ವಿಲೇಜ್ ಅಕೌಂಟೆಂಟ್ ಸಾಹೇಬ್ ಪಟೇಲ್ ಕೊಲೆ ಮಾಡಿದವರಿಗೆ ಶಿಕ್ಷೆಯಾಗಲಿ

ಕಾರವಾರ24 :  ಕರ್ತವ್ಯ ನಿರತರಾಗಿದ್ದಾಗ ಲಾರಿ ಹಾಯಿಸಿ ವಿಲೇಜ್ ಅಕೌಂಟೆಂಟ್  ಸಾಹೇಬ್ ಪಟೇಲ್ನನ್ನು ಅಮಾನುಷವಾಗಿ ಕೊಲೆ  ಮಾಡಿದ ದುಷ್ಕೃತ್ಯ  ಖಂಡಿಸಿ  ಉತ್ತರ ಕನ್ನಡ ಜಿಲ್ಲೆಯ ವಿಲೇಕ್ ಆಕೌಂಟೆಂಟ್ಗಳ ಸಂಘಟನೆ ಸಕರ್ಾರದ ವಿರುದ್ಧ  ಸೋಮವಾರ ಪ್ರತಿಭಟನೆ ಹಾಗೂ ಧರಣಿ ಮಾಡಿತು. ಜಿಲ್ಲಾ ಮಟ್ಟದ ಕನರ್ಾಟಕ ರಾಜ್ಯ ಕಂದಾಯ ನೌಕರರ ಸಂಘ, ಮತ್ತು ಗ್ರಾಮ ಸಹಾಯಕರ ಸಂಘ ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ಬೆಂಬಲದೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು  ಪ್ರತಿಭಟನಾ ಧರಣಿ ನಡೆಯಿತು.

ನಗರದ ಪ್ರಮುಖ ರಸ್ತೆ ಮೂಲಕ ಶಾಂತ ರೀತಿಯಲ್ಲಿ ಮೆರವಣಿಗೆ ನಡೆಸಿದ  ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಜಿಲ್ಲೆಯ ಹನ್ನೊಂದು ತಾಲೂಕಿನ ಗ್ರಾಮ ಲೆಕ್ಕಿಗರ ಸಂಘ ಹಾಗೂ ಗ್ರಾಮ ಸಹಾಯಕರ ಸಂಘದ ನೂರಾರು ಸದಸ್ಯರು,ಪದಾಧಿಕಾರಿಗಳು, ಸರಕಾರಿ ನೌಕರರ ಸಂಘದ ಪ್ರಮುಖರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಧರಣಿ ನಿರತರನ್ನುದ್ದೇಶಿಸಿ ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಚಂದ್ರಶೇಖರ್ ಕಮ್ಮಾರ್ ಮಾತನಾಡಿ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಚೀಕಲಪವರ್ಿ ವೃತ್ತದ ಗ್ರಾಮ ಲೆಕ್ಕಿಗರಾದ ಸಾಹೇಬ್ ಪಟೇಲ್ ಅಕ್ರಮ ಮರಳು ದಂಧೆಕೋರರ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ. ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವ ಲಾರಿಯನ್ನು ತಡೆಗಟ್ಟಿದ ಅವರ ಮೇಲೆ ಲಾರಿ ಹರಿಸಿ ಅಮಾನುಷವಾಗಿ ಹತ್ಯೆ ಗೈಯ್ಯಲಾಗಿದೆ. ಕೂಡಲೇ ಸಾಹೇಬ್ ಪಟೇಲ್ ಅವರನ್ನು ಕೊಂದವರಿಗೆ ಶಿಕ್ಷೆಯಾಗಬೇಕು. ಕೃತ್ಯದ ಹಿಂದಿರುವ ಶಕ್ತಿಗಳನ್ನು ಬಂಧಿಸಿ, ತನಿಖೆ ಮಾಡಬೇಕು. ಫಾಸ್ಟ್ ಟ್ರಾಕ್ ಕೋರ್ಟನಲ್ಲಿ ವಿಚಾರಣೆ ನಡೆಸಬೇಕು. ಆರೋಪ ಹೊತ್ತವರ ಕುರಿತು ಪೊಲೀಸರು ಸರಿಯಾದ ಸಾಕ್ಷ್ಯ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದರು. ವಿಲೇಜ್ ಆಕೌಂಟೆಂಟ್ ಪಟೇಲ್ ಅವರ ಕೊಲೆ ನಡೆದು ಹೋಗಿದೆ.  ಈ ಕೃತ್ಯವನ್ನು ರಾಜ್ಯದ ಕಂದಾಯ ಇಲಾಖೆಯ ನೌಕರರು ಖಂಡಿಸುತ್ತಾರೆ ಎಂದರು.

ಸಕರ್ಾರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು  ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಾಹೇಬ್ ಪಟೇಲ್ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ನೀಡಬೇಕು. ಪಿಂಚಣಿಯ ಪೂರ್ಣ ವೇತನವನ್ನು ಅವರ ಕುಟುಂಬಕ್ಕೆ ನೀಡಿ ನೆರವಾಗಬೇಕು ಎಂದರು.

ಸಾಹೇಬ್ ಪಟೇಲ್ ಅವರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಸಕರ್ಾರ ವಹಿಸಿಕೊಳ್ಳಬೇಕು. ಪಟೇಲ್ ಅವರನ್ನು ಲಾರಿ ಹಾಯಿಸಿ ಕೊಲೆ ಮಾಡಿದ ಲಾರಿ ಮಾಲಕ ಹಾಗೂ ಮರಳು ಬ್ಲಾಕ್ ಟೆಂಡರ್ ಪಡೆವರ ಮೇಲೆ ಐಪಿಸಿ 353 ಅಡಿ ಎಫ್ಐಅರ್ ದಾಖಲಿಸಬೇಕು. ತಾಲೂಕಾ ದಂಡಾಧಿಕಾರಿಗಳೇ ಫಿಯರ್ಾದಿದಾರರಾಗಿ ದೂರು ದಾಖಲಾಗುವಂತೆ ಮಾಡಬೇಕು ಎಂಬ ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುತ್ತದೆ ಎಂದು ಚಂದ್ರಶೇಖರ್ ಹೇಳಿದರು.  

