ಲೋಕದರ್ಶನ ವರದಿ
ರಾಯಬಾಗ 19: ತಾಲೂಕಿನ ಚಿಂಚಲಿ ಪಟ್ಟಣದ ಮಸಾಲಜಿ ತೋಟದಲ್ಲಿನ ಮನೆಯ ಸ್ಥಿತಿಗತಿ ವೀಕ್ಷಿಸಲು ಶನಿವಾರ ಪ್ರವಾಹದ ನೀರಿನಲ್ಲಿ ಈಜುತ್ತಾ ಹೋಗಿ ಮರಳಿ ಬರುವಾಗ ನೀರಿನ ಸೆಳೆತಕ್ಕೆ ಸಿಲುಕಿ ಸದಾಶಿವ ಜಗದಾಳೆ ಮೃತಪಟ್ಟಿದ್ದರು. ಆ ಹಿನ್ನೆಲೆಯಲ್ಲಿ ಭಾನುವಾರ ಮೃತರ ಮನೆಗೆ ಶಾಸಕ ಡಿ.ಎಂ.ಐಹೊಳೆ ಭೇಟಿ ನೀಡಿ ಸಾಂತ್ವನ ಹೇಳಿದರು. ಬಳಿಕ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸಕರ್ಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು.
ಪ.ಪಂ ಸದಸ್ಯರಾದ ಅಂಕುಶ ಜಾಧವ, ರಮೇಶ ಹಾರೂಗೇರಿ, ಸಂಜಯ ಮೈಶಾಳೆ, ಮುಖಂಡರಾದ ಮಲ್ಲುಕಮತೆ, ಮಹಾವೀರ ಹಾರೂಗೇರಿ, ವಿಠ್ಠಲ ಘೊಂಗಡಿ, ಅಕ್ಬರ್ಐನಾಪೂರೆ, ಸುಭಾಷಕೋರೆ, ಕುಮಾರ ಮಸಾಲಜಿ, ರವಿ ಪಾಟೀಲ, ಪರಶುರಾಮ ಜಗದಾಳೆ ಇದ್ದರು.