ಲೋಕದರ್ಶನ ವರದಿ
ಸಿಂದಗಿ 12: ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದಾಗ ಮಾತ್ರ ಪರಿಪೂರ್ಣ ಶಿಕ್ಷಣ ಪಡೆದಂತಾಗುತ್ತದೆ ಎಂದು ಕ್ಷೇತ್ರಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು.
ಮಂಗಳವಾರ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತಿ ವಿಜಯಪುರ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾಯರ್ಾಲಯ ಸಿಂದಗಿ ಹಾಗೂ ಸರಕರ್ಾರಿ ಮುರಗೆಮ್ಮ ತಿಪ್ಪಣ್ಣ ಸುಣಗಾರ ಪ್ರೌಢಶಾಲೆ ಇವರ ಸಹಯೋಗದಲ್ಲಿ ತಾಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಾಲಿಬಾಲ್ ಹಾಗೂ ಮೇಲಾಟಗಳ ಕ್ರಿಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಥರ್ಿ ಜೀವನದಲ್ಲಿ ಪಠ್ಯದಷ್ಟೇ ಕ್ರೀಡೆ ಮತ್ತು ಪಠ್ಯಪೂರಕ ಚಟುವಟಿಕೆಗಳು ಪ್ರಮುಖ ಪಾತ್ರವಹಿಸುತ್ತವೆ. ಆರೋಗ್ಯ ಪಠ್ಯ ಅಧ್ಯಯನದಿಂದ ಬರುವುದಿಲ್ಲ. ಕ್ರೀಡೆಯಲ್ಲಿ ಸಕ್ರೀಯವಾಗಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿ ಯಾಗುವ ಜೊತೆಗೆ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ. ಆದ್ದರಿಂದ ವಿದ್ಯಾಥರ್ಿಗಳ ಸರ್ವತೋಮುಖ ಬೆಳವಣಿಗೆಗಾಗಿ ಸರಕಾರ ಪ್ರಾಥಮಿಕ, ಪ್ರೌಢಹಂತದಲ್ಲಿ ಕ್ರೀಡೆ, ಪ್ರತಿಭಾಕಾರಂಜಿ ಮತ್ತು ಕಲಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ವಿದ್ಯಾಥರ್ಿಗಳು ಈ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಂಡು ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದರು. ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಆತ್ಮ ಬಲ, ನಾಯಕತ್ವ, ಗುರಿ ಸಾಧಿಸುವ ಛಲ ನಮ್ಮಲ್ಲಿ ಬೇಳೆಯತ್ತದೆ ಆದ್ದರಿಂದ ವಿದ್ಯಾಥರ್ಿಗಳು ಕ್ರೀಡೆಯಲ್ಲಿ ಪಾಲ್ಗೋಳ್ಳಬೇಕು, ಕ್ರೀಡೆಯಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವಿಕಾರಮಾಡಬೇಕು, ಕ್ರೀಡೆಯಲ್ಲಿ ಸೊಲು-ಗೆಲುವು ಮಹತ್ವದಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮಹತ್ವ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೇ ಮನಸ್ಸಿಗೆ ನೆಮ್ಮದಿ ಸಿಗುವುದು. ಪ್ರತಿಯೊಬ್ಬ ಆಟಗಾರರು ಕ್ರೀಡಾ ನಿಣರ್ಾಯಕರ ನಿರ್ಣಯಕ್ಕೆ ತೆಲೆಬಾಗಬೇಕು ಎಂದರು.
ಸರಕಾರಿ ಪ್ರಾಥಮಿಕಶಾಲೆ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಎಂ.ಎಸ್.ಚೌಧರಿ ಮಾತನಾಡಿ, ಕ್ರೀಡೆಗಳು ಮನರಂಜನೆ ನೀಡುವ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ವಿದ್ಯಾಥರ್ಿಗಳು ಪಠ್ಯದಲ್ಲಿ ಎಷ್ಟು ಸಕ್ರೀಯವಾಗಿ ಭಾಗವಹಿಸುತ್ತಿರೋ ಅಷ್ಟೇ ಕ್ರೀಡೆಯಲ್ಲಿ ಭಾಗವಹಿಸಿ ಎಂದರು.
ತಾಲೂಕಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್.ಮಲ್ಲೇದ, ಶಿಕ್ಷಣ ಸಂಯೋಜಕ ಶಿಕ್ಷಣ ಸಂಯೋಜಕ ಎ.ಎಂ.ಮಾಡಗಿ, ಸಿಆರ್ಪಿ ಎಚ್.ಎಸ್.ನಾಗಣಸೂರ, ಬಿ.ಎಂ.ಮೂಲಿ ಅವರು ಮಾತನಾಡಿ, ಮಕ್ಕಳ ಮನೋವಿಕಾಸವಾಗಲು ಶಿಕ್ಷಣದಷ್ಟೇ ಕ್ರೀಡೆಯು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಆದ್ದರಿಂದ ವಿದ್ಯಾಥರ್ಿಗಳು ಕಲಿಕೆ ಜೊತೆಗೆ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಿ ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗಹವಹಿಸಬೇಕು ಎಂದರು. ಆರ್.ಎಚ್.ಬಿರಾದಾರ, ಎಂ.ಜಿ.ಉಪ್ಪಾರ ಹಾಗೂ ಇತರರು ವೇದಿಕೆ ಮೇಲೆ ಇದ್ದರು.
ತಾಲೂಕಾ ಕ್ರೀಡಾಕಾರಿ ಈಶ್ವರಕುಮಾರ ಲಕ್ಕೊಂಡ, ಆರ್.ಆರ್.ನಿಂಬಾಳಕರ, ಸಂಗು ಮಲ್ಲೇದ, ಚಂದ್ರು ಸಿಂಪಿ, ಬಿ.ಬಿ.ಪಾಟೀಲ, ಎಂ.ಕೆ.ಬಿರಾದಾರ, ಎಂ.ಎಂ.ಆಳಂದ, ರಾಜು ಬಿರಾದಾರ, ಸುಭಾಸ ಪಾಟೀಲ, ಎ.ಡಿ.ಅತ್ತಾರ, ಶೋಭಾ ಕೋಳೆಕರ, ಶೋಭಾ ಬಿರಾದಾರ, ಮಲ್ಲಮ್ಮ ಬಿರಾದಾರ, ಮಲ್ಲಮ್ಮ ಕೊಟಗುಣಕಿ, ಎಂ.ಎಂ.ಕೆಂಬಾವಿ, ಎಸ್.ಎಸ್.ಪೂಜಾರಿ, ಎಸ್.ಎಸ್.ಗಚ್ಚಿನಮಠ, ರಾಜು ಕಾಕಂಡಕಿ, ರಾಜು ಕುಂಬಾರ ಅವರು ನಿಣರ್ಾಯಕರಾಗಿ ಕಾರ್ಯನಿರ್ವಹಿಸಿದರು.