ಲೋಕದರ್ಶನ ವರದಿ
ಚಿಂಚಲಿ 19: ನೆರೆ ಸಂತ್ರಸ್ತರಿಗೆ ನೆರೆವಿಗೆ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಗಂಜಿ ಕೇಂದ್ರಗಳಲ್ಲಿ ಕೇವಲ ಎರಡು ಮುಟ್ಟೆಗಳಷ್ಟು ಅಕ್ಕಿ ನೀಡಿ ಕೈತೊಳೆದುಕೊಂಡು ಬಿಟ್ಟಿದೆ ಹೀಗಾಗಿ ನಿರಾಶ್ರಿತರು ಗಂಜಿ ಕೇಂದ್ರಗಳಲ್ಲಿ ಕಣ್ಣಿರು ಹಾಕುತ್ತಿದ್ದಾರೆ ಅವರುಗಳಿಗೆ ಶಾಸ್ವತ ನೆಲೆ ದೊರಕಿಸಿ ಕೊಡೆಸುವರೆಗೆ ನಾವುಗಳು ಕೃಷ್ಣಾ ನೆರೆ ಸಂತ್ರಸ್ತರ ಸೂಕ್ತವಾದ ಪರಿಹಾರಕ್ಕಾಗಿ ಹೋರಾಟ ನಡೆಸುವುದ್ದಾಗಿ ಕನರ್ಾಟಕ ಯುವ ವೇದಿಕೆಯಿಂದ ರಾಜ್ಯಾಧ್ಯಕ್ಷ ಅನಂತಕುಮಾರ ಬ್ಯಾಕೂಡ ಹೇಳಿದರು.
ಅವರು ಚಿಂಚಲಿ ಪಟ್ಟಣದ ಸಾವಿರಾರು ನೆರೆ ಸಂತ್ರಸ್ತರ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ನಿರಾಶ್ರಿತರೊಂದಿಗೆ ಚಚರ್ಿಸಿ ಸರಕಾರದಿಂದ ಬಂದ ಸೌಲಭ್ಯಗಳ ಬಗ್ಗೆ ವಿಚಾರಿಸಿ ನಂತರ ಜೀವನ ಉಪಯುಕ್ತ ವಸ್ತುಗಳು ಸಂತ್ರಸéರಿಗೆ ನೀಡಿ ಮಾತನಾಡುತ್ತಾ. ಪಟ್ಟಣದ ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ಮಾಧ್ಯಮದವರು ಧಾನ್ಯವನ್ನು ಸಂಗ್ರಹಿಸಿ ಸಂತ್ರಸéರ ನೆರವಿಗೆ ನಿಂತು ಊಟದ ವ್ಯವಸ್ಥೆಯನ್ನು ಕಳೆದ ಹತ್ತು ದಿನಗಳಿಂದ ನಡೆಸಿದ್ದಾರೆ ಆದರೆ ಸಂತ್ರಸ್ತರ ನೆರವಿಗೆ ಮಾತ್ರ ಸರಕಾರ ಯಾವುದೆ ಕ್ರಮ ಕೈಗೊಂಡಿಲ ಮತ್ತು ಅಧಿಕಾರಿಗಳು ಗಂಜಿ ಕೇಂದ್ರಗಳಲ್ಲಿ ಭೇಟಿ ನೀಡಿ ಸಂತ್ರಸ್ತರ ಯೋಗ ಕ್ಷಮಗಳ ಬಗ್ಗೆ ಕಾಳಜಿವಹಿಸಿಲ್ಲವೆಂದು ಹೇಳಿದರು.
ಕೃಷ್ಣಾ ನದಿಯ ನೆರೆಗೆ ಮಹಾರಾಷ್ಟ್ರ ಸರಕಾರವೇ ಕಾರಣ ಕೊಯ್ನ ಡ್ಯಾಂ ನಿಂದ ನೀರು ಬಿಡುವ ಬಗ್ಗೆ ನಮ್ಮ ರಾಜ್ಯ ಸರಕಾರಕ್ಕೆ ಮತ್ತು ಜಿಲ್ಲಾಡಳಿತ ತಾಲೂಕಾ ಆಡಳಿತಕ್ಕೆ ಮುಚ್ಚಿತವಾಗಿ ಯಾವುದೇ ಮಾಹಿತಿ ನೀಡದೆ ನೀರು ಬಿಟ್ಟಿರುವುದರಿಂದ ಮಹಾ ಪ್ರವಾಹ ಬಂದಿದೆ. ಹೇಳಿದರು.
