ಲೋಕದರ್ಶನ ವರದಿ
ವಿಜಯಪುರ 11: ನಗರದ ಶಿವಾಜಿ ವೃತ್ತದಲ್ಲಿ ಶ್ರೀ ಗಜಾನನ ಮಹಾಮಂಡಳ ಪ್ರತಿಷ್ಠಾಪಿಸಿದ ಗಣೇಶನ ಉತ್ಸವ ಮೂತರ್ಿಯ ವಿಸರ್ಜನಾ ಪೂರ್ವ ಮೆರವಣಿಗೆ ಮಂಗಳವಾರ ಸರಳವಾಗಿ ನಡೆಯಿತು.
ನೆರೆ ಸಂತ್ರಸ್ತರಿಗೆ ನೆರವಾಗುವ ದೃಷ್ಟಿಯಿಂದ ಅದ್ದೂರಿ ಮೆರವಣಿಗೆಗೆ ವಿರಾಮ ನೀಡಿದ್ದ ಮಹಾಮಂಡಳ ಈ ಬಾರಿ ಅತ್ಯಂತ ಸರಳವಾಗಿ ಹಾಗೂ ಸಾಂಪ್ರದಾಯಿಕ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಿತು.
ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಪರಿಸರ ಸ್ನೇಹಿ ಮಣ್ಣಿನ ಮೂತರ್ಿಯನ್ನು ಅದೃಷ್ಟ ಲಕ್ಷ್ಮೀ ದೇವಾಲಯದ ಬಳಿ ಇರುವ ಕೃತಕ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು. ಪರಿಸರ ಸ್ನೇಹಿಯಾಗಿ ಆಚರಣೆ ಮಾಡುವ ದೃಷ್ಟಿಯಿಂದ ಸುಮಾರು 15 ವರ್ಷಗಳ ಕಾಲ ಒಂದೇ ಮೂತರ್ಿಯನ್ನು ಪ್ರತಿಷ್ಠಾಪಿಸುವ ದೃಷ್ಟಿಯಿಂದ 15 ಅಡಿ ಎತ್ತರದ ಫೈಬರ್ನಲ್ಲಿ ಉತ್ಸವ ಮೂತರ್ಿಯನ್ನು ಸಹ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಈ ಉತ್ಸವ ಮೂತರ್ಿಗೂ ಸಹ ವಿಶೇಷ ಪೂಜೆ ಸಲ್ಲಿಸಿ ಅದನ್ನು ಅದೃಷ್ಟಲಕ್ಷ್ಮೀ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ಇರಿಸಲಾಯಿತು.
ಶಿವಾಜಿ ವೃತ್ತದಿಂದ ಆರಂಭಗೊಂಡ ವಿಸರ್ಜನಾ ಪೂರ್ವ ಮೆರವಣಿಗೆ ಉಪಲಿ ಬುರುಜ್, ಆಜಾದ್ ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಚರಿಸಿ ಗ್ಯಾಂಗ್ ಬಾವಡಿ ಸಮೀಪವಿರುವ ಅದೃಷ್ಟಲಕ್ಷ್ಮೀ ದೇವಾಲಯದ ಸಮೀಪ ನಿರ್ಮಿಸಲಾಗಿರುವ ಕೃತಕ ಹೊಂಡಕ್ಕೆ ತಲುಪಿ ಸಂಪನ್ನಗೊಂಡಿತು. ಅಲ್ಲಿ ವಿಶೇಷ ಪೂಜೆ ನೆರವೇರಿಸಿ ಗಣೇಶನ ಉತ್ಸವ ಮೂತರ್ಿಯನ್ನು ಶ್ರದ್ಧಾ-ಭಕ್ತಿಪೂರ್ವಕವಾಗಿ ವಿಸಜರ್ಿಸಲಾಯಿತು.
ಸಾಧಕರಿಗೆ ವಿಜಯಪುರ ರತ್ನ ಪ್ರಶಸ್ತಿ ಪ್ರದಾನ:
ಶಿವಾಜಿ ವೃತ್ತದಲ್ಲಿ ನಡೆದ ಸಮಾರಂಭದಲ್ಲಿ ಈ ಬಾರಿ ವಿವಿಧ ರಂಗದಲ್ಲಿ ಸಾಧನೆ ತೋರಿದ ಸಾಧಕರಿಗೆ ವಿಜಯಪುರ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪರಿಸರ ಜಾಗೃತಿಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಂಬಾದಾಸ ಜೋಶಿ, ಕಳೆದ ಹಲವಾರು ವರ್ಷಗಳಿಂದ ಒಂದೇ ಒಂದು ರಜೆ ಹಾಕದೇ ಸ್ವಚ್ಛತೆಯ ಕಾಯಕದಲ್ಲಿ ತೊಡಗಿರುವ ಪೌರಕಾಮರ್ಿಕ ಯಂಕಪ್ಪ ಅಲಿಭಾವಿ, ಸಾವಯವ ಕೃಷಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಲಕ್ಷ್ಮಣ ಹಜೇರಿ ಅವರಿಗೆ ವಿಜಯಪುರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಪ್ರಸ್ತುತ ಅತ್ಯಂತ ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಣೆ ಮಾಡಲಾಗಿದೆ. ನೆರೆ ಸಂತ್ರಸ್ತರಿಗೆ ನೆರವು ನೀಡುವ ದೃಷ್ಟಿಯಿಂದ ಸರಳವಾಗಿ ಮೆರವಣಿಗೆ ಮಾಡಲಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಯರನಾಳ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ಭಾರತದ ನೆಲ ಪುಣ್ಯ ನೆಲ, ಅಭಿನಂದನೆಯ ನೆಲ. ಇಲ್ಲಿ ಕಣಕಣದಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ವಿ.ಪ ಮಹಾಮಂಡಳದ ಅಧ್ಯಕ್ಷ ರವಿ ಮೂಕತರ್ಿಹಾಳ, ಗೋಪಾಲ ಘಟಕಾಂಬಳೆ, ಶಂಕರ ಕುಂಬಾರ, ಪ್ರಕಾಶ ಮಿಜರ್ಿ, ಬಾಬು ಏಳಗಂಟಿ, ಆನಂದ ಮುಚ್ಚಂಡಿ, ಸಿದ್ಧು ಮಲ್ಲಿಕಾಜರ್ುನಮಠ, ವಿ.ಕೆ. ಸುರಪುರ, ತ್ರಿಲೋಚನ ಗವಿಮಠ, ವಿಜಯ ಜೋಶಿ ಮೊದಲಾದವರು ಉಪಸ್ಥಿತರಿದ್ದರು.