ಲೋಕದರ್ಶನ ವರದಿ
ವಿಜಯಪುರ 21: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಆತಂಕಪಡದ ರೀತಿಯಲ್ಲಿ ಹಾಗೂ ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ರಸಗೊಬ್ಬರ-ಬೀಜ ಪೂರೈಕೆದಾರರು-ಮಾರಾಟಗಾರರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಬೀಜ-ರಸಗೊಬ್ಬರ ಮಾರಾಟಗಾರರು ಹಾಗೂ ಪೂರೈಕೆದಾರರೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯು ಬರ ಹಾಗೂ ನೆರ ಪರಿಸ್ಥಿತಿ ಎದುರಿಸಿದೆ. ಆದರೂ ಕೂಡ ರೈತರಿಗೆ ಸಕಾಲಕ್ಕೆ ಸ್ಪಂದಿಸುವ ಅಗತ್ಯವಿದ್ದು, ರೈತರು ಬೀಜ ಮತ್ತು ರಸಗೊಬ್ಬರ ಪಡೆಯುವಲ್ಲಿ ಯಾವುದೇ ರೀತಿಯ ಆತಂಕಪಡದಂತೆ ಮುನ್ನೆಚ್ಚರಿಕೆ ವಹಿಸಲು ಮಾರಾಟಗಾರರು ಹಾಗೂ ಪೂರೈಕೆದಾರರಿಗೆ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿದರ್ೇಶಕ ಶಿವಕುಮಾರ, ಈಗಾಗಲೇ ಯೂರಿಯಾ ರಸಗೊಬ್ಬರ ಸಾಕಷ್ಟು ಪ್ರಮಾಣದ ಪೂರೈಕೆಗೆ ಸಂಬಂಧಪಟ್ಟ ಕಂಪನಿಗಳಿಗೆ ಕೋರಲಾಗಿದೆ. ರಸಗೊಬ್ಬರ ಬಂದ ತಕ್ಷಣ ಶೇಕಡಾ 10ರಷ್ಟು ಫೇಡರೇಶನ್ದಲ್ಲಿ ದಾಸ್ತಾನು ಮಾಡಲಾಗುವುದು. ಸಂಬಂಧಪಟ್ಟ ಮಳಿಗೆಗಳಲ್ಲಿ ಕಡ್ಡಾಯವಾಗಿ ಬೀಜ ರಸಗೊಬ್ಬರಗಳ ದರ ಪ್ರದರ್ಶನ ಹಾಗೂ ಬಿಲ್ ನೀಡಬೇಕು. ತನಿಖಾ ದಳಗಳಿಂದ ಸಹ ನಿರಂತರ ನಿಗಾ ಇಡಲಾಗುವುದೆಂದ, ಕಳಪೆ ಮಟ್ಟದ ಬೀಜ-ರಸಗೊಬ್ಬರ ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕು.
ಅದರಂತೆ ಸಧ್ಯದಲ್ಲಿ ರಾಜ್ಯ ಮಟ್ಟದಲ್ಲಿ ಕೃಷಿ ಜಂಟಿ ನಿದರ್ೇಶಕರ ಸಭೆ ಸಹ ನಡೆಯಲಿದ್ದು, ಈಗಾಗಲೇ ಬೀಜ ರಸಗೊಬ್ಬರ ಮಾರಾಟಗಾರರಿಂದ ಬಂದಿರುವ ಅನಿಸಿಕೆ ಮತ್ತು ಸಲಹೆಗಳ ಬಗ್ಗೆ ಸೂಕ್ತ ಪರಿಹಾರ ಈ ಸಭೆಯಲ್ಲಿ ಪಡೆಯಲಾಗುವುದು. ಒಟ್ಟಾರೆ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಅತ್ಯುತ್ತಮವಾಗಿ ಬೀಜ-ರಸಗೊಬ್ಬರ ಮಾರಾಟ ಹಾಗೂ ನಿರ್ವಹಣೆಯಾಗಿದ್ದು, ಇದಕ್ಕಾಗಿ ಸ್ಪಂದಿಸಿದ ಎಲ್ಲ ಮಾರಾಟಗಾರರಿಗೆ ಹಾಗೂ ಪೂರೈಕೆದಾರರಿಗೆ ಅಭಿನಂದನೆ ಸಲ್ಲಿಸಿದರು