್ಕೆ ಕೊನೆಯ ಮೊಳೆ ಹೊಡೆದರು.

   ಮುಂಬೈ ಪ್ರವಾಸ, ಅಮಾನತು ಸೇರಿದಂತೆ ಸಾಕಷ್ಟು ಹೈಡ್ರಾಮಾದ ಬಳಿಕ 2019ರ ಡಿಸೆಂಬರ್ 5ರಂದು ನಡೆದ ಉಪಚನಾವಣೆಯಲ್ಲಿ ಬಿಜೆಪಿಯಿಂದ ಸ್ಪಧರ್ಿಸಿ ಸಹೋದರ ಸವಾಲ್ನಲ್ಲಿ ಗೆದ್ದು ಪಟ್ಟು ಹಿಡಿದು ಡಿಕೆಶಿ ಹೊಂದಿದ್ದ ಜಲಸಂಪನ್ಮೂಲ ಖಾತೆಯನ್ನೇ ಪಡೆದು ಸೇಡು ತೀರಿಸಿಕೊಂಡಿದ್ದಾರೆ.

 ಮುಂದಿನ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಸೋಲಿಸುವ ಶಪಥ ಮಾಡಿದ್ದಾರೆ. ಹೀಗೆ ಎರಡು ದಶಕಗಳ ಕಾಲ ಸೈಲೆಂಟ್ ಆಗಿದ್ದ ರಮೇಶ ಜಾರಕಿಹೊಳಿ ವೈಲೆಂಟ್ ಆಗಿ ಸಕರ್ಾರದ ಪತನಕ್ಕೆ ಮುನ್ನುಡಿ ಬರೆದರು.