ವಿಜಯಪುರ: ಸೃಜನಾತ್ಮಕ ಸಾಹಿತ್ಯಕಲೆಗೆ ಹೆಸರುವಾಸಿಯಾಗಿದ್ದ ಹಲಸಂಗಿ ಗೆಳೆಯರು

ಲೋಕದರ್ಶನ ವರದಿ

ವಿಜಯಪುರ 01: ಉನ್ನತಸಾಧನೆ ಮಾಡಿದ ಅನೇಕ ಮಹನೀಯರು ಕನಿಷ್ಠ ಶಿಕ್ಷಣವಂತರಾಗಿದ್ದು ಅವರು ತಮ್ಮ ಜೀವನವನ್ನೆ ಪಾಠವನ್ನಾಗಿಸಿಕೊಂಡು ಮುಂದುವರೆದು ಇಂದು ಇತಿಹಾಸ ಪುಟ ಸೇರಿದ್ದಾರೆ. ಅಂತಹವರ ಸಾಲಿನಲ್ಲಿ ಹಲಸಂಗಿ ಗೆಳೆಯರು ಕೂಡ ಪ್ರಮುಖರಾಗಿದ್ದಾರೆ ಎಂದು ವಿಶ್ರಾಂತ ಐ.ಎ.ಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ ಹೇಳಿದರು.

      ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಳಸಂಗಿ ಗೆಳೆಯರ ಪ್ರತಿಷ್ಠಾನ ಇವರ ಸಂಯುಕ್ತಾಶ್ರದಲ್ಲಿ ಭಾನುವಾರ ನಗರದ ಕಂದಗಳ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಸಾರಸ್ವತ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ 

     ಹಲಸಂಗಿ ಗೆಳೆಯರು ಕನಿಷ್ಠ ಮಟ್ಟದ ವಿದ್ಯವಂತರಾಗಿದ್ದು ಜಾನಪದ ಸಾಹಿತ್ಯಕೃಷಿಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ಅಮರರಾಗಿದ್ದಾರೆ. ಪ್ರಸ್ತುತ ದಿನಗಳಲ್ಲಿ ಪದವಿ ಹಂತದವರು ಕೂಡ ಅಭ್ಯಾಸಿಸುವಂತ ಸಾಹಿತ್ಯವನ್ನು ರಚಿಸಿದ್ದಾರೆ, ಇವರ ನೈಜ ಜೀವನದ ಚಿತ್ರಣವೇ ಸಾಹಿತ್ಯಲೋಕವಾಗಿತ್ತು ಎಂದರು.

    ಇಂದು ಲಕ್ಷಾನುಗಟ್ಟಲೆ ಪದವಿದರರಿದ್ದು ಹಲಸಂಗಿ ಗೆಳೆಯರ ಸೃಜನಾತ್ಮಕ ಸಾಹಿತ್ಯ ಕಲೆಯ ರಚನೆಗೆ ಮುಂದಾಗಬೇಕಿದೆ, ಜೀವನವನ್ನು ಉತ್ತುಂಗಕ್ಕೇರಿಸುವಂತ ಸೃಜನಾತ್ಮಕ ಬರಹಗಳನ್ನು ಅಭ್ಯಾಸಿಸುವುದರ ಮೂಲಕ ಇದನ್ನು ಸಾಧಿಸಬಹುದು, ನಮ್ಮ ನಾಡು ನುಡಿ ಭಾಷೆ ಬೆಳವಣಿಗೆಗೆ ಸಾಹಿತ್ಯ ಕೃಷಿಯೇ ಮೂಲಮದ್ದಾಗಿದ್ದು ಹಿರಿಯರ ಮಾರ್ಗದರ್ಶನದಲ್ಲಿ ಹೀಗಿನ ಯುವ ಜನತೆ ರಾಷ್ಟ್ರಿಯ ಅಂತರಾಷ್ಟ್ರಿಯ ಮಟ್ಟದಲ್ಲಿ ನಮ್ಮ ಭಾಷೆಯ ಗಟ್ಟಿತನವನ್ನು ಎಲ್ಲೆಡೆ ಪಸರಿಸುವಂತೆ ಮಾಡಲು ಶ್ರಮಿಸಬೇಕಿದೆ ಎಂದು ಅವರು ಯುವ ಸಮುದಾಯಕ್ಕೆ ಸಂದೇಶ ರವಾನಿಸಿದರು.

       ಸಂಚಾಲಕ ಡಾ.ಎಸ್.ಕೆ. ಕೊಪ್ಪಾ ಪ್ರಾಸ್ತವಿಕವಾಗಿ ಮಾತನಾಡಿ ಇಪ್ಪತ್ತನೆ ಶತಮಾನದ ಕಾಲಘಟ್ಟದಲ್ಲಿ ಹಲಸಂಗಿ ಗೆಳೆಯರಲ್ಲಿ ಇದ್ದಂತಹ ನಾಡು ನುಡಿಯ ರಕ್ಷಣೆ, ಹಾಗೂ ಸಾಹಿತ್ಯ ಆಸಕ್ತಿಗಳು ಅವರನ್ನು ಬರಹಗಾರರನ್ನಾಗಿ ಪರಿವತರ್ಿಸಿದ್ದವು, ಹಲಸಂಗಿ ಎಂಬ ಪುಟ್ಟ ಗ್ರಾಮದಲ್ಲಿ ವೇದ ಉಪನಿಷತ್ತನ್ನು ಅಭ್ಯಾಸಿಸಿ ಬರಹದ ಕ್ರಾಂತಿಯನ್ನೆ ಹೆಬ್ಬಿಸಿ ಸಮೃದ್ದಿ ನಾಡಿನ ಬೆಳವಣಿಗೆಗೆ ಸಹಕಾರಿಯಾಗಿದ್ದರು. ಜಾನಪದ ಸಾಹಿತ್ಯದಲ್ಲಿ ಹಲಸಂಗಿ ಗೆಳೆಯರ ಹೆಸರು ಅಜರಾಮರವಾಗಿದ್ದು ಕಾವ್ಯ ಕ್ಷೇತ್ರದಲ್ಲಿ ಇವರು ಮೊದಲಿಗರಾದ್ದಾರೆ. ಶಾಲ, ಕಾಲೇಜುಗಳಲ್ಲಿ ಇವರ ಸಾಹಿತ್ಯ ಕೊಡುಗೆಯನ್ನು ಎಲ್ಲೆಡೆ ಪಸರಿಸುವಂತೆ ಶ್ರಮಿಸಬೇಕಿದೆ ಎಂದು ಅವರು ಹೇಳಿದರು.

         ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕಿ  ವಿದ್ಯಾವತಿ ಎಚ್,ಬಿ ಮಾತನಾಡಿ ಹಲಸಂಗಿ ಗೆಳೆಯರಿಗೆ ಜಾನಪದ ಸಾಹಿತ್ಯವೇ ಮೂಲ ಬೇರಾಗಿ ಬೆಳೆದಿದೆ  ಈ ಕ್ಷೇತ್ರದಲ್ಲಿ ತಮ್ಮ ತ್ಯಾಗ ಅತ್ಯುತ್ತಮವಾದದ್ದು ಈ ಮೂಲ ಬೇರುಗಳ ಉಳಿವಿಗಾಗಿ ಇಂತಹ ಪ್ರತಿಷ್ಠಾನಗಳು ರಚನೆಯಾಗಿ ನಾಡು ನುಡಿ ಭಾಷೆಯ ರಕ್ಷಣೆಗೆ ಮುಂದಾಗಬೇಕಿದೆ ಎಂದು ಹೇಳಿದರು.

       ಇದೇ ಸಂದರ್ಭದಲ್ಲಿ ಸಾಹಿತ್ಯದ ವಿವಿಧ ವಲಯಗಳಲ್ಲಿ ಉನ್ನತ ಸಾಧನೆ ಮಾಡಿದ ನಾಡೋಜ ಡಾ.ಚನ್ನವೀರ ಕಣವಿ, ಡಾ.ಎಂ,ಜಿ, ಬಿರಾದಾರ, ಪ್ರಕಾಶಗಿರಿಮಲ್ಲನವರ, ಡಾ.ಜಿ,ವ್ಹಿ.ಕುಲಕರ್ಣಿ, ಡಾ.ವೀರಣ್ಣ ರಾಜೂರ, ಡಾ.ಪಿ.ಕೆ.ರಾಜಶೇಕರ, ಮಂಜುಳಾ ಹುಲಿಕುಂಟೆ, ಇವರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ          ನಿರೂಪಣೆಯನ್ನು ದೊಡ್ಡಣ್ಣ ಬಜಂತ್ರಿ ಹಾಗೂ ಸಂಗೀತಗಾಯನವನ್ನು ಶಶಿಕಲಾ ಕುಲ್ಲೊಳ್ಳಿ ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಡಾ. ಗುರುಲಿಂಗ ಕಾಪಸೆ, ಪ್ರಕಾಶ್ ಗೀರ್ಮಲ್ , ಡಾ.ಎಂ.ಎಸ್.ಮದಭಾವಿ ಸೇರಿದಂತೆ ಇನ್ನೂ ಮುಂತಾದ ಸಾಹಿತಿಗಳು ಸಾಹಿತ್ಯಾಸಕ್ತರು ಉಪಸ್ಥತರಿದ್ದರು.