ಕನರ್ಾಟಕ ಯುವ ವೇದಿಕೆ ಅಧ್ಯಕ್ಷರು ಜಿಲ್ಲಾಧಿಕಾರಿ ಮತ್ತು ಚಿಕೋಡಿ ಉಪವಿಭಾಗಧಿಕಾರಿ ಗಳೊಂದಿಗೆ ಮಾತನಾಡಿ ಚಿಂಚಲಿ ಪಟ್ಟಣದ ಕೆಜಿಎಸ್ ಶಾಲೆಯ ಗಂಜಿ ಕೇಂದ್ರದಲ್ಲಿ ಇರುವ ಕುಟುಂಬಗಳ ಪರಿಸ್ಥಿತಿಗಳ ಬಗ್ಗೆ ಮಾತನಾಡಿ ಅವರುಗಳಿಗೆ ಶಾಸ್ವತವಾಗಿ ನೆಲೆ ನೀಡಬೇಕೆಂದು ಮನವಿ ಮಾಡಿಕೊಂಡರು.
ಸಂತ್ರಸ್ತರು ಗಂಜಿ ಕೇಂದ್ರದಲ್ಲಿ ಕಣ್ಣಿರು: ಗಂಜಿ ಕೇಂದ್ರಕ್ಕೆ ಕನರ್ಾಟಕ ಯುವ ವೇದಿಕೆ ರಾಜಾಧ್ಯಕ್ಷರು ಆಗಮಿಸಿದ್ದಾಗ ಅವರು ನಿರಾಶ್ರಿತರ ಮುಂದಿನ ಜೀವನದ ಬಗ್ಗೆ ಕೇಳಿದ್ದಾಗ ನಿರಾಶ್ರಿತರು ಕಣ್ಣಿರು ಹಾಕಿ ಸಾಹೇಬರೆ ನಾಳೆಯಿಂದ ಶಾಲೆಗಳು ಪ್ರಾರಂಭ ಮಾಡುತ್ತಿದ್ದಾರೆ ನಮ್ಮ ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಮಗೆ ಇವರುವುದಕ್ಕೆ ಮನೆವಿಲ್ಲ ಪಾತ್ರೆಗಳು ಇಲ್ಲಾ ನಮ್ಮ ಜೀವನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನಾವುಗಳು ಗಂಜಿ ಕೇಂದ್ರ ಬಿಟು ಹೋದರೆ ಮನೆಯು ಇಲ್ಲದೆ ಜೀವನ ನಡೆಸುವುದ್ದು ಕಷ್ಟದ ಸಂಗತಿ ಹೀಗಾಗಿ ಸಾಯಿವುಂದೆಗತ್ತಿವೆಂದ್ದು ನಿರಾಶ್ರಿತರು ಕುಟುಂಬ ಕಣ್ಣಿರು ಹಾಕಿ ಸಂತ್ರಸ್ತರ ಭೇಟಿ ನೀಡುವುದಕ್ಕೆ ಬಂದವರಿಗೆ ಕೈ ಮೂಗಿದ್ದು ಕಾಲು ಬಿಳುವುದ್ದು ಸವರ್ೆಸಾಮಾನ್ಯವಾಗಿದೆ.
ಈ ಸಂದರ್ಭದಲ್ಲಿ ಕನರ್ಾಟಕ ಯುವ ವೇದಿಕೆ ಬೆಂಗಳೂರು ಜಿಲ್ಲಾಧ್ಯಕ್ಷ ಪುನಿತಗೌಡಾ, ಬೆಳಗಾವಿ ಸಂಘಟನಾ ಕಾರ್ಯದಶರ್ಿ ಈರಣ್ಣ ಜಡತ್ತಿ, ಸುಧೀರ ಸಭಾಜಿ, ಹರೀಶ, ಮಿಲಿಂದ ಸಂಗಣ್ಣವರ, ಸಂತೋಷ ಕಾಂಬಳೆ, ಪರಶುರಾಮ ಸಂಗಣ್ಣವರ, ಅಶೋಕ ಕುಲಗುಡ್ಡೆ. ಹಾಗೂ ಬೆಳಗಾವಿ ಜಿಲ್ಲೆಯ ಕನರ್ಾಟಕ ಯುವ ವೇದಿಕೆ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.