ಬೆಳಗಾವಿ 22: ಮಂಬರುವ
ಮೂರು ಲೋಕಸಭೆ ಹಾಗು ಎರಡು ವಿಧಾನಸಭೆ
ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯಥರ್ಿಗಳು ಜಯ ಸಾಧಿಸಲಿದ್ದಾರೆ ಎಂದು
ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್
ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ಸಾಂಬ್ರಾ ವಿಮಾನ
ನಿಲ್ದಾಣದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಜನರು ಸಮ್ಮಿಶ್ರ ಸಕರ್ಾರದ
ಪರವಾಗಿ ಇದ್ದಾರೆ. ಐದು ಕ್ಷೇತ್ರಗಳಲ್ಲಿಯೂ ನಾವು
ಗೆಲುವು ದಾಖಲಿಸಲಿಸದ್ದೇವೆ. ಈ ಉಪ ಚುನಾವಣೆಯ
ಫಲಿತಾಂಶ ಭವಿಷ್ಯದ ಲೋಕಸಭೆ ಚುನಾವಣೆಯ ದಿಕ್ಸೂಚಿ ಆಗದೇ ಇದ್ದರೂ ಮೈತ್ರಿ
ಪಕ್ಷಗಳಿಗೆ ದೊಡ್ಡ ಶಕ್ತಿ ತಂದು ಕೊಡಲಿದೆ. ಬಿಜೆಪಿಯನ್ನು
ದೂರ ಇಡುವ ಉದ್ದೇಶಕ್ಕಾಗಿ ನಾವು
ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಸಚಿವರಾದ ಡಿ.ಕೆ ಶಿವಕುಮಾರ್
ಹಾಗೂ ರಮೇಶ ಜಾರಕಿಹೊಳಿ ಇಬ್ಬರೂ
ಆತ್ಮೀಯ ಸ್ನೇಹಿತರು. ಹೀಗಾಗಿ ಒಬ್ಬರಿಗೊಬ್ಬರು ಮಾತನಾಡುತ್ತಿದ್ದಾರೆ. ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯತೆ ಇಲ್ಲ. ಕಾಂಗ್ರೆಸ್ಸಿನಲ್ಲಿ ಯಾವುದೇ ಭಿನ್ನಮತ ಇಲ್ಲ. ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ ಎಂದರು. ಕನ್ನಡ ರಾಜ್ಯೋತ್ಸವ ದಿನ ಎಂಇಎಸ್ ಮೊದಲಿನಿಂದಲೂ
ಕರಾಳ ದಿನ ಆಚರಿಸಿಕೊಂಡು ಬರುತ್ತಿದೆ.
ಈ ವರ್ಷವೇನೂ ಹೊಸತಲ್ಲ.
ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾದರೆ ಎಂಇಎಸ್ ಮುಖಂಡರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಹಿಂದೆ
ಆದ ನಿಯಮ ಉಲ್ಲಂಘನೆ ಬಗ್ಗೆಯೂ
ಪರಿಶೀಲನೆ ನಡೆಸಲಾಗುವುದು ಎಂದರು.