ಮುನವಳ್ಳಿ 08: ಪಟ್ಟಣದ ಜೈಂಟ್ಸ ಗ್ರುಪ್, ರಾಣಿ ಚೆನ್ನಮ್ಮ ಸಹೇಲಿ ಹಾಗೂ ಪುರಸಭೆ ಸ್ವೀಪ್ ಸಮಿತಿ, ಇವರ ಸಂಯುಕ್ತಾಶ್ರಯದಲ್ಲಿ ಏ. 7 ರಂದು ಮತದಾನ ಜಾಗೃತಿ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು.
ಜೈಂಟ್ಸ ಗ್ರುಪ್ ಉಪಾಧ್ಯಕ್ಷ ಉಮೇಶ ಬಾಳಿ ಮಾತನಾಡಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕರ ಹಕ್ಕು ಹಾಗೂ ಕರ್ತವ್ಯವಾಗಿದೆ, ಭವ್ಯ ಭಾರತದ ಭವಿಷ್ಯಕ್ಕೆ ಎಲ್ಲರೂ ತಪ್ಪದೇ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜೈಂಟ್ಸ ಫೆಡರೇಶನ-6 ರ ರಾಜ್ಯಾಧ್ಯಕ್ಷ ಮೋಹನ ಸವರ್ಿ ಮಾತನಾಡಿ ಏ. 23 ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ನಾಗರಿಕರು ಯಾವುದೇ ಆಸೆ - ಆಮೀಷಗಳಿಗೆ ಬಲಿಯಾಗದೆ ಮತ ಚಲಾಯಿಸುವಂತೆ ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಜೈಂಟ್ಸ ಅಧ್ಯಕ್ಷ ಡಾ. ಎಂ.ಬಿ.ಅಷ್ಟಗಿಮಠ, ಗೌರಿ ಜಾವೂರ, ಜಯಶ್ರೀ ಕುಲಕಣರ್ಿ, ಸಂಜೀವಕುಮಾರ ತುಳಜಣ್ಣವರ, ರಮೇಶ ಗಂಗಣ್ಣವರ, ಶಿವಾಜಿ ಮಾನೆ, ಶಿವಾನಂದ ಕರೀಕಟ್ಟಿ, ಎಸ್.ಬಿ.ಗಂಗಾವತಿ, ವಿರಾಜ ಕೊಳಕಿ, ಬಿ.ಬಿ.ಹುಲಿಗೊಪ್ಪ. ಮತಗಟ್ಟೆ ಮಟ್ಟದ ಅಧಿಕಾರಿ ವೀರಣ್ಣ ಕೊಳಕಿ, ಅಶೋಕ ರೇಣಕೆ, ಬಸವರಾಜ ಅಂಗಡಿ, ಅನ್ನಪೂಣರ್ಾ ಲಂಬೂನವರ, ರಾಜೇಶ್ವರಿ ಬಾಳಿ, ಅನುರಾಧಾ ಬೆಟಗೇರಿ, ಸುರೇಖಾ ಗೋಪಶೆಟ್ಟಿ, ಡಾ. ಸಂತೋಷ ಹಂಜಿ, ವಿಜಯಲಕ್ಷ್ಮೀ ಶೀಲವಂತ, ಯಲ್ಲಪ್ಪ ಭಜಂತ್ರಿ, ಸೇರಿದಂತೆ ಇತರರು ಇದ್ದರು.