ಲೋಕದರ್ಶನ ವರದಿ
ವಿಜಯಪುರ 13: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ತೊರವಿ ಕ್ಯಾಂಪಸ್ನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಜರುಗಿದ ವಿಜಯಪುರ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಕಬಡ್ಡಿಯಲ್ಲಿ ವಿಜಯಪುರ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಶಿಯೇಷನ ತಂಡ ಚಾಂಪಿಯನ್ನಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ವಿಜೇತ ತಂಡದೊಂದಿಗೆ ವಿಜಯಪುರ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಶಿಯೇಶನ ಕಾರ್ಯದಶರ್ಿ ಬಂಡೆಪ್ಪ ತೇಲಿ, ಕ್ರೀಡಾಪಟುಗಳಾದ ಅಪ್ಪಾಜಿ ಹಿರೇಮಠ, ಬಸವರಾಜ ಕರೆಣಿ, ವಿಜಯ ಶಿಂಧೆ, ಕುಮಾರ ಕೋಳಿ, ರಫೀಕ ಮುಲ್ಲಾ, ಶ್ರೀಶೈಲ ಬಿಜ್ಜರಗಿ, ಸುನೀಲ ಬೆಣ್ಣಿ, ಶಾದಿಕ ಜಮಾದಾರ, ಸುನೀಲ ಕೋಳಿ, ಸದಾಶಿವ ಯಕ್ಸಂಬಾ ಹಾಗೂ ಜಿ.ಎಸ್. ಪಾಟೀಲ ಇದ್ದಾರೆ.