ಮುಂಬೈ 08: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದು ಕೊಹ್ಲಿ ಕ್ರಿಕೆಟ್ ದಂತಕಥೆ ಎಂದು ಕರೆಸಿಕೊಳ್ಳುವ ಸನಿಹದಲ್ಲಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.
ಕೆಲ ವರ್ಷಗಳಲ್ಲಿ ಕ್ರಿಕೆಟ್ಗೆ ಹೊಸ ಆಯಾಮ ನೀಡಿರುವ ವಿರಾಟ್ ಬಗ್ಗೆ ಮಾತನಾಡಿದ ಧೋನಿ, ಕೊಹ್ಲಿ ಶ್ರೇಷ್ಠ ಆಟಗಾರ. ಕ್ರಿಕೆಟ್ ನ ದಂತಕಥೆ ಎಂದು ಕರೆಸಿಕೊಳ್ಳುವ ಸನಿಹಕ್ಕೆ ಅವರು ತಲುಪಿದ್ದಾರೆ. ಕೊಹ್ಲಿ ಯಶಸ್ಸು ಕಂಡು ಖುಷಿಯಾಗುತ್ತದೆ. ಎಲ್ಲೆಡೆ ಅವರು ಬ್ಯಾಟ್ ಮಾಡಿರುವ ರೀತಿ ಅಮೋಘ ಎಂದು ಹೇಳಿದರು.
ಇದೇ ವೇಳೆ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆಯೂ ಧೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಕೊಹ್ಲಿ ತೋರಿದ ಜವಾಬ್ದಾರಿಯನ್ನು ಧೋನಿ ಕೊಂಡಾಡಿದ್ದಾರೆ. ತಂಡವನ್ನು ಸದಾ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಬೇಕು ಎನ್ನುವುದು ಕೊಹ್ಲಿ ಗುರಿ. ಇದು ನಾಯಕನಿಗಿರಬೇಕಾದ ಗುಣ ಅದು ಕೊಹ್ಲಿಯಲ್ಲಿದೆ ಎಂದರು. ಪೋಟೊ 2