ಲೋಕದರ್ಶನ ವರದಿ
ವಿಜಯಪುರ 19: ಕನರ್ಾಟಕ ರಾಜ್ಯ ವಿಶ್ವವಿದ್ಯಾಲಯಗಳ ರೇಟಿಂಗ್ ಫ್ರೇಂವರ್ಕ -2019 (ಕೆಎಸ್ಯುಆರ್ಎಫ್) ರಾಜ್ಯದ 43 ವಿಶ್ವವಿದ್ಯಾಲಯಗಳ ಗುಣಮಟ್ಟದ ಅಧ್ಯಯನ ನಡೆಸಿ ರೇಟಿಂಗ್ ಪ್ರಕಟಿಸಲಾಗಿದ್ದು, ವಿಶೇಷ ವಿಶ್ವವಿದ್ಯಾಲಯಗಳ ಪೈಕಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ನಾಲ್ಕು ಸ್ಟಾರ್ ದೊರೆತಿದೆ.
ಮಹಿಳಾ ವಿವಿಗೆ ನಾಲ್ಕು ಸ್ಟಾರ್ ದೊರೆತಿರುವ ಹಿನ್ನೆಲೆಯಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಹಿಳಾ ವಿಶ್ವವಿದ್ಯಾಲಯದ ಸಂಶೋಧನಾ ಗುಣಮಟ್ಟ, ಸೃಜನಶೀಲತೆ, ಬೋಧನಾ ಪರಿಣತಿ ಮತ್ತು ಉದ್ಯೋಗಶೀಲತೆ, ಮೂಲಭೂತ ಸೌಕರ್ಯ, ಪಾಲ್ಗೊಳ್ಳುವಿಕೆ ಮತ್ತು ಸಾಮಾಜಿಕ ಪರಿಣಾಮ ಇಂತಹ ಅಂಶಗಳನ್ನು ಪರಿಗಣಿಸಿ ಕೆಎಸ್ಯುಆರ್ಎಫ್ ಮಹಿಳಾ ವಿವಿಗೆ ನಾಲ್ಕು ಸ್ಟಾರ್ ನೀಡಿರುವುದು ವಿವಿಯ ಅಭಿವೃದ್ಧಿಯ ಪಥವನ್ನು ಮತ್ತಷ್ಟು ಬಲಗೊಳಿಸಿದೆ. ಎಂದು ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ತಿಳಿಸಿದ್ದಾರೆ.
ಈ ಸಾಧನೆಗೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಅಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಪರಿಶ್ರಮವೇ ಕಾರಣ. ಈ ಕಾರಣಕ್ಕೆ ಎಲ್ಲರನ್ನೂ ಅಭಿನಂದಿಸುವುದಾಗಿ ಕುಲಪತಿಗಳು ತಿಳಿಸಿದ್ದಾರೆ.