ಬೆಳಗಾವಿ, 12: ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ಮತ್ತು ಬೆಳಗಾವಿ ಮಹಾನಗರ ಪಾಲಿಕೆಯ ಸಿಬ್ಬಂದಿ ಮತ್ತು ಪೌರ ಕಾಮರ್ಿಕರಿಂದ ಶುಕ್ರವಾರ(ಏ.12) ಮುಂಜಾನೆ 10 ಗಂಟೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ, ಜಿಲ್ಲಾ ಸ್ವೀಪ್ ಐಕಾನ್ ರಾಘವೇಂದ್ರ ಅನ್ವೇಕರ, ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳಾದ ಶಶಿಧರ ನಾಡಗೌಡ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಸ್ಸಾಪೂರ ಗ್ರಾಮದ ಶ್ರೀಮಂತ ಪಾಟೀಲ ಮತ್ತು ಶಿವನಗೌಡ ಪಾಟೀಲ ಅವರು ರಚಿಸಿದ ಮತದಾನ ಜಾಗೃತಿ ಗೀತೆಗಳ ಸಿ.ಡಿ ಬಿಡುಗಡೆಗೊಳಿಸಲಾಯಿತು.
ಕಾಲ್ನಡಿಗೆ ರ್ಯಾಲಿಯು ಸದಾಶಿವನಗರ ವೃತ್ತ, ಡಬಲ್ ರಸ್ತೆ, ಅಜಮ್ನಗರ ರಸ್ತೆ ಮೂಲಕ ಸಂಚರಿಸಿ ಅಜಮ್ನಗರ ಇಂದಿರಾ ಕ್ಯಾಂಟೀನ್ನಲ್ಲಿ ಮುಕ್ತಾಯಗೊಂಡಿತು.
ರ್ಯಾಲಿಯಲ್ಲಿ ತಾಲೂಕ ಯೋಜನಾದಿ ಕಾರಿಗಳಾದ ಪಿ.ಪಿ ದೇಶಪಾಂಡೆ ಮತ್ತು ಸ್ವೀಪ್ ಸಹಾಯಕ ಅಧಿಕಾರಿ ರವಿ ಭಜಂತ್ರಿ ಮತ್ತು ಸ್ವೀಪ್ ತಂಡದ ಸದ್ಯಸರಯ ಉಪಸ್ಥಿತರಿದ್ದರು. ಸದರಿ ರ್ಯಾಲಿಯಲ್ಲಿ ಸುಮಾರು 300 ಜನರು ಭಾಗವಹಿಸಿದ್ದರು