ಹೈದರಾಬಾದ್: ಉಡುಪಿ ಜಿಲ್ಲೆಯ ಸಕರ್ಾರಿ ಶಾಲೆಯ ಶಿಕ್ಷಕರೊಬ್ಬರ ಕೆಲಸಕ್ಕೆ ಫಿದಾ ಆಗಿರುವ ಭಾರತದ ಖ್ಯಾತ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ತಮ್ಮ ಟ್ವೀಟರ್ ನಲ್ಲಿ ಶಿಕ್ಷಕರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಬಾರಾಳಿ ಗ್ರಾಮದ ಸಕರ್ಾರಿ ಶಾಲೆಯ ಶಿಕ್ಷಕರಾಗಿರುವ ರಾಜರಾಂ ಅವರು ವಿವಿಎಸ್ ಲಕ್ಷ್ಮಣ್ ಅವರು ಮೆಚ್ಚುಗೆಗೆ ಪಾತ್ರರಾದವರು. ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಪಠ್ಯವನ್ನು ಬೋಧಿಸುವ ಇವರು ಶಾಲಾ ವಾಹನದ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದಾರೆ.
ರಾಜಾರಾಂ ಅವರು ಶಾಲೆಯಿಂದ ಸುಮಾರು ಆರು ಕಿ.ಮೀ ಆಸುಪಾಸಿನ ಮಕ್ಕಳನ್ನು ಪ್ರತಿನಿತ್ಯ ಕರೆತರುವ ಹಾಗೂ ವಾಪಸ್ ಮನೆಗಳಿಗೆ ಬಿಟ್ಟು ಬರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ರಾಜಾರಾಂ ಅವರು ಈ ಕಾರ್ಯವನ್ನು ಮೆಚ್ಚಿ ವಿವಿಎಸ್ ಲಕ್ಷ್ಮಣ್ ಅವರು ತಮ್ಮ ಟ್ವೀಟರ್ ನಲ್ಲಿ ಇದನ್ನು
ಹಂಚಿಕೊಂಡಿದ್ದಾರೆ.