ಲೋಕದರ್ಶನ ವರದಿ
ವಿಜಯಪುರ 20: ನಗರದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ವಿಜಯಪೂರ ಜಿಲ್ಲಾ ಜಂಗಮ ಕ್ಷೇಮಾಭಿವೃದ್ಧಿ ಸಂಘ, ತಾಲ್ಲೂಕಾ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವೀರಶೈವ ಮತ ಸ್ಥಾಪಕ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು ಸಾನಿದ್ಯ ವಹಿಸಿದ್ದ ಶ್ರೀ ಘನಲಿಂಗ ಚಕ್ರವತರ್ಿ ಪ್ರಭುಕುಮಾರ ಶಿವಾಚಾರ್ಯ ಮಹಾ ಸ್ವಾಮಿಗಳು ಶ್ರೀ ಜಗಧೀಶ್ವರ ಹಿರೇಮಠ್(ಮಸೂತಿ) ಅವರು ಮಾತನಾಡುತ್ತಾ ಸಾವಿರಾರು ವರ್ಷಗಳಿಂದ ಮಾನವ ಜನಾಂಗಕ್ಕೆ ದಾರಿ ದೀಪವಾಗಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗಿದ್ದಾರೆ, ಪೃಕೃತಿಯ ಪ್ರತೀಕವಾಗಿದ್ದು ವೀರಶೈವ ಎಂಬ ಮಾನವಿಯ ಸಂಸ್ಕಾರದ ಧರ್ಮವನ್ನು ಜಗತ್ತಿಗೆ ನೀಡಿ ಮಾನವ ಕಲ್ಯಾಣ ಇಂದಿಗೂ ಮುಂದುವರೆಸಿದ್ದಾರೆ ಅವರು ಸ್ಥಾಪಿಸಿದ ಪಂಚ ಪೀಠಗಳು & ಅವುಗಳ ಶಾಖಾ ಮಠಗಳು ಜನ ಕಲ್ಯಾಣದಲ್ಲಿ ನಿರತವಾಗಿರುವದನ್ನು ಕಾಣಬಹುದೆಂದು ತಿಳಿಸಿದರು. ಉಪನ್ಯಾಸಕರಾಗಿ ಆಗಮಿಸಿದ್ದ ಶಿವಾನಂದ ಶಾಸ್ತ್ರಿಗಳು ಮಾತನಾಡಿ ಆದಿಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರಕಾರದಿಂದ ರಜೆ ರಹಿತವಾಗಿ ಆಚರಿಸಲು & ಜಂಗಮ ಅಭೀವೃದ್ಧಿ ನಿಗಮ, & ಜಂಗಮರಿಗೆ ನೀಡಲಾಗಿರುವ ಪರಿಶಿಷ್ಟ ವರ್ಗ ಪ್ರಮಾಣ ಪತ್ರ ಎಲ್ಲಾ ಜಂಗಮರಿಗೂ ತೂಂದರೆ ಇಲ್ಲದೆ ಸಿಗುವಂತೆ ಕ್ರಮಕೈಗೊಳ್ಳಲು ಸರಕಾರಕ್ಕೆ ಆಗ್ರಹಿಸಿದರು ಭಾಗವಹಿಸಿದ್ದರು.
ಜಿಲ್ಲಾ ಅದ್ಯಕ್ಷ ಚಂದ್ರಕಾಂತ ಹಿರೇಮಠ ಸಮಾರಂಭವನ್ನು ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿದರು ಸಮಾರಂಭದ ಅದ್ಯಕ್ಷತೆಯನ್ನು ಮಹಾಂತೇಶ ಮಹಾಂತಮಠ ವಹಿಸಿದ್ದರು ಕಾರ್ಯಕ್ರಮ ನಿರೂಪಣೆ ಎಸ್.ಎಸ್.ಹಿರೇಮಠ ,ಎಸ್.ಕೆ ಸಾವಳಗಿಮಠ ಸ್ವಾಗತಕೋರಿದರು ಸಮಾರಂಭದಲ್ಲಿ ಹಿರಿಯರಾದ ಚಿಕ್ಕಯ್ಯಾ ನಂದಿಕೂಲಮಠ್, ಅರ್ಚಕರ ಸಂಘದ ಅದ್ಯಕ್ಷ ಸಿದ್ದು ಹಿರೇಮಠ್, ಚಿದು ಹಿರೇಮಠ್, ಚೌಕಿಮಠ್, ಚಿನ್ನಕಾಳಿಮಠ್, ಪುಷ್ಪಾ ಮಹಾಂತಮಠ. ಶಿವಕಾಂತಮ್ಮ ಮಠ, ಇಜೇರಿ ಮೆಡಮ್ ಪವಾಡ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಇನ್ನೂ ಹಲವಾರು ಭಕ್ತರು ಭಾಗವಹಿಸಿದ್ದರು