ಮನಮೋಹನ್ ಸಿಂಗ್ ನಿಧನ: ಶಾಸಕ ರಾಜುಗೌಡ, ಡಾ.ಪ್ರಭುಗೌಡ ತೀವ್ರ ಸಂತಾಪ

Death of Manmohan Singh: MLA Rajugowda, Dr. Prabhu Gowda express condolences

ಮನಮೋಹನ್ ಸಿಂಗ್ ನಿಧನ: ಶಾಸಕ ರಾಜುಗೌಡ, ಡಾ.ಪ್ರಭುಗೌಡ ತೀವ್ರ ಸಂತಾಪ 

ದೇವರಹಿಪ್ಪರಗಿ 27: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ, ಆನಂದಗೌಡ ದೊಡ್ಡಮನಿ, ಕೆಪಿಸಿಸಿ ಸದಸ್ಯರಾದ ಬಿ.ಎಸ್‌.ಪಾಟೀಲ ಯಾಳಗಿ, ಮಾಜಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಭಾಷ ಛಾಯಗೋಳ, ಸಂಗಮೇಶ ಛಾಯಗೋಳ ಸೇರಿದಂತೆ ಅನೇಕ ಮುಖಂಡರು, ಗಣ್ಯರು, ಸ್ವಾಮೀಜಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. 

ದೇಶ ಕಂಡ ಧೀಮಂತ ನಾಯಕ, ಆರ್ಥಿಕ ತಜ್ಞ, ಅಜಾತಶತ್ರು 

ದೇವರಹಿಪ್ಪರಗಿ 27: ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರಿಗೆ ಪಟ್ಟಣದ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಶುಕ್ರವಾರದಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಪ್ರಕಾಶ ಗುಡಿಮನಿ , ರಾಘವೇಂದ್ರ ಗುಡಿಮನಿ, ಪ್ರಕಾಶ ಮಲ್ಹಾರಿ, ಕಾಸುಗೌಡ ಬಿರಾದಾರ ಜಲಕತ್ತಿ, ಮಹಾಂತೇಶ ವಂದಾಲ, ರಮೇಶ ಮ್ಯಾಕೆರಿ, ಸುಭಾಷ ಜಾಧವ, ರಾವುತ ಮಾಸ್ತರ ತಳಕೇರಿ, ಬಸವರಾಜ ಇಂಗಳಗಿ, ಜಾನು ಗುಡಿಮನಿ, ಬಸವರಾಜ ತಳಕೇರಿ, ರಾವುತ ಅಗಸರ, ಮಡಿವಾಳಪ್ಪ ಬ್ಯಾಲ್ಯಾಳ, ರಮೇಶ ಇಂಗಳಗಿ , ರಾಜು ಹೊಸಮನಿ, ಪಿಂಟು ಬಾಸುತ್ಕರ್, ಶ್ರೀಕಾಂತ ಖಾಕಂಡಕಿ, ಮಾಂತೇಶ ಚಲವಾದಿ, ಮಹೇಶ ಗುಡಿಮನಿ, ಕಡ್ಲೆವಾಡ ಶಿಕ್ಷಕರು ವಿಜಯಕುಮಾರ ರಾಠೋಡ ಸೇರಿದಂತೆ ಅನೇಕ ಮುಖಂಡರು ಇದ್ದರು.