ಬ್ಯಾಡಗಿ೧೯: ಮಳೆ ಸ್ಥಗಿತಗೊಂಡು 10 ದಿನಗಳು ಕಳೆದರೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ನೀಡದ ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದ ಕುಡಿಯುವ ನೀರಿಗೂ ತತ್ವಾರ ಪಡುವಂತಾಗಿದೆ, ದೂರವಾಣಿ ಕರೆಗೂ ಸಿಗದೇ ತಪ್ಪಿಸಿಕೊಳ್ಳುತ್ತಿದ್ದೀರಿ ನಿಮ್ಮಿಂದ ನಮ್ಮ ತಾಲೂಕಿನ ಗೌರವ ಹಾಳಾಗುತ್ತಿದೆ, ಯಾವುದೇ ಕಾರಣ ನೀಡದೇ 24 ತಾಸುಗಳಲ್ಲಿ ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ವ್ಯವಸ್ಥೆ ಸರಿಪಡಿಸದಿದ್ದರೇ, ಬೇಜವಾಬ್ದಾರಿ ಕೆಲಸಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ಸೋಮವಾರ ಸಂಜೆ ಪಟ್ಟಣದ ತಾಲ್ಲೂಕ ಕಚೇರಿ ಸಭಾಭವನದಲ್ಲಿ ಜರುಗಿದ ಪ್ರಕೃತಿ ವಿಕೋಪ ಪತ್ತು ಪರಿಹಾರ ಕುರಿತು ತಾಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜರುಗಿತು.
ಕುಡಿಯುವ ನೀರು ಪೂರ್ಯೆಕೆ ವ್ಯತ್ಯಯ ಕುರಿತು ಚಚರ್ೆ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಕುಡಿಯುವ ನೀರು, ಪೂರೈಸಲು ಸಾಧ್ಯವಾಗುತ್ತಿಲ್ಲ ಕೆಲ ಪಿಡಿಓಗಳು ಹೆಸ್ಕಾಂ ವಿರುದ್ಧ ದೂರು ನೀಡುತ್ತಿದ್ದಂತೆ ಗರಂ ಆದ ಶಾಸಕ ವಿರೂಪಾಕ್ಷಪ್ಪ, ಕುಡಿಯುವ ನೀರು ಪೂರೈಕೆ ಮಹತ್ತರ ಲೈನಗಳನ್ನು ದುರಸ್ತಿ ಮಾಡದಿರುವುದು ಎಷ್ಟರಮಟ್ಟಿಗೆ ಸರಿ..? ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ನಿಮ್ಮ ಕಾರ್ಯವೈಖರಿ ಯಾರಿಗೂ ಹಿಡಿಸುತ್ತಿಲ್ಲ ಹೀಗಾಗಿ ಸಾರ್ವಜನಿಕರಿಂದ ಜನಪ್ರತಿನಿಧಿಗಳು ಸುಖಾಸುಮ್ಮನೆ ಟೀಕೆಗೊಳಗಾಗುತ್ತಿದ್ದೇವೆ, ಹೆಸ್ಕಾಂ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರೇ ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು, ಇದಕ್ಕೆ ಪ್ರತಿಕ್ರಿಯಿಸಲು ತಡಬಡಿಸಿದ ಹೆಸ್ಕಾಂ ಅಧಿಕಾರಿಯನ್ನು ಸುಮ್ಮನಿದ್ದು ಒಳ್ಳೆಯ ಕೆಲಸ ಮಾಡುವಂತೆ ಶಾಸಕ ವಿರೂಪಾಕ್ಷಪ್ಪ ಸೂಚನೆ ನೀಡಿದರು.
