ಸ್ವಚ್ಛ ಸವರ್ೇಕ್ಷಣಾ ರಥಯಾತ್ರೆಗೆ ವೀಣಾ ಕಾಶಪ್ಪನವರ ಚಾಲನೆ


ಬಾಗಲಕೋಟೆ 07: ಸ್ಚಚ್ಛ ಭಾರತ ಮಿಷನ್ ಯೋಜನೆಯಡಿ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಆಗಷ್ಟ 8 ರಿಂದ 23 ರವರೆಗೆ ಹಮ್ಮಿಕೊಂಡ ಸ್ವಚ್ಛ ಸವರ್ೇಕ್ಷಣಾ ಗ್ರಾಮೀಣ ರಥಯಾತ್ರೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಂಗಳವಾರ ಚಾಲನೆ ನೀಡಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಸ್ವಚ್ಛ ಸವರ್ೇಕ್ಷಣಾ ಗ್ರಾಮೀಣ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ನಾಗರಿಕರು ಸ್ವಚ್ಛ ಭಾರತ ಮೀಷನ್ ಅಭಿಯಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಸ್ವಚ್ಛತೆಯ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಇನ್ನುಳಿದ ಸಾರ್ವಜನಿಕರಿಗೆ ಅದರ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದರು. 

ಸಾರ್ವಜನಿಕ ಸ್ಥಳಗಳ ಸಮೀಕ್ಷೆ, ಸಮೂದಾಯದಲ್ಲಿ ಸ್ವಚ್ಛತೆಯ ದೃಷ್ಠಿಕೋನ, ಗ್ರಾಮಗಳ ಘೋಷಣೆ ಮತ್ತು ಪರಿಶೀಲನೆ ಹಾಗೂ ಆಯಾ ಗ್ರಾಮದ ಪ್ರಗತಿ ಮತ್ತು ನೈರ್ಮಲ್ಯದ ಕುರಿತು ಸಭೆ ನಡೆಸುವುದು, ಉತ್ತಮ ಕಾರ್ಯ ನಿರ್ವಹಿಸಿದ ಜಿಲ್ಲೆ ಮತ್ತು ರಾಜ್ಯಗಳಿಗೆ ಶ್ರೇಯಾಂಕಗಳನ್ನು ಕೇಂದ್ರ ಸರಕಾರ ನೀಡಿದ್ದು, ಬರುವ ಅಕ್ಟೋಬರ 2 ರಂದು ಅಂತಹ ಉತ್ತಮ ಕಾರ್ಯನಿರ್ವಹಿಸಿದ ರಾಜ್ಯ ಮತ್ತು ಜಿಲ್ಲೆಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 2,28,504 ಗ್ರಾಮೀಣ ಪ್ರದೇಶದ ಕುಟುಂಬಗಳಿದ್ದು, ಇಲ್ಲಿಯವರೆಗೆ 2,00,390 ವೈಯಕ್ತಿಕ ಶೌಚಾಲಯ ನಿಮರ್ಾಣ ಮಾಡಲಾಗಿದ್ದು, ಇನ್ನುಳಿದ 28,114 ಕುಟುಂಬಗಳಿಗೆ 2ನೇ ಅಕ್ಟೋಬರ-2018 ರೊಳಗೆ ಶೌಚಾಲಯಗಳನ್ನು ನಿಮರ್ಾಣ ಮಾಡಿ ಜಿಲ್ಲೆಯನ್ನು ಬಯಲು ಬಹಿದರ್ೆಸೆ ಮುಕ್ತ ಎಂದು ಘೋಷಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಗಲಕೋಟೆ ಶಾಸಕ ಡಾ.ವೀರಣ್ಣ ಚರಂತಿಮಠ, ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾ.ಪಂ ಅದ್ಯಕ್ಷ ಚನ್ನನಗೌಡರ ಪರನಗೌಡರ, ಜಿ.ಪಂ ಸದಸ್ಯರಾದ ಸುಜಾತಾ ಸಿಂಗಾಡಿ ಸೇರಿದಂತೆ ಇತರೆ ಜಿ.ಪಂ ಸದಸ್ಯರು, ಜಿ.ಪಂ ಉಪಕಾರ್ಯದಶರ್ಿ ಅಮರೇಶ ನಾಯಕ, ಜಿ.ಪಂ ಯೋಜನಾ ನಿದರ್ೇಶಕ ಎಸ್.ಎಸ್.ಹಿರೇಮಠ, ಕೃಷಿ ಸಹಾಯಕ ನಿದರ್ೇಶಕ ಪವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ರಥಯಾತ್ರೆ ಆಗಸ್ಟ 8 ರಂದು ನೀರಲಕೇರಿ, 9 ರಂದು ನೀಲಾನಗರ ಶಿರೂರ, 10 ರಂದು ಬೆನಕಟ್ಟಿ, ಹಳ್ಳೂರ, 11 ರಂದು ಬೇವೂರ, ಸುತಗುಂಡಾರ, 12 ರಂದು ನಾಯನೇಗಲಿ, ಚಿಕ್ಕಮ್ಯಾಗೇರಿ, 13 ರಂದು ಹೊಸೂರ, ರಾಂಪೂರ, 14 ರಂದು ತಿಮ್ಮಾಪೂರ, ಹಿರೇಗುಳಬಾಳ, 15 ರಂದು ಬೆಣ್ಣೂರ, ಕಡ್ಲಿಮಟ್ಟಿ, 16 ರಂದು ಬಿಲಕೆರೂರ, ಮುಗಳೊಳ್ಳಿ, 17 ರಂದು ಭಗವತಿ, ಬೇವಿನಮಟ್ಟಿ ಎಸ್.ಎಚ್, 18 ರಂದು ಶಿಗಿಕೇರಿ, ಯಡಹಳ್ಳಿ, 19 ರಂದು ಕದಾಂಪೂರಮ ಮುರನಾಳ, 20 ರಂದು ಗದ್ದನಕೇರಿ, ಸೀಮಿಕೇರಿ, 21 ರಂದು ತುಳಸಿಗೇರಿ, ದೇವನಾಳ, 22 ರಂದು ಚಿಕ್ಕಶೆಲ್ಲಿಕೇರಿ, ಕಲಾದಗಿ ಹಾಗೂ 23 ರಂದು ಖಜ್ಜಿಡೋಣಿ ಗ್ರಾಮಗಳಲ್ಲಿ ಸಂಚರಿಸಲಿದೆ.