ವಿಜಯಪುರ: ಕೇಂದ್ರ ಬೀಜ ವಿತರಣಾ, ಕೃಷಿ ಹೊಂಡ ತೆಗೆಯುವುದಾಗಿ ಭರವಸೆ

ಲೋಕದರ್ಶನ ವರದಿ

ವಿಜಯಪುರ 12: ಕನರ್ಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ಹೊನವಾಡ ಘಟಕ ವತಿಯಿಂದ ವಿವಿಧ ಬೇಡಿಕೆಗಳ ಒತ್ತಾಯಿಸಿ ಜಂಟಿ ಕೃಷಿ ನಿದರ್ೇಶಕರಾದ ಎಚ್.ಬಿ. ಪಡಸಲಗಿ ಹಾಗೂ ಕೃಷಿ ನಿರ್ದೇಶಕರು ವಿಜಯಪುರ ಅವರಿಗೆ  ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಪಡಸಲಗಿ ಮಾತನಾಡಿ, ಕೇಂದ್ರ ಬೀಜ ವಿತರಣಾ ಹಾಗೂ ಕೃಷಿ ಹೊಂಡ ತೆಗೆಯಲಾಗುವುದು ಎಂದು ಆಶ್ವಾಸನೆ ನೀಡಿದರು.

ತಾಲೂಕಾ ಪಂಚಾಯತಿ ಕಾರ್ಯನಿವರ್ಾಹಕ ಬಿ.ಆರ್. ರಾಠೋಡ ಮಾತನಾಡಿ, ಮನವಿಪತ್ರಗಳಲ್ಲಿನ ಆಧಾರ ಕಾಡ್ ಕೇಂದ್ರ ಸ್ಥಾಪನೆ, ಹಗಲತ್ತಿನಲ್ಲಿ ಬೀದಿ ದೀಪಗಳು ಉರಿಯುವ ಕುರಿತು, ಗ್ರಾಮದ ಸ್ವಚ್ಛತೆ ಸಲುವಾಗಿ  ಪ್ರತಿಯೊಂದು ವಾಣಿಜ್ಯ ಕಟ್ಟಡಗಳ (ಕಿರಾಣಿ ಅಂಗಡಿ, ಪಾನಶಾಪ್, ಡಾಬಾ ಹೊಟೇಲ್, ಇನ್ನು ಮುಂತಾದ) ಕಡೆ ಹಾಗೂ ಪ್ರಮುಖ ಬೀದಿಗಳಲ್ಲಿ ಕಸದ ತೊಟ್ಟಿ ಇಟ್ಟಿರುವುದಿಲ್ಲ. 

ಬಾಪೂಜಿ ಸೇವಾ ಕೇಂದ್ರದಲ್ಲಿ ನೀಡಲಾಗುವ ಎಲ್ಲಾ ಸೇವೆಗಳನ್ನು ಒದಗಿಸುವ ಮತ್ತು ಅವುಗಳ ವೆಚ್ಚ ಬಗ್ಗೆ ಹಾಗೂ ಅವುಗಳನ್ನು ಒದಗಿಸಲು ಇರುವ ಕಾಲಮಿತಿ ಪಟ್ಟಿ ಮಾಡಿ ಸಾರ್ವಜನಿಕರಿಗೆ ಎದ್ದು ಕಾಣುವಂತೆ ಬೋರ್ಡ್  ಅಳವಡಿಸಿರುವುದಿಲ್ಲ ನಳಗಳಲ್ಲಿ ಸುಮಾರು ತಿಂಗಳಿಂದ ನೀರು ಬರುತಿಲ್ಲ ನಿಯಮಿತವಾಗಿ ನೀರು ಬಿಡುತ್ತಿಲ್ಲ. ಗ್ರಾಮದಿಂದ ಗ್ರಾಮಕ್ಕೆ ಇರುವ ರಸ್ತೆ ಬದಿಯ ಜಂಗಲ್ ಕಡಿದಿರುವುದಿಲ್ಲ ಇವುಗಳ ಕುರಿತು ಕ್ರಮ ಕೈಗೊಳ್ಳುತ್ತೇನೆ. 

ಕೆಎಸ್.ಆರ್.ಟಿ.ಸಿ ಹೊನವಾಡಗ್ರಾಮಕ್ಕೆ ಬಸ್ ಬಿಡುಗಡೆ ಗೊಳ್ಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಹೊನವಾಡದಿಂದ ತಿಕಾಟಾವರೆಗೆ ಟಿಕೆಟ್ ದರ 25 ಇರುತ್ತದೆ. ಅದನ್ನು 15 ವರೆಗೆ ಇಳಿಸಬೇಕು ಎಂದು ಕೆ.ಎಸ್.ಆರ.ಟಿ ವಿಭಾಗೀಯ ನಿಯಂತ್ರಾಣಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಕನರ್ಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಹೊನವಾಡ ಘಟಕದ ಅಧ್ಯಕ್ಷ ಧರೆಪ್ಪ ಗುಗ್ಗರಿ, ಉಪಾಧ್ಯಕ್ಷ ಈರಪ್ಪ ತೇಲಿ ನೇತೃತ್ವ ವಹಿಸಿದ್ದರು. ಶ್ರೀಮಂತ ಚೌರಿ, ಮಲ್ಲಿಕಾಜರ್ುನ ಗುಗ್ಗರಿ, ವಿವೇಕಾನಂದ ಮಾಲಗಾರ, ಅರುಣಬಾಶ್ಯಾ ಹೆಳಕರ, ಬಸು ಕಾತ್ರಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.