ರಾಜ್ಯದಲ್ಲಿ ಅಕ್ರಮ ಮರಳು ದಂಧೆಕೋರರು ಇದೇ ಮಾದರಿಯಲ್ಲಿ ಹಲವು ಪ್ರಕರಣಗಳಲ್ಲಿ ಕಂದಾಯ ನೌಕರರ ವಿರುದ್ಧ ದೌರ್ಜನ್ಯವನ್ನು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿಯೂ ಕೂಡ ನಡೆಯುತ್ತಿರುವ ಕಲ್ಲು ಕ್ವಾರಿ, ಮರಳು ಮತ್ತು ಚೀರೆಕಲ್ಲು ಅಕ್ರಮ ದಂಧೆಕೋರರ ಮೇಲೆ ಕ್ರಮ ಕೈಗೊಳ್ಳಲು ಭಯಪಡುವಂತಹ ವಾತಾವರಣ ಇದೆ. ದುಷ್ಕೃತ್ಯದಿಂದ ಪೊಲೀಸ್ ಭದ್ರತೆ ಇಲ್ಲದೇ ಪ್ರಾಮಾಣಿಕವಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುವ ನೌಕರರಿಗೆ ನಿಭರ್ಿತಿಯಿಂದ ಕಾರ್ಯ ನಿರ್ವಹಿಸಲು ಕಷ್ಟವಾಗುತ್ತಿದೆ. ಆದ್ದರಿಂದ ರಾಜ್ಯ ಸರಕಾರ ಕಂದಾಯ ವ್ಯಾಪ್ತಿಯೊಳಗೆ ಒಳಪಡುವ ಅಕ್ರಮ ಮರಳು ತೆಗೆಯುವುದನ್ನು ನಿಷೇಧಿಸಲು ಬಲವಾದ ನಿಯಮವನ್ನು ರೂಪಿಸಬೇಕು. ಕಂದಾಯ ಅಧಿಕಾರಿ ಮತ್ತು ನೌಕರರನ್ನು ಈ ಕೆಲಸದ ವ್ಯಾಪ್ತಿಯಿಂದ ವಿಮುಕ್ತಿಗೊಳಿಸಲು ಆದೇಶ ಹೊರಡಿಸಬೇಕು. ಈ ದಿಸೆಯಲ್ಲಿ ಸರಕಾರ ಕಾರ್ಯಪ್ರವೃತ್ತರಾಗದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಜಿಲ್ಲಾ ಕಂದಾಯ ನೌಕರರ ಸಂಘದ ಜಿಲ್ಲಾ ಕಾರ್ಯದಶರ್ಿ ಪರಸಪ್ಪ ನಾಯ್ಕ ಮಾತನಾಡಿ, ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡು ಸಾಹೇಬ್ ಪಟೇಲ್ ಕುಟುಂಬ ಅನಾಥವಾಗಿದೆ.ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿಭಾಯಿಸುವಾಗ ನೌಕರ ಮೃತಪಟ್ಟರೆ ಹೆಚ್ಚಿನ ಪರಿಹಾರ ನೀಡಲಾಗುತ್ತದೆ. ಅದೇ ಮಾದರಿಯಲ್ಲಿ ಅವರ ಕುಟುಂಬಕ್ಕೆ ಸರಕಾರ ಹೆಚ್ಚಿನ ಪರಿಹಾರವಾಗಿ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವ್ ನಾಯ್ಕ ಮಾತನಾಡಿ, ದುಷ್ಕಮರ್ಿಯ ಈ ಕೃತ್ಯದಿಂದ ಅಮೂಲ್ಯಜೀವವೊಂದು ಕಳೆದು ಹೋಗಿದೆ.ಇದರಿಂದ ಇಡೀ ರಾಜ್ಯದ ಸರಕಾರಿ ನೌಕರರಿಗೆ ತುಂಬಾ ನೋವಾಗಿದೆ. ಈ ಸಾವಿನ ಹಿಂದೆ ಹಲವು ಸಂಶಯಗಳಿದ್ದು,ಸಿಓಡಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂದೀಪ ಕೋಲಾರ, ಆರ್.ಎಂ.ನಾಯ್ಕ, ಹರೀಶ್  ನಾಯ್ಕ, ಟಿ.ಎಸ್.ಗಾಡಿಗೇರ, ಪ್ರಸಾದ್ ಗಾಂವಕರ, ಶುಭಂ, ಆಶಾ ಭಟ್, ಸಂಗೀತಾ, ಸರೋಜಾ ಗೌಡ,ಶ್ರೀಧರ ನಾಯ್ಕ ಸಹಿತ ನೂರಾರು ಸಂಖ್ಯೆ ವಿಲೇಜ್ ಆಕೌಂಟೆಂಟ್ಗಳು ಧರಣಿ ನಡೆಸಿದರು. ಸಂಜೆ 4ಕ್ಕೆ ಅಪರ ಜಿಲ್ಲಧಿಕಾರಿ ಡಾ.ಸುರೇಶ್ ಹಿಟ್ನಾಳ ಅವರ ಮೂಲಕ ಸಕರ್ಾರಕ್ಕೆ ಲಿಖಿತ ಮನವಿ ಸಲ್ಲಿಸಲಾಯಿತು.