ಒಂದೂವರೆ ವರ್ಷವಾದರೂ ಟಿಸಿ ಕೊಟ್ಟಿಲ್ಲ:ತಾಲೂಕಿನ ಬಿಸಲಹಳ್ಳಿ ಗ್ರಾಪಂ.ಪಿಡಿಓ ಲತಾ ತಬರೆಡ್ಡಿ ಮಾತನಾಡಿ, ಟಿಸಿ.ಗಳು ಸುಟ್ಟು ಒಂದೂವರೆ ವರ್ಷವಾದರೂ ನಮಗೆ ಟಿಸಿಗಳನ್ನು ಕಳುಹಿಸಿಕೊಟ್ಟಿಲ್ಲ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದಾದರೂ ಚಿಹೇಗೆ, ಜನರಿಗೆ ಉತ್ತರ ಹೇಳಲು ಅಗುತ್ತಿಲ್ಲ, ಅಲ್ಲದೇ ಟಿಸಿ ನಾವೇ ನಮ್ಮ ಸ್ವಂತ ಹಣವ್ಯಯಿಸಿ ತೆಗೆದುಕೊಂಡು ಹೋಗುವಂತೆ ಹೆಸ್ಕಾಂ ಸೂಚನೆ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ..? ಎಂದು ಪ್ರಶ್ನಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಯಾವುದೇ ಕಾರಣಕ್ಕೂ ಹೆಸ್ಕಾಂ ಅಧಿಕಾರಿಗಳೇ ಟಿಸಿಗಳನ್ನು ತಂದು ಜೋಡಿಸುವಂತ ಖಡಕ್ ಸೂಚನೆ ನೀಡಿದರು.
ಒಟ್ಟು 40 ಹೆಕ್ಟೇರ್ ಹಾನಿ: ತೋಟಗಾರಿಕೆ ಇಲಾಖೆ ಅಧಿಕಾರಿ ವಿಜಯಲಕ್ಷ್ಮೀ ಮಾತನಾಡಿ, ಮೊನ್ನೆ ಸುರಿದ ಮಳೆಗೆ ಬ್ಯಾಡಗಿ ತಾಲೂಕಿನಾದ್ಯಂತ ಅಡಿಕೆ, ತೆಂಗು, ಬಾಳೆ, ಪಪ್ಪಾಯ ಇನ್ನಿತರ ಬೆಳೆ ಸೇರಿದಂತೆ ಒಟ್ಟು 40 ಹೆಕ್ಟೇರ್ ಪ್ರದೇಶ ಹಾನಿಯಾದ ಬಗ್ಗೆ ವರಿದಿಯಾಗಿದ್ದು, ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು ತಾಲೂಕಾಡಳಿತಕ್ಕೆ ಸಂಪೂರ್ಣವಾದ ವಿವರಗಳನ್ನು ಸಲ್ಲಿಸಲಾಗಿದೆ ಎಂದು ಸಭೆಗೆ ತಿಳಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ವಿರೂಪಾಕ್ಷಪ್ಪ ಕಾಗಿನೆಲೆಯಲ್ಲಿ ಸದಾನಂದ ಪಾಟೀಲ ರೈತನಿಗೆ ಸಂಬಂಧಿಸಿದ ಒಟ್ಟು 23 ಲಕ್ಷ ಮೌಲ್ಯ ಬೆಳೆ ಹಾನಿಯಾಗಿದ್ದು ಇದೂವರೆಗೂ ವರದಿಯಾಗಿಲ್ಲ ಎಂದು ಪ್ರಶ್ನಿಸಿದರು ಕೂಡಲೇ ಸದರಿ ಜಮೀನಿನ ವರದಿ ತರಸಿಕೊಂಡು ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸೇರ್ಪಡೆ ಮಾಡುವಂತೆ ಸೂಚನೆ ನೀಡಿದರು.
ಕುಡಿಯುವ ನೀರು ದರ 5 ರೂ ಒಪ್ಪಲು ಸಾಧ್ಯವಿಲ್ಲ:ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 20 ಲೀ. ನೀರು ವಿತರಣೆಗೆ ಮೊದಲಿದ್ದ 2 ರೂ.ಬದಲಾಗಿ 5 ರೂ.ಗಳಿಗೆ ಪರಿಷ್ಕರಿಸಲಾಗಿದೆ, ಮೊದಲೇ ಮಳೆಯಿಲ್ಲದೇ ಕಂಗಾಲಾಗಿರುವ ಜನರು ಪರಿಷ್ಕ್ರೃತ ದರವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ, ಈಗಾಗಲೇ ಬಹಳಷ್ಟು ಗ್ರಾಮಗಳಿಂದ ಲಿಖಿತ ತಕರಾರು ಸಲ್ಲಿಸಿದ್ದು 5 ರೂ. ಬದಲಾಗಿ ಮೂರು ರೂ ಆಕರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು