ವಿಜಯದಶಮಿ: ಪ್ರಾಣಿ ಹತ್ಯೆ ಮಾಡಬಾರದು: ದಯಾನಂದ ಶ್ರೀ

ಲೋಕದರ್ಶನ ವರದಿ

ಬೆಳಗಾವಿ 17 : ವಿಜಯದಶಮಿ ನಿಮಿತ್ಯ ಪ್ರಾಣಿಹತ್ಯೆ ಮಾಡಬಾರದು ಮತ್ತು ಬೆಳಗಾವಿ ಜಿಲ್ಲೆಯ ಕಕ್ಕೇರಿಯಲ್ಲಿ ನಡೆಯಲಿರುವ ಬಿಷ್ಟಾದೇವಿ ಜಾತ್ರೆಯಲ್ಲಿ ಹೈಕೋಟರ್್ ಆದೇಶ ಮೀರಿ ಪ್ರಾಣಿಗಳ ಮಾರಣ ಹೋಮ ನಡೆಯುತ್ತಿರುವುದನ್ನು ತಡೆಗಟ್ಟಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅದ್ಯಕ್ಷ ದಯಾನಂದ ಸ್ವಾಮಿಜಿ ಹೇಳಿದರು

                ಬುಧವಾರ ನಗರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಹೈಕೋರ್ಟನಿಂದ ಪ್ರಾಣಿಬಲಿ ನಿಷೇಧ ಆಧೇಶವಿದ್ದರು ಕೂಡ ಪ್ರತಿವರ್ಷ ಕಕ್ಕೇರಿಯ ಬಿಷ್ಟಾದೇವಿ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿವಧೆ ನಡೆಯುತ್ತಿದೆ ಇದನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಸಂಪೂರ್ಣವಾಗಿ ತಡೆಗಟ್ಟಬೇಕು ಮತ್ತು ವಿಜಯ ದಶಮಿಯ ನಿಮಿತ್ಯ ಪ್ರಾಣಿಗಳನ್ನು ವಧೆ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದರು ಭಾರತದಿಂದ ವಿದೇಶಕ್ಕೆ ಅಪಾರ ಪ್ರಮಾಣದ ಮಾಂಸವನ್ನು ರಪ್ತು ಮಾಡಲಾಗುತ್ತಿದೆ ಇದಕ್ಕಾಗಿ ಸಾವಿರಾರು ಪ್ರಾಣಿಗಳನ್ನು ವಧಿಸಲಾಗುತ್ತಿದೆ ಇದನ್ನು ವಿರೋಧಿಸಿ ಮುಂಬೈನ ಆಗಸ್ಟ್ ಕ್ರಾಂತಿ ಮೈಧಾನದಲ್ಲಿ ಬೃಹತ್ ರ್ಯಾಲಿ ನಡೆಸಲಾಗುತ್ತದೆ ಎಂದು ಹೇಳಿದರು.