ಮೂಡಲಗಿ 16: ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದದ್ದು ಸರಿಯಾದ ಮಾರ್ಗದರ್ಶನ ಮತ್ತು ಉತ್ತಮ ಸಂಸ್ಕಾರ ಇದ್ದರೆ ಯಶಸ್ಸಿನಿಂದ ಯಾರು ತಡೆಯಲಾರರು, ಅಡೆತಡೆಗಳು ಬರುವುದು ಸಹಜ ಎಲ್ಲ ಅಡೆತಡೆಗಳನ್ನು ಅವಕಾಶಗಳೆಂದು ಭಾವಿಸಿ ಮುನ್ನಡೆದರೆ ಸಮಾಜವೇ ನಿಮ್ಮನ್ನು ಕರೆದು ಗೌರವಿಸುತ್ತದೆ ಎಂದು ಕೆ.ಎಲ್. ಇ. ಕಾಲೇಜ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.
ಅವರು ತಾಲೂಕಿನ ಯಾದವಾಡ ಸ್ನೇಹಾ ಗ್ರಾಮೀಣ ಶಿಕ್ಷಣ ಸಂಸ್ಥೆಯ ರಮೇಶ ಚೆಕ್ಕೆನ್ನವರ ಮೆಮೋರಿಯಲ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಆರ್.ಸಿ.ಎಮ್ ಸಾಂಸ್ಕ್ರತಿಕ ಉತ್ಸವ ಸಮಾರಂಭದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ಯಾದವಾಡ ಗ್ರಾ.ಪಂ ಅಧ್ಯಕ್ಷ ಬಸವರಾಜ ಭೂತಾಳಿ ಮಾತನಾಡಿ, ಮಕ್ಕಳು ವಿದ್ಯಾರ್ಜನೆಕಡೆಗೆ ಗಮನಿಸಿ ಉತ್ತಮ ಅಂಕಗಳನ್ನು ಪಡೆದು ಗ್ರಾಮದ ಮತ್ತು ಶಿಕ್ಷಣ ಸಂಸ್ಥೆ, ಶಿಕ್ಷಕರ ಕೀರ್ತಿಯನ್ನು ಹೆಚ್ಚಿಸಿ ಎಂದು ಶುಭ ಹಾರೈಸಿದರು
ಸಾನ್ನಿಧ್ಯ ವಹಿಸಿದ್ದ ಸುಣಧೋಳಿ ಜಡಿಸಿದ್ಧೇಶಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆಯನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಡಾ. ಹಣಮಂತ ಚೆಕ್ಕೆನ್ನವರ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಸುಭವಲ್ಲ ಶಿಕ್ಷಣ ಸಂಸ್ಥೆಯನ್ನು ಯಶಸ್ಸಿನ ಪಥದತ್ತ ತೆಗೆದುಕೊಂಡು ಹೊಗುವುದು ಉತ್ತುಮ ಗುಣಮಟ್ಟದ ಶಿಕ್ಷಣ ನೀಡುವುದು ಬಹುಮುಖ್ಯವಾಗಿದೆ. ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವದು ಒಬ್ಬರಿಂದ ಸಾಧ್ಯವಾಗುವುದಿಲ್ಲ. ಸಂಸ್ಥೆಯು ಉತ್ತಮ ರೀತಿ ನಡೆಯುವದಕ್ಕೆ ಶ್ರೀ ಪ್ರಭುಲಿಂಗ ಮಹಾ ಸ್ವಾಮಿಗಳ ಕೃಪಾಶೀರ್ವಾದ ನಮ್ಮ ಕುಟುಂಬದವರ ತ್ಯಾಗ, ಸ್ನೇಹಿತರ ಸಹಾಐ ಸಹಕಾರ ಮತ್ತು ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳ ಶ್ರಮದಿಂದ ಸಾಧ್ಯವಾಗಿದೆ ಎಂದವರು ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಜನೆ ಗೈದ ಅನೇಕ ವಿದ್ಯಾರ್ಥಿಗಳು ವೈದ್ಯಕೀಯ , ಇಂಜಿನಿಯರಿಂಗ, ಕಾನೂನು ಇನ್ನೂ ಬೇರೆ ಬೇರೆ ಕ್ಷೆತ್ರಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ಸಮಾರಂಭದ ವೇದಿಕೆಯಲ್ಲಿ ಶ್ರೀಶೈಲ ಹೆಗ್ಗಳಗಿ, ವೀರಣ್ಣ ಕಂಠೀಗಾವಿ , ಬಿ.ಎಂ. ಪರಗುಣಿ, ಶ್ರೀಶೈಲ ಅಂಗಡಿ, ಮುಖ್ಯ ಶಿಕ್ಷಕ ವಿ.ಡಿ.ಹಿರೇಮಠ, ಪ್ರಧಾನ ಗುರುಮಾತೆ ಎ.ಆರ್.ರೋಣದ ಮತ್ತಿತರರು ಉಪಸ್ಥಿತರಿದ್ದರು.
ಪೂಜಾ ಕುದರಿ ಸ್ವಾಗತಿಸಿದರು, ಇಕ್ರಾ ತಹಶೀಲ್ದಾರ ಮತ್ತು ತನವೀರ ಗಾಡಿಬಾವಲಿ ನಿರೂಪಿಸಿದರು , ಪ್ರದೀಪ ಅಂಬಲಜೇರಿ ವಂದಿಸಿದರು.