ಕೊಪದಟ್ಟಿಯಲ್ಲಿ ವೇಮನ ಜಯಂತಿ ಆಚರಣೆ

ಮೂಡಲಗಿ 19: ತಾಲೂಕಿನ ಕೊಪದಟ್ಟಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ತತ್ವಜ್ಞಾನಿ, ದಾರ್ಶನಿಕ ಕವಿ ಮಹಾಯೋಗಿ ಮೇಮನರ 608 ನೇ ಜಯಂತ್ಯೋತ್ಸವನ್ನು ಆಚರಿಸಲ್ಲಾಯಿತು. ವೇಮನರ ಭಾವಚಿತ್ರಕ್ಕೆ ನಾಗಪ್ಪಜ್ಜ ಹುಬ್ಬಳ್ಳಿ ಮತ್ತು ಆಚಾರ್ಯ ಜೋಶಿ ಅವರು ಪೂಜೆ ಸಲ್ಲಿಸಿದರು. 

  ಕಾರ್ಯಕ್ರಮದಲ್ಲಿ ಯಾದವಾಡ ರಡ್ಡಿ ಜನಸಂಘದ ಅಧ್ಯಕ್ಷ ಲಕ್ಷ್ಮಣ ಹುಲಕುಂದ, ನಿಂಗನಗೌಡ ಪಾಟೀಲ, ಜಗದೀಶ ಹುಲಕುಂದಮಂಜು ಉದಪುಡಿ, ಕಲ್ಲಪ್ಪ ಲಕ್ಷಾಣಿ, ಹರೀಶ ಪಾಟೀಲ, ಸುರೇಶ ಗುಲಗಾಜಂಬಗಿ, ಯುವ ಜಾಗೃತಿ ಜಿಲ್ಲಾ ಸಂವಾಲಕ ವೀರಣ್ಣಾ ಮೋಡಿ, ಯಾದವಾಡ-ಕೊಪದಟ್ಟಿ ಗ್ರಾಮದ ರಡ್ಡಿ ಸಮಾಜದ ಮುಖಂಡರು ಮತ್ತಿತರು ಇದ್ದರು.