ಲೋಕದರ್ಶನ ವರದಿ
ಬೆಳಗಾವಿ 10: ಶರಣರು ವಿಶ್ವಮೌಲ್ಯಗಳನ್ನೇ ನೀಡಿದರು. ಅವು ಅನುದಿನವು ಜೀವಂತ ಹಾಗೂ ಆದರ್ಶನೀಯವೆಂದು ಮರಾಠ ಮಂಡಳ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ವಿಜಯಲಕ್ಷ್ಮೀ ಪುಟ್ಟಿಯವರು ನುಡಿದರು.
ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಡಿಯಲ್ಲಿ ದಿನಾಂಕ 9.10.2018 ಜರುಗಿದ ಅಮವಾಸೆ ಅನುಭಾವ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು. ಶರಣರು ತಮ್ಮ ವಚನಗಳ ಮೂಲ ವಿಶ್ವಮೌಲ್ಯಗಳನ್ನು ನೀಡಿದ್ದಾರೆ. ಅವು ಎಲ್ಲ ಕಾಲಕ್ಕೂ ಆದರ್ಶನೀಯ ಹಾಗೂ ಅನುಕರಣೀಯವೆನಿಸಿವೆ. ಜಾತಿ ವರ್ಗ ವರ್ಣ ಲಿಂಗಗಳಲ್ಲಿ ಅಸಮಾನತೆಯನ್ನು ತೊಡೆದು ಹಾಕಿ, ಸರ್ವಸಮಾನತೆಯ ಮೌಲ್ಯಗಳನ್ನು ಬಿತ್ತಿದರು. ದಯೆ ಧರ್ಮದ ಮೂಲವೆಂದು, ಧರ್ಮದ ನೆಲೆಗಳನ್ನು ತೋರಿದರು. ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಜಾಗತಿಕ ಸತ್ಯವನ್ನೇ ಉಣಬಡಿಸಿದರು. ಏಕದೇವೋಪಾಸನೆಯನ್ನು ಎತ್ತಿಹಿಡಿದ ಶರಣರು, ದೇವರನ್ನು ಅಂತರಂಗದಲ್ಲಿ ನೆಲೆಸಿದರು. ಹೀಗೆ ಎಲ್ಲ ಕಾಲಕ್ಕೂ ಎಲ್ಲ ಸಮಾಜಕ್ಕೂ ಅನ್ವಯಿಸುವ ದಾರ್ಶನಿಕ ತತ್ತ್ವ ಶರಣರ ವಚನಗಳಲ್ಲಿ ಅಡಗಿರುವುದನ್ನು ನಾವು ಕಾಣಬಹುದು. ಅವುಗಳನ್ನು ನಮ್ಮ ನಿತ್ಯಬದುಕಿಗೆ ಅಳವಡಿಸಿಕೊಳ್ಳುವುದರೊಂದಿಗೆ ಜೀವನವನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾಸಭೆ ಜಿಲ್ಲಾ ಘಟಕ ಅಧ್ಯಕ್ಷರಾದ ವಾಯ್.ಎಸ್.ಪಾಟೀಲ ಅವರು ಶರಣರು ಸರ್ವಸಮಾನತೆಗಾಗಿ ಹೋರಾಡಿದರು. ಅವರದು ಅಂತರಂಗದ ಕ್ರಿಯೆಯಾಗಿತ್ತು. ಸಮಾಜವನ್ನು ಕಟ್ಟುವಲ್ಲಿ ಶ್ರಮಿಸಿದರು. ಮೂಢನಂಬಿಕೆಗಳನ್ನು ಕಟುವಾಡಿ ಖಂಡಿಸಿದರು. ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದರು. ಇಂದು ನಮ್ಮ ಸಮಾಜದಲ್ಲಿ ವ್ಯಾಪಿಸಿಕೊಂಡಿರುವ ಮೂಢನಂಬಿಕೆಗಳನ್ನು ತೊಡಯಬೇಕಾಗಿದೆ. ಯುವಜನಾಂಗದಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಬೇಕಾಗಿದೆ. ಜಿಲ್ಲಾ ಘಟಕವು ಹಲವಾರು ಚಿಂತನಪರವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೌಲಿಕ ಸೇವೆಯನ್ನು ನೀಡುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವವನ್ನು ಆಚರಿಸಿಕೊಂಡ ಲೆಕ್ಕಪರಿಶೋಧಕರಾದ ಶಿವಕುಮಾರ ಸಂಬರಗಿಮಠ ಹಾಗೂ ಭುವನೇಶ್ವರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಹುಂಡೇಕರ್ ಹಾಗೂ ಸ್ಕೇಟಿಂಗ್ ಪಟುಗಳನ್ನು ಜಿಲ್ಲಾ ಘಟಕದ ವತಿಯಿಂದ ಸತ್ಕರಿಸಲಾಯಿತು.
ಜಿಲ್ಲಾ ಘಟಕದ ಕಾರ್ಯದಶರ್ಿ ಸೋಮಲಿಂಗ ಮಾವಿನಕಟ್ಟಿ ಸ್ವಾಗತಿಸಿದರು. ಡಾ.ಗುರುದೇವಿ ಹುಲೆಪ್ಪನವರಮಠ ಹಾಗೂ ಜ್ಯೋತಿ ಭಾವಿಕಟ್ಟಿ ಅತಿಥಿಗಳನ್ನು ಪರಿಚಯಿಸಿದರು. ರಾಯಾಜಿ, ಚೊಣ್ಣದ ಹಾಗೂ ನಯನಾ ಗಿರಿಗೌಡರ ಪ್ರಾಥರ್ಿಸಿದರು. ಸರ್ವಮಂಗಳಾ ಅರಳೀಮಟ್ಟಿ ನಿರೂಪಿಸಿದರು. ಆರ್.ಪಿ.ಪಾಟೀಲ ವಂದಿಸಿದರು.