ಲೋಕದರ್ಶನ ವರದಿ
ವಿಜಯಪುರ 10: ತಾಲೂಕಿನ ಆಹೇರಿ ಗ್ರಾಮದಲ್ಲಿ ಜರುಗಿದೆ ರಾಜ್ಯಮಟ್ಟದ 65 ಕೆ.ಜಿ. ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಗಲಕೋಟ ಜಿಲ್ಲೆಯ ಗುಳಬಾಳ ಮಾರುತೇಶ್ವರ ತಂಡ ರಿಥಿರಐ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತು.
ಗಜಾನನ ಉತ್ಸವದ ಅಂಗವಾಗಿ ಆಹೇರಿ ನಿಜಶರಣ ಅಂಬಿಗರ ಚೌಡಯ್ಯ ತರುಣ ಮಂಡಳಿ ಹಾಗೂ ವಿಜಯಪುರ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಶಿಯೇಶನ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ 65 ಕೆ.ಜಿ. ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಗಲಕೋಟ ಜಿಲ್ಲೆಯ ಗುಳಬಾಳ ಮಾರುತೇಶ್ವರ ತಂಡ ಹಾಗೂ ವಿಜಯಪುರ ಜಿಲ್ಲೆಯ ಆಹೇರಿ ಟೀಪುಸುಲ್ತಾನ ತಂಡಗಳ ಮಧ್ಯ ರವಿವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಬಾಗಲಕೋಟ ಗುಳಬಾಳ ಮಾರುತೇಶ್ವರ ತಂಡ ಆಹೇರಿ ಟೀಪು ಸುಲ್ತಾನ ತಂಡವನ್ನು 14-9 ಅಂಕಗಳಿಂದ ಸರಾಸಗಟವಾಗಿ ಮಣಿಸಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಈ ಪಂದ್ಯಾವಳಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಸುಮಾರು 21 ತಂಡಗಳ ಭಾಗವಹಿಸಿದ್ದವು. ಪ್ರೇಕ್ಷರ ನಿರೀಕ್ಷೆಯಂತೆ ಬಾಗಲಕೋಟ ಗುಳಬಾಳ ಮಾರುತೇಶ್ವರ ತಂಡ ವಿಜಯಪುರ ಜಿಲ್ಲೆಯ ಆಹೇರಿ ಟೀಪು ಸುಲ್ತಾನ ತಂಡ ವಿಜಾಪುರ ಅಂಜುಮನ ತಂಡ ಹಾಗೂ ಆಹೇರಿ ಅಂಬಿಗರ ಚೌಢಯ್ಯ ಈ ನಾಲ್ಕು ತಂಡಗಳು ಸೆಮಿ ಪೈನಲ್ ಪ್ರವೇಶಿಸಿದವು. ಅಂತಮವಾಗಿ ಬಾಗಲಕೋಟ ತಂಡ ಪ್ರಥಮ, ಆಹೇರಿ ಟಿಪುಸುಲ್ತಾನ ತಂಡ ದ್ವಿತೀಯ, ವಿಜಯಪುರ ಅಂಜುಮನ ತಂಡ ತೃತೀಯ ಹಾಗೂ ಆಹೇರಿ ಅಂಬಿಗರ ಚೌಡಯ್ಯ ತಂಡ ಚತುರ್ಥ ಸ್ಥಾನ ಪಡೆದವು.
ಐನಾಪುರದ ಜೆಡಿಎಸ್ ಮುಖಂಡ ಮುತ್ತುಗೌಡ ಗೊಬ್ಬೂರ, ನಿಜಲಿಂಗಪ್ಪ ತೋಟದ, ಆತ್ಮಾನಂದ ದೊಡಮನಿ, ಡಾ.ರಮೇಶ ರಾಠೋಡ ಬಹುಮಾನದ ಪ್ರಾಯೋಜಕತ್ವ ವಹಿಸಿದ್ದರು. ಆಹೇರಿಯ ಅರವಿಂದ ಬಿರಾದಾರ ಟ್ರೋಫಿ ವಿತರಿಸಿದರು.
ವಿಜಯಪುರ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಶಿಯೇಶನ ಕಾರ್ಯದಶರ್ಿ ಬಂಡೆಪ್ಪ ತೇಲಿ ಮಾತನಾಡಿ, ಯುವ ಜನರು ಕಬಡ್ಡಿಯಂತಹ ಕ್ರಿಡೆಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ನವೆಂಬರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಹೇರಿಯಲ್ಲಿ ಅಂತರರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಮುಕ್ತ ಪಂದ್ಯಾವಳಿಯನ್ನು ಸಂಘಟಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಜಿಲ್ಲಾ ಅಮೆಚೂರ ಕಬಡ್ಡಿ ಅಸೋಶಿಯೇಶನ್ ಅಧ್ಯಕ್ಷ ಶರಣಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಶಿವಣಗಿ, ರವಿ ಇಬ್ರಾಹಿಂಪೂರ, ಶ್ರೀಕಾಂತ ಇಬ್ರಾಹಿಮಪೂರ, ವಿಶ್ವನಾಥ ವಾಲಿಕಾರ, ಹಣಮಂತ ತೇಲಿ, ಜಟ್ಟೆಪ್ಪ ಶಿರಕನಳ್ಳಿ, ಕಲ್ಲಪ್ಪ ಹಡಗಲಿ, ನಾಗು ಭೋವಿ, ಅರವಿಂದ ಬಿರಾದಾರ ಅರುಣ ಶಿವಣಗಿ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯ ಮಟ್ಟದ ತೀರ್ಪುಗಾರರಾದ ರಮೇಶ ಪಾಟೀಲ, ವಿ.ಸಿ. ಚವ್ಹಾಣ, ಜಿ.ಎಸ್. ಪಾಟೀಲ ನಿಣರ್ಾಯಕರಾಗಿ ಕಾರ್ಯನಿರ್ವಹಿಸಿದರು. ಸಂಜು ಮೆಟಗಾರ ಸ್ವಾಗತಿಸಿದರು. ಪ್ರವೀಣ ಇಬ್ರಾಹಿಂಪೂರ ವಂದಿಸಿದರು.