ಗದಗ 24: ದೇಶಿ ಕಾರ್ಯಕ್ರಮದಡಿ ಹಾಲಪ್ಪ ಭರಮಪ್ಪ ಗುಂಡಿಕೇರಿ ಅವರ ಹತ್ತಿ ಕ್ಷೇತ್ರಕ್ಕೆ 5ನೇ ತಂಡದ ಪ್ರಶಿಕ್ಷಣಾಥರ್ಿಗಳ ಕ್ಷೇತ್ರ ಭೇಟಿಯನ್ನು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಗದಗ ವತಿಯಿಂದ ದಿ. 21ರಂದು ನಿಯೋಜಿಸಲಾಗಿತ್ತು. ಬಿ.ಟಿ.ಹತ್ತಿಯಲ್ಲಿ ಗುಲಾಬಿ ಕಾಯಿಕೊರಕದ ಬಾಧೆ ಜ್ವಲಂತ ಸಮಸ್ಯೆಯಾಗಿದ್ದು ಅದರ ನಿಯಂತ್ರಣ ಈ ಘಟ್ಟದಲ್ಲಿ ಅತಿ ಅವಶ್ಯವಾಗಿರುತ್ತದೆ.
ಕಾರ್ಯಕ್ರಮದಲ್ಲಿ ಮೋನಸೆಂಟೊ ಕಂಪನಿಯ ಪ್ರತಿನಿಧಿಗಳಾದ ಡಾ.ಶಂಭು ಹಾದಿಮನಿ ಅವರು ಪ್ರಶಿಕ್ಷಣಾರ್ಥಿಗಳಿಗೆ ಬಿ.ಟಿ. ಹತ್ತಿಯ ಕಾಯಿಕೊರಕ ನಿಯಂತ್ರಣದ ಬಗ್ಗೆ ವಿವರಿಸಿದರು. ಕೀಟದ ಭಾದೆಯಿಂದ ಹತ್ತಿಯ ಗುಣಮಟ್ಟ ಕೆಡುವುದರಿಂದ ರೈತರಿಗೆ ಆದಾಯದಲ್ಲಿ ನಷ್ಟವಾಗುತ್ತದೆ ಎಂದು ವಿವರಿಸಿದರು. ಕೆ.ಐ. ಕುರುಗೋಡ ಹಾಗೂ ಎಸ್.ಎ. ಸೂಡಿಶೆಟ್ಟರ್, ಫೆಸಿಲಿಟೇಟರ್, ದೇಶಿ ಕಾರ್ಯಕ್ರಮ ಕೃವಿಶಿಕೇಂದ್ರ, ಗದಗ. ಇವರು ಕೀಟ ನಿಯಂತ್ರಣದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಗದಗ ಜಿಲ್ಲೆಯ ಸುಮಾರು 37 ಕೃಷಿ ಪರಿಕರ ಮಾರಾಟಗಾರರು ಈ ಕ್ಷೇತ್ರ ಭೇಟಿಯಲ್ಲಿ ಪಾಲ್ಗೊಂಡು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಹತ್ತಿ ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಸಿ.ಎಂ. ರಫಿ ತಿಳಿಸಿದ್ದಾರೆ.