ಲೋಕದರ್ಶನ ವರದಿ
ವಿಜಯಪುರ 10: ಜೀವನದಲ್ಲಿ ನಾವು ಎಷ್ಟು ಸಾಧನೆ ಮಾಡಿದ್ದರೂ ಸಹ ನಮ್ಮ ಸಾಧನೆಗೆ ಸಹಕಾರಿಯಾದ ಗುರುವನ್ನು ಯಾವತ್ತು ಮರೆಯಬಾರದು ಎಂದು ಅಮ್ಮನ ಮಡಿಲು ಚಾರಿಟೇಬಲ್ ಸಂಸ್ಥೆ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಪ್ರಾಯಪಟ್ಟರು.
ನಗರದ ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಹಮ್ಮಿಕೊಳ್ಳಲಾದ ನಮ್ಮ ಸಾಧನೆಗೆ ಸಹಕಾರಿಯಾದ ಗುರುವನ್ನು ಯಾವತ್ತು ಮರೆಯಬಾರದುವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಥರ್ಿಗಳ ಜೀವನ ಬಹು ಮೌಲ್ಯವುಳ್ಳದ್ದು. ಆ ಸಮಯದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಅವಶ್ಯಕ. ನೀವು ಜಾಗತಿಕ ಮಟ್ಟದಲ್ಲಿ ನಿಸ್ವಾರ್ಥ ಪತ್ರಕರ್ತರಾಗಿ ಜೀವನ ಸಾಗಿಸಬೇಕು. ಇಂದಿನ ಪರ್ತಕರ್ತರು ದುರಾಸೆಗಳಿಂದ ತಮ್ಮ ವೃತ್ತಿ ಕರ್ತವ್ಯವನ್ನು ಮರೆಮಾಚುಸುತ್ತಿದ್ದಾರೆ. ಸಮಾಜದ ಓರೆ-ಕೊರೆಗಳನ್ನು ತಿದ್ದುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ನಿಮ್ಮ ಪ್ರೀತಿಸಿದವರಿಗಾಗಿ, ಗೌರವಿಸಿದವರಿಗಾಗಿ, ಶಿಕ್ಷಣ ನೀಡಿದವರಿಗಾಗಿ, ನಿಮ್ಮ ನಿಷ್ಠೆಯುತವಾದ ಅಧಿಕಾರ ಕಾರ್ಯವನ್ನು ನಿರ್ವಹಿಸುವುದೆ ನೀವು ನಮ್ಮೆಗೆಲ್ಲಾ ನೀಡುವ ಅತಿ ದೊಡ್ಡ ಕೊಡುಗೆ ಎಂದು ಅವರು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ತಹಮೀನಾ ಕೋಲಾರ ಮತ್ತು ಸಂದೀಪ ವೇದಿಕೆ ಮೇಲಿದ್ದರು.ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಂಶೋಧನಾ ಮತ್ತು ಸ್ನಾತಕೋತ್ತರ ವಿಧ್ಯಾಥರ್ಿನಿಯರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾಥರ್ಿನಿಯರಾದ ಶ್ರೀದೇವಿ, ಶ್ವೇತಾ ಪ್ರಾಥರ್ಿಸಿದರು. ದೀಪಾ ಮಂಜರಗಿ ಸ್ವಾಗತಿಸಿ, ಪರಿಚಯಿಸಿದರು. ರೇಣುಕಾ ಸಾಗರ ನಿರೂಪಿಸಿದರು, ದಾನಮ್ಮಾ ಹುಣ್ಣೂರ ವಂದಿಸಿದರು.