ವಿಶ್ವೇಶ್ವರಯ್ಯ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

ಲೋಕದರ್ಶನ ವರದಿ

ಶಿಗ್ಗಾವಿ06 ಃ ಒಬ್ಬ ವ್ಯಕ್ತಿಯಿಂದ ಸಂಘ ಸಂಸ್ಥೆಗಳು ಬೆಳೆಯುತ್ತವೆ, ಮತ್ತು ಒಬ್ಬ ವ್ಯಕ್ತಿಯಿಂದಲೇ ಸಂಘ ಸಂಸ್ಥೆಗಳು ಹಾಳಾಗುತ್ತವೆ ಎಂದು ಗಂಜಿಗಟ್ಟಿಯ ವೈಜನಾಥ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ನಾರಾಯಣಪೂರ ಸೋಸೈಟಿ ಆವರಣದಲ್ಲಿ ನೂತನವಾಗಿ ಆರಂಭವಾದ ಸರ್.ಎಮ್.ವಿಶ್ವೇಶ್ವರಯ್ಯ ಕ್ಷೇಮಾಭಿವೃದ್ದಿ ಸೌಹಾರ್ಧ ಸಹಕಾರಿ ನಿಯಮಿತ ಶಾಖೆಯ ಉದ್ಘಾಟನಾ ಸಮಾರಂಭವು ಜರುಗಿತು.

    ಮಾತನಾಡಿದ ಅವರು ಸಹಕಾರಿ ಸಂಗಗಳು ಸಮಾಜದಲ್ಲಿ ಬಡವರಿಗೆ ಆಪತ್ಬಾಂದವನಂತೆ ಕಾರ್ಯನಿರ್ವಹಿಸುತ್ತಿವೆ, ಈ ಕ್ಷೇತ್ರದಲ್ಲಿ ಬೆಳಸುವ ಭಾವ ಎಲ್ಲರಲ್ಲೂ ಇರಬೇಕು, ಸಹಕಾರಿ ಸಂಘಗಳು ಕೊಳೆಯದೆ ಬೆಳೆಯಬೇಕಾದರೆ ಬೆಳಸುವ ಭಾವ ಎಲ್ಲರದಾಗಬೇಕು ಎಂದರು.

ಕೆಸಿಸಿ ಬ್ಯಾಂಕ್ ನಿದರ್ೇಶಕ ಗಂಗಣ್ಣ ಸಾತಣ್ಣವರ ಮಾತನಾಡಿ ಸಹಕಾರಿ ಸಂಘಗಳನ್ನು ಕಟ್ಟುವುದು ಹಗುರ, ಅವುಗಳನ್ನು ನಿಭಾಯಿಸುವುದು ಕಷ್ಟದ ಕೆಲಸವಾಗಿದೆ, ಸಹಕಾರಿ ಸಂಘದಲ್ಲಿ ಪಾರದರ್ಶಕ ಆಡಳಿತವಿದ್ದರೆ ಒಳ್ಳೆಯದು ಈ ಭಾಗದಲ್ಲಿ ಸಹಕಾರಿ ಕ್ಷೇತ್ರಕ್ಕೆ ಎಚ್ ಆರ್ ದುಂಡಿಗೌಡ್ರ ಅವರು ಮುನ್ನುಡಿ ಹಾಕಿದ್ದಾರೆ ಎಂದರು.

ಭರತ ಸೇವಾ ಸಂಸ್ಥೆಯ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ದೇಶದ ಅಭಿವೃದ್ಧಿ ಪಥದಲ್ಲಿ ಸಹಕಾರಿ ಕ್ಷೇತ್ರದ ಪಾಲು ಬಹಳವಿದೆ ದೊಡ್ಡ ದೊಡ್ಡ ಬ್ಯಾಂಕುಗಳು ಬಡವರ ಸಹಾಯಕ್ಕೆ ಬಾರದ ಸಮಯದಲ್ಲಿ ಸಹಕಾರಿ ಬ್ಯಾಂಕುಗಳು ಕೈ ಹಿಡಿದು ಅವರ ಉದ್ಯಮಕ್ಕೆ ಅನುಕೂಲವಾಗುತ್ತವೆ ಸಹಕಾರಿ ಬ್ಯಾಂಕುಗಳು ಕೇವಲ ಹಣ ವಿನಿಮಯದ ಜೊತೆಗೆ ಸಮಾಜದಲ್ಲಿ ಬೇರೆ ಬೇರೆ ತರಬೇತಿ ಕೇಂದ್ರಗಳನ್ನು ಮಾಡುವಂತಾಗಬೇಕು ನಮ್ಮ ಭವಿಷ್ಯದ ನಿಮರ್ಾತೃ ನಾವೇ, ಯಾರೂ ನಮ್ಮನ್ನು ಬೆಳೆಸುವುದಿಲ್ಲ ಯುವಕರು ಹಿಂಬಾಲಕರಾಗದೇ ಉದ್ಯೋಗದ ಕಡೆಗೆ ಗಮನ ಕೊಟ್ಟಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿದ್ಯವಹಿಸಿ ಆಶೀರ್ವಚನ ನೀಡಿದರು, ವಿ. ಪ ಸದಸ್ಯ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗೀಮಠ, ಹಿರಿಯರಾದ ಮಾರುದ್ರಪ್ಪ ದುಂಡಶಿ ಮಾತನಾಡಿದರು, 

 ನೂತನ ಬ್ಯಾಂಕಿನ ಅಧ್ಯಕ್ಷ ಬಸನಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಶಂಬು ಮುಂಡಗೋಡ, ಮಲ್ಲಯ್ಯನವರು ಹಿರೇಮಠ, ಸಿ ಬಿ ಕಂಬಾಳಿಮಠ, ಶಂಕರ್ ಅರ್ಕಸಾಲಿ, ಹಡಪದ ಅಪ್ಪಣ್ಣ ಸೊಸೈಟಿಯ ಅದ್ಯಕ್ಷ ಮುತ್ತುರಾಜ ಕ್ಷೌರದ, ಬ್ಯಾಂಕಿನ ನಿದರ್ೇಶಕರಾದ ಅಣ್ಣಪ್ಪ ಕುಂದಗೋಳ, ಚನ್ನಬಸಪ್ಪ ಅಡರಕಟ್ಟಿ, ಚಂದ್ರಕಾಂತ ಮಾಳವಾದೆ, ಚನ್ನವ್ವ ಅಡರಕಟ್ಟಿ, ಅಕ್ಕಮಹಾದೇವಿ ಮುಂಡಗೋಡ, ಮಂಜುನಾಥ ನಿಡವಾಣಿ, ಶಿವಕುಮಾರ ಮೇಟಿ, ವಿನಾಯಕ ದುಂಡಶಿ, ಹನುಮಂತ ಗದಗ, ಅಶೋಕ ಬನ್ನಿಕೊಪ್ಪ, ಶಿವಶಂಕರ ಅತ್ತಿಗೇರಿ, ವ್ಯವಸ್ಥಾಪಕ ಮಂಜುನಾಥ ಅಡರಕಟ್ಟಿ ಸೇರಿದಂತೆ ಸಿಬ್ಬಂದಿ ಇದ್ದರು, ನವೀನ ಸಾಸನೂರ ನಿರೂಪಿಸಿ ವಂದಿಸಿದರು.